ಸತ್ಯ ಹೇಳಿದ್ದೇ ಅಪರಾಧನಾ? ನಾನು ಸಿದ್ಧರಾಮಯ್ಯ ಕಾಂಗ್ರೆಸ್​ನಲ್ಲಿಲ್ಲ! ಮತ್ತೆ ಸಿದ್ಧು ವಿರುದ್ಧ ಗುಡುಗಿದ ರೋಷನ್ ಬೇಗ್​!!

ಪಕ್ಷವಿರೋಧಿ ಚಟುವಟಿಕೆ ಆರೋಪದ ಮೇಲೆ ಕಾಂಗ್ರೆಸ್​ನಿಂದ ಅಮಾನತ್ತಾಗಿರುವ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ರೋಷನ್ ಬೇಗ್​ ಅಮಾನತ್ತಿನ ಬಳಿಕವೂ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.

ad


ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ರೋಷನ್ ಬೇಗ್, ನಾನು ಸಿದ್ಧರಾಮಯ್ಯನವರ ಕಾಂಗ್ರೆಸ್​ನಲ್ಲಿ ಇಂಡಿಯನ್ ನ್ಯಾಷನಲ್​ ಕಾಂಗ್ರೆಸ್​ನಲ್ಲಿ ಇದ್ದೇನೆ. ರಮೇಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲವೇ? ಅವರ ವಿರುದ್ಧ ಕ್ರಮ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.


ಅಲ್ಲದೇ, ಮಂಡ್ಯ, ಕೋಲಾರದಲ್ಲಿ ಪಕ್ಷಕ್ಕೆ ಕೈಕೊಟ್ಟವರ ಮೇಲೆ ಯಾಕೆ ಕ್ರಮವಿಲ್ಲ. ತುಮಕೂರಿನಲ್ಲಿ ದೇವೆಗೌಡರನ್ನು ಸೋಲಿಸಿದ್ದು ಯಾರು? ಸಿದ್ಧುಗೆ ಬಾದಾಮಿಯಲ್ಲಿ ಯಾಕೆ ಲೀಡ್ ಸಿಕ್ಕಿತು? ನಾನು ಸತ್ಯ ಹೇಳಿದ್ದೇ ಅಪರಾಧವಾಯ್ತಾ? ಸತ್ಯ ಹೇಳೋದು ತಪ್ಪಾ ಎಂದು ರೋಷನ್ ಬೇಗ್ ಪ್ರಶ್ನಿಸಿದ್ದಾರೆ.


ಲೋಕಸಭೆ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿ ನಾನು ಕಾಂಗ್ರೆಸ್​ಗೆ 14 ಸಾವಿರ ಲೀಡ್​ ಕೊಡಸಿದ್ದೇನೆ. ಆದರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕ್ಷೇತ್ರದಲ್ಲೇ ಬಿಜೆಪಿ ಭಾರಿ ಲೀಡ್ ಪಡೆದಿದೆ. ಇದರ ಬಗ್ಗೆ ಯಾರು ಯಾಕೆ ಮಾತಾಡಲ್ಲ ಎಂದು ಬೇಗ್ ಗುಡುಗಿದ್ದಾರೆ.


ಅಲ್ಲದೇ ನಾನು ‘ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ ಎಂದಿರುವ ಬೇಗ್​, ‘ನಾನು ರಾಹುಲ್​ ಗಾಂಧಿ ಬಗ್ಗೆ ಮಾತನಾಡಿಲ್ಲ’ ಈಗ ನಾನು ನನ್ನ ನಾಯಕರಾದ ಖರ್ಗೆರನ್ನ ಭೇಟಿ ಮಾಡ್ತೀನಿ. ನಮ್ಮ ಹೈಕಮಾಂಡ್​ನ ನಾಯಕರನ್ನ ಭೇಟಿ ಮಾಡ್ತೀನಿ. ಇನ್ಯಾವುದೇ ವಿಚಾರದ ಬಗ್ಗೆ ಈಗ ಮಾತಾಡೋದಿಲ್ಲ ಎಂದು ಬೇಗ್​ ಪ್ರತಿಕ್ರಿಯಿಸಿದ್ದಾರೆ.