ಸಲ್ಮಾನ್​ ಖಾನ್​ಗೆ ವಯಸ್ಸಾಯ್ತಾ? ಬ್ಯಾಡ್​ ಬಾಯ್​ ವೈಟ್​ ಹೇರ್​​ ಪೋಟೋ ಹೇಳ್ತಿರೋ ಕತೆಯೇನು?!

ಬ್ಯಾಡ್ ಬಾಯ್ ಸಲ್ಮಾನ್ ಖಾನ್​ ಅಂದ್ರೆ ಇಂದಿಗೂ ಬಿಟೌನ್​ನಲ್ಲಿ ಒಂದು ಕ್ರೇಜ್ ಇದೆ. ಅಷ್ಟೇ ಫ್ಯಾನ್ ಫಾಲಾಯೋರ್ಸ್ ಕೂಡ ಇದೆ. ಬಾಲಿವುಡ್​ನಲ್ಲಿ ಮೋಸ್ಟ್ ಬ್ಯಾಚುಲರ್ ಬಾಯ್ ಅಂತಾ ಫೇಮಸ್ ಆಗಿರೋ ಸಲ್ಮಾನ್​ಗೆ ಏಜ್​ ಬಗ್ಗೆ ಈಗ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ಯಾಕೀಗ ಸಲ್ಲು ಏಜ್ ಬಗ್ಗೆ ಈ ಪಾಟಿ ಡಿಸ್​​​​​​​​​​ ಕಸ್ ನಡೆಯುತ್ತಿದೆ ಅಂದ್ರ ಅದನ್ನ ನಾವ್ ಹೇಳ್ತೀವಿ ಜಸ್ಟ್ ಫಾಲೋ ಮೀ.

ad

ಯಸ್​, ಸಲ್ಲು ಮೇನಿಯಾ ಅಂದ್ರೇನೆ ಆಗೇ. ಆತನ ಆ್ಯಕ್ಟಿಂಗ್​, ಲುಕ್​, ಸ್ಟೈಲ್​ಗೇನೆ ನಮ್ಮ ಹದಿಹರೆಯದ ಯುವತಿಯರು ಫಿದಾ ಆಗ್ತಾರೆ. ಸಲ್ಲು ಸಿನಿಮಾ ನೋಡೋದಕ್ಕೆ ಅಂತಾ ತುದಿಗಾಲಲ್ಲಿ ನಿಂತು ವೇಟ್ ಮಾಡ್ತಿರ್ತಾರೆಸಲ್ಮಾನ್​ ಸಿನಿಮಾಗಳು ಕೂಡ ಸಖತ್​ ಸ್ಟೈಲೀಶ್​ ಆಗಿರುತ್ತೆ, ಸಿನಿಮಾದುದಕ್ಕೂ ಭಾಯಿಜಾನ್​ ಮಿರ ಮಿರ ಮಿಂಚ್ತಾ ಇರ್ತಾರೆ… ಸಿಕ್ಸ್​​ಪ್ಯಾಕ್​ ಜೊತೆ ಹುರಿಗಟ್ಟಿಸಿದಬಾಡಿ ದರ್ಶನ, ಬಿಲ್ಡಪ್​​ ಎಲ್ಲಾ ಇದ್ದೇ ಇರುತ್ತೆ. ಒಟನ್ಲ್ಲಿ ಸಲ್ಮಾನ್​ನ ಸಖತ್​ ಸ್ಟೈಲೀಶ್​ ಆಗಿ ತೋರಿಸಲಾಗುತ್ತೆ.

ಸಲ್ಮಾನ್​ ಅಂದತಕ್ಷಣ ಕಣ್ಮುಂದೆ ಬರೋದು ಸಿಕ್ಸ್​ಪ್ಯಾಕ್​ ಬಾಡಿ.. ಕ್ಲೀನ್​​​ ಶೇವ್​ ಫೇಸ್​. ವಯಸ್ಸು 50 ದಾಟಿದ್ರೂ ಕೂಡ ಬಾಲಿವುಡ್​ ಭಾಯಿಜಾನ್​ ಯಂಗ್​ ಆ್ಯಂಡ್​ ಎನರ್ಜಿಟಿಕ್​ ಆಗಿ ಕಾಣಿಸೋ ಹೀರೋ. ಇಂಥ ಸಲ್ಲಾನ್​ ಮುಖದಲ್ಲಿ ಈಗ ಇದ್ದಕ್ಕಿದ್ದಂತೆ ಮುದಿತನದ ಗೆರೆ ಕಾಣಿಸಿದೆ. ಗಡ್ಡ, ಹೇರ್​ ವೈಟ್​ ಆಗಿದೆ. ಇದನ್ನು ನೋಡಿ ಬಾಲಿವುಡ್​ ಕೂಡ ಶಾಕ್​ ಆಗಿದೆ.

ಅಂದಹಾಗೆ ಸಲ್ಮಾನ್​​ ಹೊಸ ಅವತಾರ ಎತ್ತಿರೋದು ಸಲ್ಮಾನ್ ಖಾನ್ ಅಭಿನಯದ ಈ ವರ್ಷದ ಮೋಸ್ಟ್ ಎಕ್ಸಪೆಕ್ಟಡ್ ಸಿನಿಮಾ ಭಾರತ್​ಗೆ. ರಿಯಲ್ ಸ್ಟೋರಿ ಆಧರಿಸಿ ರೆಡಿಯಾಗ್ತಿರೋ ಭಾರತ್ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್​​​ನಲ್ಲಿ ಸ್ಪೈಕ್ ಮಾಡಿಸಿರೋ ಬಿಳಿ ಕೂದಲು, ಕಪ್ಪು ಕನ್ನಡಕ ಧರಿಸಿ, ಉದ್ದನೆಯ ಮೀಸೆ, ಗುರುಚಲು ಗಡ್ಡ ಬಿಟ್ಟಿರೋ ಸಲ್ಲು ಸಾಲ್ಟ್ ಅಂಡ್ ಪೆಪ್ಪರ್ ಲುಕ್​​ನಲ್ಲಿ ಕಾಣಿಸಿದ್ದಾರೆ.

ಸಲ್ಮಾನ್ ಖಾನ್ ಈ ಪೋಸ್ಟರ್​ನ್ನ ತಮ್ಮ ಟ್ವಿಟರ್ ಹಾಗೂ ಇನ್​ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಪೋಸ್ಟರ್ ಕೆಳಗೆ ಒಂದು ಡೈಲಾಂಗ್ ಕೂಡ ರಿವೀಲ್ ಮಾಡಿದ್ದಾರೆ. ನನ್ನ ತಲೆ, ಗಡ್ಡದಲ್ಲಿ ಎಷ್ಟು ಬಿಳಿ ಕೂದಲಿದೆ ಅನ್ನೋದು ಲೆಕ್ಕಕ್ಕೆ ಬರೋದಿಲ್ಲ. ಅವು ಎಷ್ಟು ಶೈನ್ ಆಗಿದೆ ಅನ್ನೋದೆ ಜೀವನ ಅಂತಾ ಬರೆದುಕೊಂಡಿದ್ದಾರೆ.. ಈ ಲುಕ್ ಹಾಗೂ ಡೈಲಾಂಗ್​ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಅಂದಹಾಗೇ ಭರತ್ ಸಿನಿಮಾ ಕೊರಿಯನ್ ಭಾಷೆಯ ಓಡ್ ಟು ಮೈ ಫಾದರ್ ಚಿತ್ರದ ರಿಮೇಕ್​. ಟೈಗರ್ ಜಿಂದಾಹೇ ಚಿತ್ರ ಕಥೆ ಹೇಳಿ ಗೆದ್ದಿರೋ ಆಲಿ ಅಬ್ಬರ್ ಜಾಫರ್ ಖಾನ್​ ಈ ಚಿತ್ರಕ್ಕೂ ನಿರ್ದೇಶನ ಮಾಡ್ತಿದ್ದಾರೆ. ಸಿನಿಮಾದಲ್ಲಿ ಸಲ್ಲು ಜೊತೆ ಕತ್ರಿನಾ ಡ್ಯುಯೇಟ್ಆಡಲಿದ್ದಾರೆ. ಅದೇನೆ ಇರಲಿ ವಯಸ್ಸಾದ ಸಲ್ಲು ಮೇನಿಯಾ ನೀವ್ ಬಿಗ್​ ಸ್ಕ್ರೀನ್​ನಲ್ಲಿ ನೋಡ್ಬೇಕು ಅಂದ್ರೆ ಜೂನ್ 5ರವರಗೂ ವೇಟ್ ಮಾಡ್ಬೇಕು..