ಅಮಿತಾಬ್ ಬಚ್ಚನ್​ ​ ಟ್ವೀಟರ್​​ ​ ಹ್ಯಾಕ್​! ಬಿಗ್​ ಬಿ ಟ್ವೀಟರ್​ ಮೂಲಕ ಎಚ್ಚರಿಕೆ ಸಂದೇಶ ನೀಡಿದ ಹ್ಯಾಕರ್ಸ್​!!

ರಾತ್ರಿ ಬೆಳಗಾಗೋದರಲ್ಲಿ ಬಾಲಿವುಡ್​ ಬಿಗ್​ ಬಿ ಅಮಿತಾಬ್ ಬಚ್ಚನ್​ ವಿವಾದಕ್ಕೆ ಗುರಿಯಾಗಿದ್ದಾರೆ. ಅಂತಹದ್ದೇನಾಯ್ತು ಅಂದುಕೊಂಡ್ರಾ ಬಿಗ್ ಬಿ ತಮ್ಮ ಟ್ವೀಟರ್​ ಖಾತೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್​ ಪೋಟೋವನ್ನು ಅಪ್​ಲೋಡ್​ ಮಾಡಿದ್ದಾರೆ.


ಅದ್ಯಾಕೆ ಅಮಿತಾಬ್ ಬಚ್ಚನ್​ ಇಮ್ರಾನ್ ಖಾನ್ ಪೋಟೋ ಹಾಕ್ಕೊಂಡ್ರು ಅನ್ನೋ ಅನುಮಾನ ಕಾಡ್ತಿದ್ಯಾ? ಇದು ಅಮಿತಾಬ್ ಕೈಚಳಕವಲ್ಲ. ಬದಲಾಗಿ ಬಾಲಿವುಡ್​ ಬಿಗ್​​ ಬಿ ಅಮಿತಾಬ್ ಬಚ್ಚನ್​​ರ ಟ್ವಿಟ್ಟರ್​ ಖಾತೆಯನ್ನು ಆಯಿಲ್‌ದಿಶ್‌ ಟಿಮ್ ತುರ್ಕಿಶ್ ಸೈಬರ್ ಆರ್ಮಿ ಎಂಬ ಉಗ್ರ ಸಂಘಟನೆ ಹ್ಯಾಕ್ ಮಾಡಿದೆ.


ಟ್ವೀಟರ್ ಖಾತೆಯನ್ನು ​ ಹ್ಯಾಕ್​ ಮಾಡಿದ್ದಲ್ದೇ, ಬಿಗ್​ ಬಿ ಪ್ರೊಫೆಲ್​​ ಫೋಟೋ ತೆಗೆದು ಪಾಕ್​​ ಪ್ರಧಾನಿ ಇಮ್ರಾನ್​ ಖಾನ್ ಫೋಟೋವನ್ನು ಅಪ್​​ಲೋಡ್​ ಮಾಡಿದ್ದಾರೆ.ಅಲ್ದೇ,​ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಹಾಗೂ ಮೋದಿ ಥ್ಯಾಂಕ್​ ಹೇಳ್ತಿರೋ ಫೋಟೋಗಳನ್ನು ಕಿರಾತಕರು ಫೋಸ್ಟ್​ ಮಾಡಿದ್ದಾರೆ.


ಅಲ್ಲದೇ ಟ್ವೀಟರ್​ನಲ್ಲಿ ಇದು ಇಡೀಯ ಪ್ರಪಂಚಕ್ಕೆ ಎಚ್ಚರಿಕೆ ಸಂದೇಶ, ಐಸ್‌ಲೆಂಡ್ ರಿಪಬ್ಲಿಕ್ಸ್‌ ತುರ್ಕಿಶ್ ಫುಟ್‌ಬಾಲರ್‌ಗಳ ಜೊತೆ ಅಗೌರವದಿಂದ ನಡೆದುಕೊಂಡಿರುವುದನ್ನು ನಾವು ಖಂಡಿಸುತ್ತೇವೆ, ನಾವು ಮೃದುವಾಗಿ ಮಾತನಾಡುತ್ತೇವೆ, ಆದರೆ ಜೊತೆಯಲ್ಲಿ ಸದಾ ದೊಣ್ಣೆ ಇಟ್ಟುಕೊಂಡು ಓಡಾಡುತ್ತೇವೆ, ದೊಡ್ಡ ಸೈಬರ್ ಹ್ಯಾಕ್ ಬಗ್ಗೆ ಮುನ್ನೆಚ್ಚರಿಕೆಯಾಗಿ ಈ ಹ್ಯಾಕ್ ಮಾಡಿ ಸಂದೇಶ ನೀಡಿದ್ದೇವೆ ಎಂದು ಹ್ಯಾಕರ್‌ಗಳು ಎಚ್ಚರಿಕೆ ನೀಡಿದ್ದಾರೆ.


ಟ್ವಿಟರ್​ ಅಕೌಂಟ್​​​​​ ಹ್ಯಾಕ್​ ಆಗಿರೋ ಬಗ್ಗೆ ತಿಳಿದ ಬಚ್ಚನ್​​ ಕೂಡಲೇ ಮುಂಬೈ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳ ಸುಳಿಗೆ ಬಲೆ ಬೀಸಿದ್ದಾರೆ.

ಟ್​