ವಿಶ್ವಾಸಮತ ಯಾಚನೆಗೂ ಸಿದ್ಧ! ಅಧಿವೇಶನದಲ್ಲಿ ಹೊಸಬಾಂಬ್​ ಸಿಡಿಸಿದ ಸಿಎಂ ಕುಮಾರಸ್ವಾಮಿ!!

ಸಾಲು ಸಾಲು ಶಾಸಕರ ರಾಜೀನಾಮೆ ಹಾಗೂ ಸಚಿವರ ಪದತ್ಯಾಗದಿಂದ ಕಂಗೆಟ್ಟ ಸಿಎಂ ಕುಮಾರಸ್ವಾಮಿ ಸದನದಲ್ಲಿ ದಿಟ್ಟ ನಡೆ ಪ್ರದರ್ಶಿಸಿದ್ದು, ಅಗತ್ಯ ಬಿದ್ದರೇ ಸದನದಲ್ಲಿ ಸ್ವಯಂ ಪ್ರೇರಣೆಯಿಂದ ವಿಶ್ವಾಸಮತ ಯಾಚನೆ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ.

ad


ಇಂದಿನಿಂದ ಆರಂಭವಾದ ಅಧಿವೇಶನದಲ್ಲಿ ನಿಧನರಾದ ಗಣ್ಯರಾದ ಸಂತಾಪ ಸೂಚಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಶ್ವಾಸಮತ ಯಾಚನೆ ಮಂಡನೆ ಮಾಡಲು ಸಿದ್ಧವಿದ್ದೇನೆ. ಇದಕ್ಕಾಗಿ ಸಮಯಾವಕಾಶ ಕೋರಿದ್ದೇನೆ ಎಂದರು.


ಜುಲೈ 6 ರಿಂದ ಆರಂಭವಾದ ರಾಜೀನಾಮೆ ಪರ್ವ ಜುಲೈ 11 ರವರೆಗೂ ನಡೆದಿದ್ದು, ಸಧ್ಯ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಬಲ ಕುಸಿದಿದೆ. ಒಟ್ಟು ಸದಸ್ಯ ಬಲ 224, ಮ್ಯಾಜಿಕ್ ನಂಬರ್ 113. ಜೆಡಿಎಸ್​ ಮತ್ತು ಕಾಂಗ್ರೆಸ್​ ಸೇರಿ 118 ಇದ್ದ ಶಾಸಕ ಬಲ ರಾಜೀನಾಮೆಯಿಂದ ಕುಸಿದಿದೆ.


ಹೀಗಾಗಿ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ಮುಂಧಾಗಿದ್ದು, ಯಾವಾಗ ವಿಶ್ವಾಸಮತ ಯಾಚಿಸಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಇದುವರೆಗೂ ಸಿಎಂ ಲಿಖಿತವಾಗಿ ಸ್ಪೀಕರ್​ಗೆ ವಿಶ್ವಾಸಮತಯಾಚನೆಗೆ ಪತ್ರ ನೀಡಿಲ್ಲ. ಮೌಖಿಕವಾಗಿ ವಿಶ್ವಾಸಮತ ಕೋರಲು ಸಿದ್ಧ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ನಿಜವಾಗಿಯೂ ವಿಶ್ವಾಸಮತ ಯಾಚಿಸುತ್ತಾರಾ? ವಿಪ್​ ಜಾರಿಯಾಗಿರುವ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಅತೃಪ್ತರು ಯಾವ ರೀತಿ ಕಾರ್ಯ ನಿರ್ವಹಿಸಲಿದ್ದಾರೆ ಎಂಬುದು ಸಧ್ಯದ ಕುತೂಹಲ.