ಯುವರತ್ನನಿಗೆ ಸಾಥ್ ನೀಡಲಿದ್ದಾರಾ ಕಾನ್ಸ್​ಟೇಬಲ್ ಸರೋಜ..??

‘ಟಗರು’ ಸಿನಿಮಾ ಮೂಲಕ ಕಾನ್ಸ್ ಟೇಬಲ್ ಸರೋಜ ಆಗಿ ಹೊರ ಹೊಮ್ಮಿದ ಸರೋಜ ಖ್ಯಾತಿಯ ನಟಿ ತ್ರಿವೇಣಿ ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುವ ನಟಿ. ಮೊನ್ನೆಯಷ್ಟೆ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಸಿನಿಮಾ ಶೂಟಿಂಗ್ ವೇಳೆ ಮೈ ಮೇಲೆ ದೆವ್ವ ಬಂದವರ ಹಾಗೆ ಆಡಿ ಸುದ್ದಿ ಮಾಡಿದ್ದ ಸರೋಜ ಇದೀಗಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ “ಯುವರತ್ನ” ಸಿನಿಮಾದ ಚಿತ್ರೀಕರಣದ ಸೆಟ್​ಗೆ ಭೇಟಿ ನೀಡಿ ಪುನೀತ್ ರಾಜ್​ಕುಮಾರ ಜೊತೆ ಪೋಟೋ ಕ್ಲಿಕ್ಕಿಸಿ ಕೊಂಡಿದ್ದು ಇದೀಗಾ ಈ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್​ ಆಗುತ್ತಿವೆ.

ಒಟ್ಟಾರೆ ಡಾಲಿಯ ಡಾರ್ಲಿಂಗ್ ಸರೋಜ ಯುವರತ್ನ ಸಿನಿಮಾದಲ್ಲಿ ಅಭಿನಯಿಸುತ್ತಾರ ಎನ್ನುವ ಕ್ಯೂರಿಯಾಸಿಟಿ ಪುನೀತ್ ಅಭಿಮಾನಿಗಳಲ್ಲಿ ಮೂಡಿದ್ದು ಇದಕ್ಕೆ ಪೂರಕ ಎಂಬಂತೆ ಸರೋಜ ‘ಯುವರತ್ನ’ ಚಿತ್ರದಲ್ಲಿ ನನ್ನ ಪಾತ್ರಕ್ಕಾಗಿ ಕಾಯುತ್ತಿದ್ದೇನೆ’ ಎಂದು ಬರೆದುಕೊಂಡಿರುವದರಿಂದ ಚಿತ್ರದಲ್ಲಿ ಅಭಿನಯಿಸುವ ಸುಳಿವು ಕೂಡ ನೀಡಿದ್ದಾರೆ.

 

ಚಿತ್ರದಲ್ಲಿ ತ್ರಿವೇಣಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಅಲ್ಲದೆ ಈ ಚಿತ್ರದಲ್ಲಿ ಡಾಲಿ ಧನಂಜಯ್ ಕೂಡ ಪ್ರಮುಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಈ ಚಿತ್ರದಲ್ಲೂ ಡಾಲಿಗೆ, ಸರೋಜ ಜೋಡಿ ಆಗ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಕೊಂಚ ಹೆಚ್ಚಾಗಿದೆ.

 

ಯುವರತ್ನ ಸಿನಿಮಾ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು ಚಿತ್ರದಲ್ಲಿ ಪುನೀತ್​ಗೆ ಹಿಂದಿ, ತಮಿಳು, ತೆಲುಗು ಸೇರಿದಂತೆ ಹಲವು ಸಿನಿಮಾಗಳಲ್ಲಿ ತನ್ನದೇ ಆದ ಗುರುತು ಮಾಡಿಕೊಂಡಿರುವ ನಟಿ ಆಯೇಷಾ ಸೈಗಲ್ ಸಾಥ್ ನೀಡಲಿದ್ದಾರೆ. ಅಲ್ಲದೆ ಯುವರತ್ನ ಸಿನಿಮಾ ಉತ್ತಮ ತಾರಾ ಬಳಗವನ್ನು ಹೊಂದಿದ್ದು ರಾಧಿಕಾ ಶರತ್ ಕುಮಾರ್, ವಸಿಷ್ಠ ಸಿಂಹ, ಅರು ಗೌಡ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚುತ್ತಿದ್ದಾರೆ.

ಸಧ್ಯ ಇದೀಗಾ ಯುವರತ್ನ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದ್ದು, ‘ಚಿತ್ರದ ಬಗ್ಗೆ ಸಖತ್ ಎಕ್ಸಾಯ್ಟ್ ಆಗಿರುವ ಸರೋಜ ಸಧ್ಯದಲ್ಲೇ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ