ಭೀಕರ ಸರಣಿ ಅಫಘಾತ -ಮೂವರು ಸ್ಥಳದಲ್ಲೇ ದುರ್ಮರಣ!!!

ಇತ್ತೀಚ್ಚಿನ ದಿನಗಳಲ್ಲಿ ಸರಣಿ ಅಫಘಾತಗಳ ಸಂಖ್ಯೆ ಹೆಚ್ಚುತ್ತಿದೆ .ಇದರ ಪರಿಣಾಮ ಹಲವು ಜೀವವನ್ನು ಅನ್ಯಾಯವಾಗಿ ಕಳೆದುಕೊಳ್ಳುವಂತಾಗುತ್ತಿದೆ.ಇನ್ನು ಇದೇ ವೇಳೆ ಭೀಕರ ಸರಣಿ ಅಫಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಅಲ್ಲದೆ ಮೃತರೆಲ್ಲರೂ ಗೋಕರ್ಣ ಪ್ರವಾಸಕ್ಕೆ ತೆರಳಿ ವಾಪಸ್ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ad

ಜೆಎಂಐಟಿ ಸರ್ಕಲ್​​ನಲ್ಲಿ ಕೆಟ್ಟು ನಿಂತಿದ್ದ ಟಿಟಿ ವಾಹನಕ್ಕೆ ಲಾರಿ ಹಾಗೂ ಎರಡು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಬೆಂಗಳೂರು ಮೂಲದ ಮೂವರು ಸ್ಥಳದಲ್ಲೆ ಮೃತ ಪಟ್ಟಿದ್ದು, ಮೃತರು ಕಾರ್ತಿಕ್ (28), , ಶ್ರೀನಿಧಿ (25), , ಹರ್ಷ ಗೌಡ ( 25) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ 8 ಮಂದಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಚಿತ್ರದುರ್ಗ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದಿನ ಬ್ಯುಸಿ ಲೈಫ್‌ನಲ್ಲಿ ಆಗಾಗ ಪ್ರವಾಸ ಮಾಡುವುದನ್ನು ರೂಢಿ ಮಾಡಿಕೊಂಡಿರುತ್ತೇವೆ. ಆದರೆ ಪ್ರವಾಸ ನಡುವೆ ಬಾರಿ  ಅಫಘಾತಗಳು ದಿನೇ ದಿನೇ ಹೆಚ್ಚುತ್ತಲೆ ಇದೆ ಅಲ್ಲದೆ ಎಷ್ಟೆ ಜಾಗೃತಿ ವಹಿಸುತ್ತಿದ್ದರು ರಾಷ್ಟ್ರೀಯ ಹೆದ್ದಾರಿ  ಅಫಘಾತ ಕಡಿಮೆಯಾಗುತ್ತ ಇಲ್ಲದಿರುವುದು ವಿಪರ್ಯಾಸವೆ ಸರಿ.

ಚಿತ್ರದುರ್ಗದಲ್ಲಿ ಭೀಕರ ಸರಣಿ ಅಪಘಾತ

ಚಿತ್ರದುರ್ಗದಲ್ಲಿ ಭೀಕರ ಸರಣಿ ಅಪಘಾತ

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಏಪ್ರಿಲ್ 21, 2019