ಕೊನೆಗೂ ಬಗೆಹರಿದ ವಿಷ್ಣು ಸಮಾಧಿ ವಿವಾದ! ಎಲ್ಲಿ ನಿರ್ಮಾಣವಾಗ್ತಿದೆ ಗೊತ್ತಾ ವಿಷ್ಣುವರ್ಧನ್​ ಸಮಾಧಿ!!

ವಿಷ್ಣು ಸ್ಮಾರಕ ಅದ್ಯಾವಾಗ ನಿರ್ಮಾಣವಾಗುತ್ತೇ..? ಸ್ಮಾರಕ ನಿರ್ಮಾಣಕ್ಕೆ ಇರೋ ವಿವಾದಕ್ಕೆ ತೆರೆ ಬೀಳೋದು ಯಾವಾಗ..? ಒಂದ್ ವೇಳೆ ಸ್ಮಾರಕ ನಿರ್ಮಾಣವಾದ್ರೂ ಅದು ಎಲ್ಲಿ ಆಗುತ್ತೇ…? ಹೀಗೆ ವಿಷ್ಣು ದಾದಾನ ಅಭಿಮಾನಿಗಳ ತಲೆಯಲ್ಲಿ ಉಳಿದಿದ್ದ ಪ್ರಶ್ನಗೆಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಸಾಹಸಸಿಂಹನ ಸ್ಮಾರಕ ಕೊನೆಗೂ ಅಡಿಪಾಯ ಶುರು ಮಾಡೋ ಟೈಮ್ ಬಂದೇ ಬಿಟ್ಟಿದೆ..


200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಈ ನಾಡಿನ ಕೋಟ್ಯಾಂತ್ರ ಪ್ರೇಕ್ಷಕರನ್ನು ರಂಜಿಸಿದ್ದ ವಿಷ್ಣು ಇವತ್ತಿಗೂ ಸ್ಯಾಂಡಲ್​ವುಡ್​ನ ಯುವ ನಟರಿಗೆ ಸೂರ್ತಿ ಚಿಲುಮೆ. ಕನ್ನಡದ ಬಿಸ್​​ ಸ್ಟಾರ್ಸ್​​ ಹೀರೋಗಳು ಕೂಡ ಇದಕ್ಕೆ ಹೊರತಲ್ಲ. ಅಂಥ ವಿಷ್ಣು ಈಗ ಅಭಿಮಾನಿಗಳ ಪಾಲಿಗೆ ಕೇವಲ ನೆನಪು ಮಾತ್ರ. 2009ರ ಡಿಸೆಂಬರ್​ 30ರಂದು ವಿಷ್ಣು ಕನ್ನಡ ಚಿತ್ರರಂಗವನ್ನ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ರು.

40 ದಶಕಗಳ ಕಾಲ ಬಣ್ಣದ ಲೋಕದಲ್ಲಿ ರಂಜಿಸಿ, ಕೋಟಿ ಕೋಟಿ ಅಭಿಮಾನ ಬಳಗ ಸಂಪಾದಿಸಿದ್ದ ಈ ಮೇರುನಟನ ಸ್ಮಾರಕ ಇನ್ನೂ ನಿರ್ಮಾಣವಾಗಿಲ್ಲ ಅನ್ನೋದು ವಿಪರ್ಯಾಸ. ಇದಕ್ಕಾಗಿ ಹೋರಾಟ ನಡೆಯುತ್ತಲೇ ಇತ್ತು. ಇದೀಗ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮುಹೂರ್ತ ಕೂಡಿ ಬಂದಿದೆ. ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಸಮಸ್ಯೆ ನಿವಾರಣೆಯಾಗಿದೆ. ಸ್ಮಾರಕ ನಿರ್ಮಾಣದ ಕೆಲಸಕ್ಕೆ ಆದಷ್ಟು ಬೇಗನೆ ಚಾಲನೆ ಸಿಗಲಿದೆ. ಸುಮಾರು 10 ವರ್ಷದಿಂದ ವಿಷ್ಣು ಸ್ಮಾರಕಕ್ಕಾಗಿ ಹೋರಾಟ ಮಾಡಿದ್ದ ಅಭಿಮಾನಿಗಳು, ಕುಟುಂಬದವರು ಈಗ ಖುಷಿಯಾಗಿದ್ದಾರೆ.

ವಿಷ್ಣು ಸ್ಮಾರಕ ಅಂದಾಕ್ಷಣ ಬೆಂಗಳೂರಿನಲ್ಲಿರುವ ಅಭಿಮಾನ್ ಸ್ಟುಡಿಯೋ ಎಂದುಕೊಳ್ಳಬೇಡಿ. ಸಮಸ್ಯೆ ಬಗೆಹರಿದಿರುವುದು ಮೈಸೂರಿನಲ್ಲಿ. ಕುಟುಂಬದ ಆಸೆಯಂತೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ಸರ್ಕಾರ ಜಾಗ ನೀಡಿತ್ತು. ಆ ಜಾಗವೂ ವಿವಾದಕ್ಕೆ ಗುರಿಯಾಗಿ ಅಲ್ಲಿಯೂ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಗಿತ್ತು. ಇದೀಗ, ಆ ಸಮಸ್ಯೆ ಬಗಹರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಯಜಮಾನನ ಕುಟುಂಬಸ್ಥರ ಒತ್ತಾಸೆಯಂತೆ ಮೈಸೂರು ತಾಲೂಕಿನ ಉದ್ಬೂರು ಸಮೀಪದಲ್ಲಿ ವಿಷ್ಣು ಸ್ಮಾರಕಕ್ಕೆ ಜಿಲ್ಲಾಡಳಿತ ಸ್ಥಳ ನಿಗದಿ ಮಾಡಿತ್ತು. ಜಿಲ್ಲಾಡಳಿತವು ಸ್ಮಾರಕಕ್ಕೆ ನೀಡಿದ್ದ ಭೂಮಿ ನಮಗೆ ಸೇರಿದ್ದು ಅಂತ ಸ್ಮಾರಕ ನಿರ್ಮಾಣ ರದ್ದು ಕೋರಿ ಅದೇ ಗ್ರಾಮದ ಮಹದೇವಮ್ಮ ಹಾಗೂ ಕೆಲ ಗ್ರಾಮಸ್ಥರು ಕೆಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಇಂಜಕ್ಷನ್​ ಆರ್ಡರ್​​ ತಂದಿದ್ರು.

ಇದೀಗ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಕೆಳಹಂತದ ನ್ಯಾಯಾಲಯದ ಸ್ಮಾರಕ ನಿರ್ಮಾಣದ ಒಡೆತನಕ್ಕೆ ನೀಡಿದ್ದ ತಾತ್ಕಾಲಿಕ ಆದೇಶವನ್ನ ರದ್ದು ಮಾಡಿ ಸಾಹಸಸಿಂಹನ ಸ್ಮಾರಕಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ಅರ್ಜಿಯ ಅಂತಿಮ ವಿಚಾರಣೆ ಬಾಕಿ ಇದೆ.ಸದ್ಯ ಹೈಕೋರ್ಟ್ ವಿಷ್ಣುದಾದಾನ ಸ್ಮಾರಕ್ಕೆ ಸಮ್ಮತಿ ಮುದ್ರೆ ನೀಡಿದೆ. ಆದ್ರೆ ನಮ್ಮ ಯಜಮಾನ ಲೀನವಾಗಿರೋದು ಬೆಂಗಳೂರಿನಲ್ಲಿ. ಹೀಗಾಗಿ ಇಲ್ಲಿನ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣವಾಗ್ಬೇಕು ಅಂತಾ ಅಭಿಮಾನಿಗಳು ಬೇಡಿಕೆ ಇಟ್ಟಿದ್ರು.ಆದ್ರೆ ವಿಷ್ಣು ಹುಟ್ಟಿ ಬೆಳೆದ್ದು ಮೈಸೂರಿನಲ್ಲಿ. ಹೀಗಾಗಿ ಅಲ್ಲಿಯೇ ಸ್ಮಾರಕ ಕಟ್ಬೇಕು ಅನ್ನೋದು ಅವರ ಕುಟುಂಬಸ್ಥರ ಹೆಬ್ಬಯಕೆ. ಅವರ ಆಸೆಯಂತೆ ಮೈಸೂರಿನಲ್ಲಿ ಸಾಹಸಸಿಂಹನ ಸ್ಮಾರಕ ನಿರ್ಮಾಣವಾಗಲಿದೆ. ಬಹುಶ: ವಿಷ್ಣ ಆತ್ಮಕ್ಕೆ ಇನ್ನಾದ್ರೂ ಶಾಂತಿ ಸಿಗ್ಬಹುದು.