ಅಖಾಡಕ್ಕಿಳಿದ ಗೌರ್ವನರ್ ವಜೂಬಾಯಿವಾಲಾ​​! ಸಿಎಂ ಅಧಿಕಾರ ಮೊಟಕುಗೊಳಿಸಿ ರಾಜ್ಯಪಾಲರ ಆದೇಶ!!

ಸಾಲು-ಸಾಲು ಶಾಸಕರ ರಾಜೀನಾಮೆ ಹಾಗೂ ಕೆಲ ಸಚಿವರ ರಾಜೀನಾಮೆಯಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ರಾಜ್ಯಪಾಲ ವಜೂಬಾಯಿ ವಾಲಾ ಕಣಕ್ಕಿಳಿದಿದ್ದಾರೆ.

ad


ಹೌದು ನೀರಿಕ್ಷೆಯಂತೆ ಆಖಾಡಕ್ಕಿಳಿದಿರುವ ಗವರ್ನರ್​ ವಜೂಬಾಯಿವಾಲಾ ಸಿಎಂ ಕುಮಾರಸ್ವಾಮಿಯವರ ಅಧಿಕಾರಕ್ಕೆ ಕಡಿವಾಣ ಹಾಕಿದ್ದಾರೆ. ಯಾವುದೇ ಆಡಳಿತಾತ್ಮಕ ತೀರ್ಮಾನ ಕೈಗೊಳ್ಳುವಂತಿಲ್ಲ ಎಂದು ಸಿಎಂ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.


ಸರ್ಕಾರದ ಮೂವರು ಸಚಿವರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸರ್ಕಾರದ ಬಹುಮತದ ಬಗ್ಗೆ ಅನುಮಾನವಿದೆ. ಹೀಗಾಗಿ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲ ಸಿಎಂ ನಡೆಸುತ್ತಿರುವ ತುರ್ತು ಸಂಪುಟ ಸಭೆ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ.