ಗುಲ್ಬರ್ಗಾದಲ್ಲಿ ಮುಂದುವರಿದ ಪರೀಕ್ಷಾ ಅಕ್ರಮ! ಮನೆಯಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು!!

ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಎಡವಟ್ಟುಗಳು ಪ್ರಾರಂಭವಾಗಿತ್ತವೆ. ಈ ಬಾರಿಯ ಪರೀಕ್ಷೆಯಲ್ಲು ವಿಶ್ವವಿದ್ಯಾಲಯ ತನ್ನ ಎಡವಟ್ಟುಗಳ ಸರಣಿಯನ್ನು ಮುಂದುವರೆಸಿದ್ದು ಗುಲ್ಬರ್ಗಾದಲ್ಲಿ ಪರೀಕ್ಷೆಯನ್ನ ಅಕ್ರಮವಾಗಿ ನಡೆಸಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ

ad

ಮೇ 8ರಿಂದ ಬಿಕಾಂ 2ನೇ ಸೆಮಿಸ್ಟರ್​​ ಪರೀಕ್ಷೆ ಆರಂಭವಾಗಿದ್ದು, ಇಂದು ಅರ್ಥಶಾಸ್ತ್ರ ಹಾಗೂ ಇಂಗ್ಲೀಷ್ ವಿಷಯದ ಪರೀಕ್ಷೆ ಇತ್ತು. ಆದ್ರೆ ನಗರದ ವಿವೇಕಾನಂದ ಬಿಎಡ್ ಕಾಲೇಜಿನ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಐಡಿಎಸ್​​ಎಂಟಿ ಬಡಾವಣೆಯ ಬಾಡಿಗೆ ಮನೆಯಲ್ಲಿ ಬಿಕಾಂ ಪರೀಕ್ಷೆ ಅಕ್ರಮವಾಗಿ ಬರೆದಿದ್ದಾರೆ.

ಖಚಿತ ಮಾಹಿತಿ ಪಡೆದ ಪರೀಕ್ಷಾ ಜಾಗೃತ ದಳದ ಅಧಿಕಾರಿಗಳು ಕೂಡಲೇ ಹೆಚ್ಚೆತ್ತು ಕೊಂಡು ಐಡಿಎಸ್​​ಎಂಟಿ ಬಡಾವಣೆಯ ಬಾಡಿಗೆ ಮನೆಯ ಮೇಲೆ ದಾಳಿ ಮಾಡಿ ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸದರಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.