ರಿಲ್ಯಾಕ್ಸ್​ ಮೂಡ್​​ನಲ್ಲಿ ಸಿಎಂ ,ಸಾಯಿ ರಾಧಾ ಹೆಲ್ತ್ ರೆಸಾರ್ಟ್​ನಲ್ಲಿ ಸಿಎಂ ಕುಮಾರಸ್ವಾಮಿ ರೆಸ್ಟ್!

ಬಿರುಸಿನ ಪ್ರಚಾರ ನಡೆಸಿರುವ ಸಿಎಂ  ಕುಮಾರಸ್ವಾಮಿ ಈಗ ರಿಲಾಕ್ಸ್​ ಮೂಡ್​ ನಲ್ಲಿದ್ದಾರೆ. ನೆನ್ನೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಚುನಾವಣೆ ಅಧಿಸೂಚನೆ ಪ್ರಕಟವಾದ ದಿನದಿಂದಲೂ ಚುನಾವಣಾ ರಣತಂತ್ರ, ರ್ಯಾಲಿ, ರೋಡ್​ ಶೋ, ಪ್ರಚಾರ ಸಭೆಗಳನ್ನು ನಡೆಸಿ ಸುಸ್ತಾಗಿದ್ದರು ಈಗ ರಿಲ್ಯಾಕ್ಸ್​ ಮೂಡ್​​ನಲ್ಲಿ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ.

ad

ಮುಖ್ಯಮಂತ್ರಿ ಕುಮಾರಸ್ವಾಮಿ ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಮುಗಿಸುತ್ತಿದ್ದಂತೆ ರಿಲ್ಯಾಕ್ಸ್​ ಮೂಡ್​​ನಲ್ಲಿದ್ದಾರೆ. ಉಡುಪಿ ಜಿಲ್ಲೆಯ ಕಾಪುವಿನ ಮೂಳೂರಲ್ಲಿರುವ ಸಾಯಿರಾಧಾ ಹೆರಿಟೇಜ್​ ಹೆಲ್ತ್ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇಂದು ಮತ್ತು ನಾಳೆ ಪಂಚಕರ್ಮ ಚಿಕಿತ್ಸೆ, ಧ್ಯಾನದಲ್ಲಿ ಸಿಎಂ ಪಾಲ್ಗೊಳ್ಳಲಿದ್ದಾರೆ. ನಂತರ ಅವರು ಯೋಗ, ಆಯಿಲ್ ಥೆರಪಿ ಪಡೆದು ಎರಡು ದಿನ ಫುಲ್ ರಿಲ್ಯಾಕ್ಸ್ ಮಾಡಲಿದ್ದಾರೆ.