ಮಾನವ ರಹಿತ ಗಗನಯಾತ್ರೆಗೆ ನಾವ್ ರೆಡಿ !! ಮತ್ತೊಂದು ಸುತ್ತಿನ ಚಂದ್ರಯಾನಕ್ಕೂ ಸಿದ್ದತೆ !!

ವರ್ಷದಿಂದ ವರ್ಷಕ್ಕೆ ಇಸ್ರೋ ಹೊಸ ಹಂತಕ್ಕೆ ತಲುಪುತ್ತಿದ್ದು, ಜಾಗತಿಕ ಮಟ್ಟದಲ್ಲಿನ ತನ್ನ ಐತಿಹಾಸಿಕ ಸಾಧನೆಗಳು ಮತ್ತು ಯೋಜನೆಗಳಿಂದ ಗಮನ ಸೆಳೆಯುತ್ತಿದೆ. ಇದೀಗ ದೇಶದ ಮೊದಲ ಮಾನವ ರಹಿತ ಗಗನಯಾನಕ್ಕೆ ಇಸ್ರೋ ಭರ್ಜರಿ ತಯಾರಿ ನಡೆಸಿದೆ.

ಈಗಾಗಲೇ ಮಾನವ ರಹಿತ ಗಗನಯಾನ ನಿರ್ವಹಣೆ ಕೈಗೊಳ್ಳಲು ಸಮರ್ಥರಾಗಿರುವ 10 ಸಂಭಾವ್ಯ ತಂಡದ ಸದಸ್ಯರನ್ನು ಭಾರತೀಯ ವಾಯುಪಡೆ ಆಯ್ಕೆ ಮಾಡುತ್ತಿದ್ದು. ಸ್ವತಃ ಇಸ್ರೋ ಮುಖ್ಯಸ್ಥರಾದ ಕೆ.ಸಿವಾನ್​ ಅವರು ತಿಳಿಸಿದ್ದಾರೆ.

ಈ ಹತ್ತು ಮಂದಿಯಲ್ಲಿ ಮೂವರನ್ನು ಆಯ್ಕೆ ಮಾಡಿಕೊಂಡು ಐಎಎಫ್​​​​ ತರಭೇತಿ ನೀಡಲಿದೆ. ನಂತರ ಇಸ್ರೋ ವತಿಯಿಂದಲೂ ಅವರನ್ನು ತಯಾರಿ ಮಾಡಲಾಗುತ್ತದೆ. ಬೆಂಗಳೂರಿನ ಹ್ಯೂಮ್​​ ಸ್ಪೇಸ್​ ಫೈಟ್​ ಸೆಂಟರ್​​​​​ ಮತ್ತು ಐಎಎಫ್​​ ಜತೆ ಈ ಸಂಬಂಧ ಒಪ್ಪಂದವೂ ಆಗಿದೆ.

ಇನ್ನೆರಡು ತಿಂಗಳಲ್ಲಿ 10 ಮಂದಿ ಸಮರ್ಥರ ಆಯ್ಕೆ ನಡೆಸಿ ಗಗನ ಯಾತ್ರೆಗೆ ತಯಾರಿ ಮಾಡಿಕೊಳ್ಳಲಾಗುವುದು ಎಂದು ಇಸ್ರೋ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. 2021ರ ವೇಳೆಗೆ ಮಾನವ ಸಹಿತ ಗಗನಯಾನಕ್ಕೆ ಭಾರತ ತಯಾರಿ ನಡೆಸುತ್ತಿದೆ. ಮತ್ತೊಂದೆಡೆ ಚಂದ್ರಯಾನ-2 ಮಿಷನ್​​​ ತಯಾರಿ ಆಗ್ತಿದ್ದು, ಇನ್ನೆರಡು ದಿನಗಳಲ್ಲಿ ಬೆಂಗಳೂರಿನ ಯುಆರ್​ ರಾವ್​​​​​​ ಸೆಟಲೈಟ್ ಸೆಂಟರ್​​​ ನಿರ್ಮಿಸಿರೋ ಲೂನಾರ್​​​ಕ್ರಾಫ್ಟ್​ ಅನ್ನು ಪ್ರದರ್ಶನ ಮಾಡಲಿದ್ದು, ಆ ನಂತರ ಆಂಧ್ರದ ಶ್ರೀಹರಿಕೋಟಾಗೆ ಒಯ್ಯಲಾಗುತ್ತದೆ. ಅಲ್ಲಿ ಜಿಎಸ್​ಎಲ್​ವಿ ರಾಕೆಟ್​ಗೆ ಅಳವಡಿಸಿ ಉಡಾಯಿಸಲಾಗುತ್ತದೆ.