ಉಪಚುನಾವಣೆ ಕಣದಲ್ಲೂ ದೋಸ್ತಿ ನಾಯಕರಿಗೆ ಐಟಿ ಶಾಕ್​​! ಸಿಎಂ, ಡಿಕೇಶಿ ರೂಂ ಪರಿಶೀಲನೆ!!

ಬೈ ಎಲೆಕ್ಷನ್​​ ಅಖಾಡದಲ್ಲೂ ದೋಸ್ತಿ ನಾಯಕರಿಗೆ ಐಟಿ  ಇಲಾಖೆ ಶಾಕ್​ ನೀಡಿದೆ. ಬೈ ಎಲೆಕ್ಷನ್​ಗಾಗಿ ಹುಬ್ಬಳ್ಳಿಯಲ್ಲಿ ಸೇರಿರುವ ದೋಸ್ತಿ ನಾಯಕರಿಗೆ ಐಟಿ ಅಧಿಕಾರಿಗಳು ರೇಡ್ ನಡೆಸುವ ಮೂಲಕ ಶಾಕ್​ ನೀಡಿದ್ದು, ಪರಿಶೀಲನೆ ನಡೆಸಿ ದಾಖಲೆ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ad

ಮಂಡ್ಯ, ಮೈಸೂರು, ಹಾಸನ ಮಾದರಿಯಲ್ಲೇ ಐಟಿ ಅಧಿಕಾರಿಗಳ ಆಪರೇಷನ್​ ನಡೆದಿದ್ದು, ನಿನ್ನೆ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೂ ಹುಬ್ಬಳ್ಳಿಯ ಹೋಟೆಲ್​​ ಕೊಠಡಿಗಳಲ್ಲಿ  ಹುಡುಕಾಟ ನಡೆದಿದೆ. ಸಿಎಂ ಹೆಚ್​ಡಿಕೆ ತಂಗಿದ್ದ ಗೋಕುಲ ರಸ್ತೆಯ ಡೆನಿಸನ್ಸ್ ಹೊಟೇಲ್, ಸಚಿವ ಡಿಕೆ ಶಿವಕುಮಾರ್ ತಂಗಿರುವ ಕಾಟನ್ ಕೌಂಟಿ ಕ್ಲಬ್​, ಸಚಿವರಾದ ಜಮೀರ್ ಅಹ್ಮದ್ ಖಾನ್, ಆರ್.ವಿ. ದೇಶಪಾಂಡೆ, MTB ನಾಗರಾಜ್, ಮಾಜಿ ಸಚಿವ ಸಂತೋಷ್ ಲಾಡ್ ಸೇರಿ ಹಲವರು ಉಳಿದಿದ್ದ ಕೊಠಡಿಗಳಲ್ಲೂ ಅಧಿಕಾರಿಗಳು ತಲಾಶ್ ಮಾಡಿದ್ದಾರೆ.

ವಾರ್ಡ್‌ರೋಬ್, ಟೇಬಲ್, ಕಾಟ್‌ಗಳನ್ನೂ ಬಿಡದೆ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಗೋವಾ-ಕರ್ನಾಟಕ ಐಟಿ ಅಧಿಕಾರಿಗಳ ತಂಡ ಬಿಜೆಪಿ ದೂರಿನ ಹಿನ್ನೆಲೆಯಲ್ಲಿ ದೋಸ್ತಿ ನಾಯಕರ ಹೋಟೆಲ್​ ಕೊಠಡಿಗಳ ತಪಾಸಣೆ ನಡೆಸಿದೆ. ಕುಂದಗೋಳ ಮತ್ತು ಚಿಂಚೋಳಿ ಬೈ ಎಲೆಕ್ಷನ್​ ಹಿನ್ನೆಲೆಯಲ್ಲಿ ದೋಸ್ತಿ ಸರ್ಕಾರದ ಪ್ರಮುಖ ನಾಯಕರು ಹಾಗೂ ಬಿಜೆಪಿ ನಾಯಕರು ಉತ್ತರ ಕರ್ನಾಟಕದ ಕಡೆ ಮುಖ ಮಾಡಿದ್ದು, ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.