ಆಂಧ್ರದಲ್ಲಿ ಹಾಲಿ ಸಿಎಂ ವರ್ಸಸ್​ ಮಾಜಿ ಸಿಎಂ ಫೈಟ್​​! ಪ್ರಜಾವೇಧಿಕೆ ಕಟ್ಟಡ ನೆಲಸಮಗೊಳಿಸಿದ ಅಧಿಕಾರಿಗಳು!!

ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಮತ್ತೊಂದು ಆಘಾತ ಎದುರಾಗಿದೆ. ನಾಯ್ಡು ಸರ್ಕಾರ ನಿರ್ಮಿಸಿದ್ದ ಪ್ರಜಾ ವೇದಿಕೆ ಕಟ್ಟಡವನ್ನ ತಡರಾತ್ರಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರ ಧರೆಗುರಳಿಸಿದೆ.

ad


ಪಕ್ಷದ ಕಾರ್ಯ ಚಟುವಟಿಕೆಗಳನ್ನ ನಡೆಸಲು ಅಮರಾವತಿ ಸಮೀಪದ ಉಂಡವಳ್ಳಿಯ ತಮ್ಮ ನಿವಾಸದ ಬಳಿ ನಾಯ್ಡು, ಕಳೆದ ಮೂರು ವರ್ಷಗಳ ಹಿಂದೆ ವಿವಾದಾತ್ಮಕ ಪ್ರಜಾ ವೇದಿಕೆ ಸಭಾಂಗಣವನ್ನ ನಿರ್ಮಿಸಿದ್ರು. ಈ ಕಟ್ಟಡವನ್ನ ನಿಯಮಾವಳಿಗಳನ್ನ ಉಲ್ಲಂಘಿಸಿ ನಿರ್ಮಿಸಲಾಗಿರುವ ಆರೋಪ ಕೇಳಿಬಂದಿತ್ತು.


ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಈ ಕಟ್ಟಡವನ್ನು ಅಕ್ರಮವಾಗಿ ನದಿ ದಂಡೆಯಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ತೆರವುಗೊಳಿಸಬೇಕೆಂದು ಆದೇಶಿಸಿದ್ದರು. ಈ ವೇಳೆ ತಮ್ಮ ಕಟ್ಟಡದ ತಂಟೆಗೆ ಬಂದ್ರೆ ಪ್ರತಿಭಟನೆ ನಡೆಸುವುದಾಗಿ ಪ್ರಜಾವೇದಿಕೆ ಎಚ್ಚರಿಸಿತ್ತು.


ಆದರೆ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಜಗನ್ ಮೋಹನ್ ರೆಡ್ಡಿ, ಅಧಿಕಾರಕ್ಕೆ ಬರುತ್ತಿದ್ದಂತೆ ನಾಯ್ಡು ವಿರುದ್ಧದ ಸಮರ ಮುಂದುವರೆಸಿದ್ದು, ಪ್ರಜಾವೇದಿಕೆಯ ಕಟ್ಟಡವನ್ನು ನೆಲಸಮಗೊಳಿಸುವಂತೆ ರೆಡ್ಡಿ ಆದೇಶ ಹೊರಡಿಸಿದ್ದರು. ಜೂನ್ 26 ರಿಂದ ಕಟ್ಟಡ ತೆರವು ಕಾರ್ಯಾಚರಣೆ ಪ್ರಾರಂಭಿಸುವಂತೆ ಕಳೆದ ಸೋಮವಾರವಷ್ಟೇ ರೆಡ್ಡಿ, ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ರು. ಹೀಗಾಗಿ ಸಿಎಂ ಆದೇಶದಂತೆ ಕಟ್ಟಡ ನೆಲಸಮಗೊಳಿಸಲಾಗಿದೆ.