ಜಿಂದಾಲ್​ ಭೂಮಿ ಪ್ರಕರಣ! ಸಮರ ಮುಂದುವರಿಸಿದ ಮಾಜಿಸಚಿವ ಎಚ್​.ಕೆ.ಪಾಟೀಲ್​! ಜಾರ್ಜ್​ಗೆ ಪತ್ರ ಬರೆದ ಪಾಟೀಲ್​!!

ಜಿಂದಾಲ್​ಗೆ 3666 ಎಕರೆ ಭೂಮಿ ಮಾರಾಟ ಮಾಡೋ ಸಂಪುಟ ನಿರ್ಣಯದ​​ ವಿರುದ್ಧ ಮಾಜಿ ಸಚಿವ ಹೆಚ್​.ಕೆ.ಪಾಟೀಲ್​​​ ಸಮರ ಮುಂದುವರೆಸಿದ್ದಾರೆ. ಬೃಹತ್​​​-ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್​​​​​ಗೆ ಆರು ಪುಟಗಳ ಸುದೀರ್ಘ ಪತ್ರ ಬರೆದಿರೋ ಪಾಟೀಲ್​​​ ಸಂಪುಟದ ನಿರ್ಣಯವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.


ಅಲ್ಲದೇ ಜಿಂದಾಲ್​​​ ಕಂಪನಿಯ ಕರ್ಮಕಾಂಡವನ್ನು ಬಯಲು ಮಾಡಿದ್ದಾರೆ. ಜಿಂದಾಲ್​​ ಬಾಕಿ ವಸೂಲಿಗಾಗಿ ಸಂಪುಟ ಉಪ ಸಮಿತಿಯಲ್ಲಿ ನಿರ್ಣಯ ಆಗಿತ್ತು. ಉಪ ಸಮಿತಿಯಲ್ಲಿ ಆಗ ಗೃಹ ಸಚಿವರಾಗಿದ್ದ ತಾವೂ ಕೂಡಾ ಸದಸ್ಯರಾಗಿದ್ರಿ. ಜಿಂದಾಲ್​​​​-ಸೌತ್​​ವೆಸ್ಟ್​ ಮೈನಿಂಗ್​​ ಕಂಪನಿಯ ಕೇಸ್​ಗಳು ಸುಪ್ರೀಂಕೋರ್ಟ್​ನಲ್ಲಿ ಬಾಕಿ ಇವೆ. ನ್ಯಾ.ಸಂತೋಷ್​ ಹೆಗ್ಡೆ ಸಲ್ಲಿಸಿದ ಲೋಕಾಯುಕ್ತ ವರದಿಯಲ್ಲೂ ಜಿಂದಾಲ್​​ ಕಂಪನಿ ಆರೋಪಿಯಾಗಿದೆ.


ಯುವಿ ಸಿಂಗ್​ ಸಲ್ಲಿಸಿದ ವರದಿಯಂತೆ ಅಕ್ರಮ ಅದಿರು ಪೂರೈಕೆ ಮಾಡಿದವರು ಯಾರು. ಪರ್ಮಿಟ್ ಇಲ್ಲದೇ ಸಾಗಿಸಿದ ಅದಿರನ್ನು ಜಿಂದಾಲ್​​ ಕಂಪನಿ ಖರೀದಿಸಿದೆ. ಇದೆಲ್ಲವೂ ಸರ್ಕಾರದ ಅಡ್ವೊಕೇಟ್ ಜನರಲ್​​ ಗಮನಕ್ಕೆ ಏಕೆ ಬಂದಿಲ್ಲ. ಇದೇ ಅಕ್ರಮ ಗಣಿಗಾರಿಕೆ ವಿರುದ್ಧ ನಾವು​ ಪಾದಯಾತ್ರೆ ಮಾಡಿದ್ದನ್ನು ನೆನಪು ಮಾಡಿಕೊಳ್ಳಿ. ಬಾಕಿ ಕೊಡಿ ಎಂದು ಸರ್ಕಾರ ಕೇಳಿದ್ರೆ ಕೋರ್ಟಿನಲ್ಲಿ JSW ಕೇಸ್​ ಹಾಕುತ್ತೆ.ಹೀಗಾಗಿ ಸಚಿವ ಸಂಪುಟದ ಆಘಾತಕಾರಿ ನಿರ್ಣಯವನ್ನು ಕೈಬಿಡಿ ಎಂದು ಪಾಟೀಲ್​​ ಮನವಿ ಮಾಡಿಕೊಂಡಿದ್ದಾರೆ.