ನನ್ನ ರಾಜೀನಾಮೆ ಕೇವಲ ವದಂತಿ ಅಷ್ಟೇ! ನಾನ್ಯಾಕೆ ರಾಜೀನಾಮೆ ನೀಡಲಿ?! ಶಾಕ್​ ನೀಡಿದ ಸೌಮ್ಯ ರೆಡ್ಡಿ!!

ಕಳೆದ ಒಂದು ವಾರದಿಂದ ಅತೃಪ್ತರ ಲಿಸ್ಟ್​​ನಲ್ಲಿ ಓಡಾಡುತ್ತಿದ್ದ ಹೆಸರು ಶಾಸಕಿ ಸೌಮ್ಯ ರೆಡ್ಡಿ. ತಂದೆ ರಾಮಲಿಂಗಾ ರೆಡ್ಡಿ ರಾಜೀನಾಮೆಯಿಂದ ಸೌಮ್ಯ ರಾಜೀನಾಮೆ ಖಚಿತ ಎಂಬ ಸುದ್ದಿ ಓಡಾಡುತ್ತಲೇ ಇತ್ತು. ಆದರೆ ಕೊನೆಗೂ ಈ ಎಲ್ಲ ಊಹಾಪೋಹಗಳಿಗೆ ಶಾಸಕಿ ಸೌಮ್ಯ ಖಡಕ್ ರಿಪ್ಲೈ ಮೂಲಕ ಉತ್ತರ ನೀಡಿದ್ದಾರೆ.

ad


ನಾನು ಕಾಂಗ್ರೆಸ್​ಗೆ ರಾಜೀನಾಮೆ ನೀಡೋ ಮಾತನಾಡಿಲ್ಲ. ನನ್ನ ರಾಜೀನಾಮೆ ಕೇವಲ ವದಂತಿ ಎಂದು ಶಾಸಕಿ ಸೌಮ್ಯಾ ರೆಡ್ಡಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸೌಮ್ಯ ರೆಡ್ಡಿ ನಾನು ರಾಜೀನಾಮೆ ನೀಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಒಂದು ರೂಪಾಯಿ ಲಂಚ ಪಡೆಯದೇ ನಾನು ನನ್ನಿಂದ ಆದ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇನೆ.


ನಾನು ಲಂಚ ಪಡೆದಿದ್ದೇನೆ ಎಂದರೇ ರಾಜೀನಾಮೆ ನೀಡಲು ಸಿದ್ಧ. ಆದರೆ ವಿನಾಕಾರಣ ನಾನ್ಯಾಕೆ ರಾಜೀನಾಮೆ ನೀಡಲಿ ಎಂದು ಪ್ರಶ್ನಿಸಿದ್ದಾರೆ. ಇನ್ನು ತಂದೆ ರಾಜೀನಾಮೆ ವಿಚಾರಕ್ಕೆ ಉತ್ತರಿಸಿದ ಸೌಮ್ಯ ರೆಡ್ಡಿ, 45 ವರ್ಷಗಳಿಂದ ಪಕ್ಷವನ್ನು ಕಟ್ಟಿದ ರಾಮಲಿಂಗಾ ರೆಡ್ಡಿಯವರು ಅಭಿವೃದ್ಧಿ, ಅನುದಾನದ ವಿಚಾರಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಬೇರೆ ಯಾವುದೇ ಉದ್ದೇಶವಿಲ್ಲ ಎಂದಿದ್ದಾರೆ.