ಕಾನೂನು ಉಲ್ಲಂಘನೆ ಹಿನ್ನೆಲೆಯಲ್ಲಿ ಓಲಾ ಲೈಸೆನ್ಸ್​ ರದ್ದು..

ಬೆಂಗಳೂರು ಕ್ಯಾಬ್​ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಬಿಗ್​ ಶಾಕ್​ ನೀಡಿದೆ. ಇನ್ನೂ 6 ತಿಂಗಳ ಕಾಲ ಬೆಂಗಳೂರಲ್ಲಿ ಓಲಾ ಸೇವೆ ಇರಲ್ಲ. ಓಲಾ ಸಂಸ್ಥೆಯ ಲೈಸನ್ಸ್​ ಅಮಾನತು ಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ad

ಸಾರಿಗೆ ನಿಯಮಾವಳಿ ಉಲ್ಲಂಘಿಸಿದ ಹಿನ್ನೆಲೆ ಓಲಾ ಕ್ಯಾಬ್​ ಮೇಲೆ ನಿಷೇಧದ ಕ್ರಮ ಕೈಗೊಳ್ಳಲಾಗಿದೆ. ಸಾರಿಗೆ ನಿಯಮಗಳ ಪ್ರಕಾರ ಯೆಲ್ಲೋ ಬೋರ್ಡ್​ ವಾಹನಗಳನ್ನು ಮಾತ್ರ ಬಾಡಿಗೆಗೆ ಬಳಸಬಹುದು.

ಆದ್ರೆ ಓಲಾ ಸಂಸ್ಥೆ ವೈಟ್​ ಬೋರ್ಡ್​ ವಾಹನಗಳನ್ನೂ ಬಾಡಿಗೆಗೆ ಬಳಸುತ್ತಿತ್ತು. ಈ ಬಗ್ಗೆ ನೋಟಿಸ್​ ನೀಡಿದ್ರೂ ಓಲಾ ಸಂಸ್ಥೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಈ ಹಿನ್ನೆಲೆ 6 ತಿಂಗಳಕಾಲ ಓಲಾ ಲೈಸನ್ಸ್​​ ರದ್ದುಮಾಡಲಾಗಿದೆ.