ಬಿಸಿಲೂರಿನಲ್ಲಿ ಜನರ ಬಳಿಗೆ ಬಂತು ಸರ್ಕಾರ! ಆರಂಭಗೊಂಡ ಸಿಎಂ ಗ್ರಾಮ ವಾಸ್ತವ್ಯ! ಜನರ ದುಃಖ ಆಲಿಸಿದ ಎಚ್​ಡಿಕೆ!!

ರಾಯಚೂರಿನ ಕರೇಗುಡ್ಡ ಗ್ರಾಮದಲ್ಲಿ ಇಂದು ಸಿಎಂ ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ. ಬಿಸಿಲ ನಾಡಿನ ಬವಣೆ ಕೇಳಲು ನಾಡದೊರೆ ಆಗಮಿಸಿದ್ದು ಜನರಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ. ಕಳೆದ ರಾತ್ರಿ ಉದ್ಯಾನ್​​ ಎಕ್ಸ್​ಪ್ರೆಸ್​ನಲ್ಲಿ ರಾಯಚೂರು ತಲುಪಿದ ಸಿಎಂ ಯರಮರಸ್​ ಸರ್ಕಿಟ್​ ಹೌಸ್​ನಲ್ಲಿ ಉಳಿದುಕೊಂಡಿದ್ದಾರೆ.

ad


ಕಾಂಗ್ರೆಸ್​ ಶಾಸಕ ಬಸನಗೌಡ ದದ್ದಲ್​​​​, ಜೊತೆಗೆ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್​ ಸೇರಿದಂತೆ ಹಲವರು ಸಿಎಂ ಭೇಟಿಯಾಗಿ ಮಾತುಕತೆ ನಡೆಸಿದ್ರು. ಸಚಿವ ವೆಂಕಟರಾವ್ ನಾಡಗೌಡ ಸೇರಿ ಹಲವರು ಸಾಥ್​​​​ ನೀಡಿದ್ದಾರೆ. ಕೆಲ ಹೊತ್ತಿನಲ್ಲೇ ರಸ್ತೆ ಮಾರ್ಗವಾಗಿ ಸಿಎಂ ಕರೆಗುಡ್ಡಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅದಕ್ಕಾಗಿ ಕೆಎಸ್​ಆರ್​​ಟಿಸಿ ಬಸ್​ ಕೂಡಾ ಸಜ್ಜಾಗಿ ನಿಂತಿದೆ. KA-36, F-1614 ನಂಬರಿನ ಬಸ್​ ಸರ್ವಾಲಂಕಾರಗೊಂಡಿದೆ.


ಮತ್ತೊಂದೆಡೆ ಸಿಎಂ ಸ್ವಾಗತಿಸಲು ಕರೆಗುಡ್ಡ ಗ್ರಾಮ ನವವಧುವಿನಂತೆ ಸಿಂಗಾರಗೊಂಡಿದೆ. ಬೆಳಗ್ಗೆ 10ಗಂಟೆಯಿಂದ ಸಂಜೆ 6 ಗಂಟೆವರೆಗೂ ಸಿಎಂ ಜನತಾ ದರ್ಶನ ನಡೆಸಲಿದ್ದು ಅದಕ್ಕಾಗಿ ಬೃಹತ್​​ ವೇದಿಕೆ ಸಜ್ಜು ಮಾಡಲಾಗಿದೆ. 8000 ಆಸನಗಳನ್ನು ಹಾಕಲಾಗಿದೆ. ವಿಕಲಚೇತನರಿಗೆ ವಿತರಣೆ ಮಾಡಲು ಬೈಕ್​ಗಳನ್ನೂ ತಂದು ನಿಲ್ಲಿಸಲಾಗಿದೆ. ಸಂಜೆ ರೈತರೊಂದಿಗೆ ಸಂವಾದ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ ಮಾಡಿದ ನಂತ್ರ ಶಾಲಾ ಮಕ್ಕಳ ಜತೆ ಸಿಎಂ ಭೋಜನ ಸೇವಿಸಲಿದ್ದಾರೆ. ರಾತ್ರಿ 10.30ಕ್ಕೆ ಸರ್ಕಾರಿ ಶಾಲೆಯಲ್ಲಿ ಸಿಎಂ ವಾಸ್ತವ್ಯ ನಡೆಸಲಿದ್ದಾರೆ.