ಅತೃಪ್ತ ಶಾಸಕರ ರಾಜೀನಾಮೆ ವಿಚಾರ! ಸುಪ್ರೀಂ ಕೋರ್ಟ್​ ಆದೇಶದಲ್ಲೇನಿದೆ ಗೊತ್ತಾ?!

ಅತೃಪ್ತರ ರಾಜೀನಾಮೆ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ಸ್ಪೀಕರ್​ಗೆ ರಮೇಶ್ ಕುಮಾರ್ ಗೆ ಮಹತ್ವದ ಸೂಚನೆ ನೀಡಿದೆ. ಹಾಗಿದ್ದರೇ ಸುಪ್ರೀಂ ಕೋರ್ಟ್​ ಸ್ಪೀಕರ್​ಗೆ ನೀಡಿರುವ ಆದೇಶದಲ್ಲಿ ಏನಿದೆ? ಇಲ್ಲಿದೆ ಡಿಟೇಲ್ಸ್​.

ad


ಸುಪ್ರೀಂ ಕೋರ್ಟ್​ ಆದೇಶದ ಪ್ರತಿ ಬಿಟಿವಿ ನ್ಯೂಸ್​ ಗೆ ಲಭ್ಯವಾಗಿದೆ. ಅದರ ಮಹತ್ವದ ಅಂಶಗಳು ಇಲ್ಲಿವೆ. ಶಾಸಕರ ರಾಜೀನಾಮೆ ಅಂಗೀಕರಿಸುವಂತೆ ಸುಪ್ರೀಂ ಕೋರ್ಟ್​ ಸ್ಪೀಕರ್​ಗೆ ಸೂಚಿಸಿಲ್ಲ. ಬದಲಾಗಿ ರಾಜೀನಾಮೆ ಪತ್ರವನ್ನು ಸ್ವೀಕರಿಸಿ ಪರಿಶೀಲನೆ ನಡೆಸಲು ಸೂಚಿಸಿದೆ.

ರಾಜೀನಾಮೆ ಪತ್ರ ಸ್ವೀಕರಿಸಿ ಪರಿಶೀಲಿಸಿದ ಬಳಿಕ ತೀರ್ಮಾನ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದ್ದು, ಸ್ಪೀಕರ್ ತೆಗೆದುಕೊಳ್ಳುವ ತೀರ್ಮಾನವನ್ನು ನ್ಯಾಯಾಲಯದ ಗಮನಕ್ಕೆ ತರಲು ಸೂಚಿಸಲಾಗಿದೆ. ಅಲ್ಲದೇ ಸಂಜೆ 6 ಗಂಟೆಯೊಳಗೆ ರಾಜೀನಾಮೆ ನೀಡಿದ ಎಲ್ಲ ಅತೃಪ್ತ ಶಾಸಕರು  ಸ್ಪೀಕರ್ ಎದುರು ಹಾಜರಾಗಬೇಕೆಂದು ಆದೇಶಿಸಿದೆ.  ನಗರಕ್ಕೆ ವಾಪಸ್ಸಾಗುವ ಶಾಸಕರಿಗೆ ಅಗತ್ಯ ಭದ್ರತೆ ಒದಗಿಸಲು ಡಿಜಿ-ಐಜಿಪಿಗೂ ಸುಪ್ರೀಂ ಕೋರ್ಟ್​ ಸೂಚನೆ ನೀಡಿದೆ.