ತೇಜಸ್ವಿನಿ ಅನಂತ್​ಕುಮಾರ್​ಗೆ BJP ರಾಜ್ಯ ಉಪಾಧ್ಯಕ್ಷೆ ಪಟ್ಟ

ಬಿಜೆಪಿಯಿಂದ ಟಿಕೆಟ್​​ ವಂಚಿತರಾಗಿದ್ದ ದಿವಂಗತ ಅನಂತ್​​​ಕುಮಾರ್​​ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಪಟ್ಟ ನೀಡಿಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್​​ ಅಕಾಂಕ್ಷಿಯಾಗಿದ್ದ ತೇಜಸ್ವಿನಿ ಅವರು ಟಿಕೆಟ್​ ವಂಚಿತರಾಗಿದ್ರು. ಹೀಗಾಗಿ ತೇಜಸ್ವಿನಿ ಅವರನ್ನು ಅವರ ಬೇಸರವನ್ನು ಶಮನ ಮಾಡಲು ಪಕ್ಷವೂ ಅವರಿಗೆ ರಾಜ್ಯ ಉಪಾಧ್ಯಕ್ಷೆ ಪಟ್ಟ ನೀಡಿದೆ.

ad

ತೇಜಸ್ವಿನಿ ನೇಮಕ ಬಗ್ಗೆ ಟ್ವೀಟ್​ ಮಾಡಿರುವ  ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ ನೇಮಕವಾಗಿರುವುದು ಸಂತೋಷ ತಂದಿದೆ. ನಿಮಗೆ ಅಭಿನಂದನೆ. ಯಶಸ್ಸು ನಿಮ್ಮದಾಗಲಿ ಎಂದು ಶುಭ ಕೋರಿದ್ದಾರೆ

 

ಕೇಂದ್ರ ಸಚಿವರಾಗಿದ್ದ ಅನಂತ್​ಕುಮಾರ್​ ಅವರ ನಿಧನದ ನಂತರ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅವರ ಹೆಂಡತಿಯಾದ ತೇಜಸ್ವಿನಿ ಅನಂತ್​ಕುಮಾರ್​ ಅವರನ್ನು ಕಣಕ್ಕಿಳಿಸಲು ಈ ಹಿಂದೆ ಹೈಕಮಾಂಡ್ ನಿರ್ಧರಿಸಿತ್ತು ಅಲ್ಲದೆ ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡುವುದು ಕೊನೆಯ ಕ್ಷಣದವರೆಗೂ ಬಹುತೇಕ ಖಚಿತವಾಗಿತ್ತು. ಆದರೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಳಿಕ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದಾಗಿ ಅನಂತ್ ಕುಮಾರ್ ಬೆಂಬಲಿಗರಿಗೆ ಹಾಗೂ ತೇಜಸ್ವಿನಿ ಅವರಿಗೆ ಸಹಜವಾಗಿಯೆ ಬೇಸರವಾಗಿತ್ತು. ಇದೀಗ ತೇಜಸ್ವಿನಿ ಅವರ ಬೇಸರವನ್ನು ಶಮನ ಮಾಡಲು ರಾಜ್ಯ ಪಕ್ಷವೂ ಅವರಿಗೆ ರಾಜ್ಯ ಉಪಾಧ್ಯಕ್ಷೆ ಪಟ್ಟ ನೀಡಿದೆ.