ಬೆಂಗಳೂರಿಗರೇ ಎಚ್ಚರ ಎಚ್ಚರ! ಮುಷ್ಕರಕ್ಕೆ ಮುಂದಾದ ಬಿಎಂಟಿಸಿ ಸಿಬ್ಬಂದಿ! ನಾಳೆ ರಸ್ತೆಗೆ ಇಳಿಯೋದಿಲ್ಲ ಬಸ್​!!

ನಾಳೆ ನೀವೇನಾದ್ರೂ ನಗರದಲ್ಲಿ ಓಡಾಡೋ ಪ್ಲ್ಯಾನ್​ ಇಟ್ಕೊಂಡಿದ್ರೆ ಖಾಸಗಿ ವಾಹನಗಳನ್ನು ಅವಲಂಬಿಸೋದು ಒಳ್ಳೆಯದು. ಯಾಕಂದ್ರೆ ನಾಳೆ ಬೆಂಗಳೂರಿನ ಜನರ ಜೀವನಾಡಿ ಬಿಎಂಟಿಸಿ ಬಸ್​ಗಳು ರಸ್ತೆಗಿಳಿಯೋದು ಡೌಟ್​.

ad


ಹೌದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಬಿಎಂಟಿಸಿ ಸಿಬ್ಬಂದಿ ಮುಷ್ಕರಕ್ಕೆ ನಿರ್ಧರಿಸಿದ್ದು, ಸಾವಿರಾರು ನೌಕರರು ಬೆಂಗಳೂರು ಚಲೋ ನಡೆಸಲಿದ್ದಾರೆ. ಹೀಗೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆಗೆ ಮುಂದಾಗೋದರಿಂದ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗೋ ಸಾಧ್ಯತೆ ಇದೆ.


ಇನ್ನು ನಗರದಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಶಾಲೆ, ಕಾಲೇಜು, ಆಸ್ಪತ್ರೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಬಿಎಂಟಿಸಿಯನ್ನೇ ಅವಲಂಬಿಸಿದ್ದು, ಬಸ್​ಗಳು ರಸ್ತೆಗಿಳಿಯದೇ ಇದ್ದಲ್ಲಿ ಸಾರ್ವಜನಿಕರು ಪರದಾಡುವಂತಾಗಲಿದೆ. ಅಲ್ಲದೇ ಬಸ್ ಮುಷ್ಕರವನ್ನು ಲಾಭವಾಗಿ ಪಡೆದುಕೊಳ್ಳೋ ಕ್ಯಾಬ್​ಗಳು, ಅಟೋಚಾಲಕರು ಧೀಡಿರ ದರ ಏರಿಕೆಗೆ ಮುಂದಾಗೋ ಸಾಧ್ಯತೆ ಕೂಡ ಇದೆ.