ಮತ್ತೆ ಮರುಕಳಿಸುತ್ತಾ ಟ್ವೆಂಟಿ ಟ್ವೆಂಟಿ ಸರ್ಕಾರ?! ಬಿಜೆಪಿ ಜೊತೆ ಕೈ ಜೋಡಿಸ್ತಾರಾ ಕುಮಾರಸ್ವಾಮಿ?!

ಈಗಾಗಲೇ ಶಾಸಕರು ಹಾಗೂ ಸಚಿವರ ರಾಜೀನಾಮೆಯಿಂದ ಕಂಗೆಟ್ಟಿರುವ ಕಾಂಗ್ರೆಸ್​​ಗೆ ದೋಸ್ತಿಯೂ ಕೈಕೊಡುವ ಮುನ್ಸೂಚನೆ ಲಭ್ಯವಾಗಿದ್ದು, ಸಿಎಂ ಕುಮಾರಸ್ವಾಮಿ ಕೈ ನಾಯಕರಿಗೆ ಶಾಕ್​ ನೀಡುವ ಸಾಧ್ಯತೆ ಇದೆ. ಹೌದು ಜೆಡಿಎಸ್ ಬಿಜೆಪಿ ಜೊತೆ ಕೈಜೋಡಿಸಲು ಚಿಂತನೆ ನಡೆಸಿರುವ ಮಾಹಿತಿ ಲಭ್ಯವಾಗಿದ್ದು, ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ.

ad


ಹೌದು ಮೈತ್ರಿ ಸರ್ಕಾರದ ಈ ದುಸ್ಥಿತಿಗೆ ಕಾಂಗ್ರೆಸ್​​ನ ನಾಯಕರು ಹಾಗೂ ಆ ಪಕ್ಷದ ಒಳಜಗಳವೇ ಕಾರಣ ಎಂದು ಆರಂಭದಿಂದಲೂ ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸುತ್ತಲೇ ಇದ್ದರು. ಈಗಲೂ ಕೂಡ ಸಿಎಂ ಅಸಮಧಾನ ಮುಂದುವರೆದಿದ್ದು, ಕಾಂಗ್ರೆಸ್​ನಲ್ಲಿ ಸಿದ್ಧು ಮಾಸ್ಟರ್ ಪ್ಲ್ಯಾನ್ ಗೆ ಉತ್ತರವಾಗಿ ಕುಮಾರಸ್ವಾಮಿ ಕಮಲಪಾಳಯದೊಂದಿಗೆ ಜೈಜೋಡಿಸುವ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ.


ಈ ಬಗ್ಗೆ ಈಗಾಗಲೇ ಚಿಂತನೆ ನಡೆದಿದ್ದು,ಮೊದಲ ಹಂತವಾಗಿ ಅಮಿತ್ ಶಾ ಕುಮಾರಸ್ವಾಮಿಯೊಂದಿಗೆ ಮಾತುಕತೆ ನಡೆದಿದ್ದು, ಸಿಎಂ ಸ್ಥಾನವನ್ನು ಬಿಜೆಪಿಗೆ ಬಿಟ್ಟು ಕಮಲದೊಂದಿಗೆ ಕೈಜೋಡಿಸಲು ಕುಮಾರಸ್ವಾಮಿ ಸಿದ್ಧವಾಗಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಹೀಗಾದಲ್ಲಿ ಮತ್ತೊಮ್ಮೆ ಕುಮಾರಸ್ವಾಮಿ,ಬಿಎಸ್​ವೈ ಜೋಡಿ ಆಟ ಆರಂಭವಾಗೋದು ಗ್ಯಾರಂಟಿ.

ಕುಮಾರಸ್ವಾಮಿಯೊಂದಿಗೆ ಮಾತುಕತೆ ನಡೆದ ತಕ್ಷಣ ಶಾ ಈ ಮಾತುಕತೆ ಮುಂದುವರೆಸುವುದಕ್ಕೆ ರಾಜ್ಯ ಉಸ್ತುವಾರಿ ಪಿ.ಮುರುಳಿಧರ್ ರಾವ್ ಅವರನ್ನು ರಾಜ್ಯಕ್ಕೆ ಕಳುಹಿಸಿದ್ದಾರೆ.ಕುಮಾರಸ್ವಾಮಿ ಸಹ ತಮ್ಮ ಆಪ್ತ ಹಾಗೂ ಸಚಿವ ಸಾ.ರಾ.ಮಹೇಶ್ ಅವರಿಗೆ ಮುರುಳಿಧರ್ ರಾವ್ ಜೊತೆ ಮಾತನಾಡಲು ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಸಾ.ರಾ.ಮಹೇಶ್​ ಮುರುಳಿಧರ್ ರಾವ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ್ ಜೊತೆ ನಿನ್ನೆ ಮಾತುಕತೆ ನಡೆಸಿದ್ದಾರೆ.


ಇನ್ನು ಕುಮಾರಸ್ವಾಮಿ ಮುಂದಿನ ವಾರ ಮೋದಿ ಹಾಗೂ ಶಾ ಭೇಟಿ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ರಾಜ್ಯ ರಾಜಕಾರಣದ ಹೈಡ್ರಾಮಾ ಪ್ರತಿನಿತ್ಯ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಲೇ ಸಾಗುತ್ತಿದ್ದು, ಏನಾಗಲಿದೆ ಅನ್ನೋದನ್ನು ಕಾದುನೋಡಬೇಕಿದೆ.