ಥೂ ಥೂ ನಾಯಿಗಳ ತರ ಕಚ್ಚಾಡ್ತಾರೆ! ಇವರ ಬಗ್ಗೆ ಮಾತಾಡೋಕೆ ಅಸಹ್ಯ ಆಗ್ತಿದೆ! ರಾಜ್ಯ ರಾಜಕಾರಣ ಟೀಕಿಸಿದ ವಾಟಾಳ್!!

ನಿನ್ನೆ ವಿಧಾನಸೌಧದಲ್ಲಿ ನಡೆದ ಹೈಡ್ರಾಮಾ ರಾಜ್ಯದಾದ್ಯಂತ ಟೀಕೆಗೆ ಗುರಿಯಾಗಿದೆ. ನಮ್ಮನ್ನಾಳುವ ಸಚಿವರು, ಶಾಸಕರೇ ಹೀಗೆ ವರ್ತಿಸಿದ್ರೆ ಜನಸಾಮಾನ್ಯರ ಕತೆ ಏನು ಎಂದು ಜನಪ್ರಶ್ನಿಸುತ್ತಿದ್ದಾರೆ. ಹೀಗಿರುವಾಗಲೇ ಶಾಸಕರು-ಸಚಿವರ ವರ್ತನೆ ಖಂಡಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ ನಾಗರಾಜ್, ಥೂ ಥೂ ಇವರೆಲ್ಲ ನಾಯಿಗಿಂತ ಕಡೆ ಎಂದು ಟೀಕಿಸಿದ್ದಾರೆ.

ad

ನಿನ್ನೆ ನಡೆದ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ವಾಟಾಳ ನಾಗರಾಜ್, ನಿನ್ನೆ ಘಟನೆ ನೋಡಿ ತುಂಬ ಬೇಸರವಾಗಿದೆ. ನಾಯಿಗಳಿಗಿಂತ ಕೆಟ್ಟದಾಗಿ ಜಗಳಾಡಿಕೊಂಡಿದ್ದಾರೆ. ಇವರ ಬಗ್ಗೆ ಮಾತನಾಡೋದಿಕ್ಕೆ ಬೇಸರವಾಗ್ತಿದೆ ಎಂದಿದ್ದಾರೆ.


ಅಷ್ಟೇ ಅಲ್ಲ, ರಾಜ್ಯದಲ್ಲಿ ಚುನಾವಣೆ ಕಾಯ್ದೆಗೆ ಬದಲಾವಣೆ ತರಬೇಕು. ಪಕ್ಷಾಂತರಿಗಳಿಗೆ ಜೀವನ ಪರ್ಯಂತ ಚುನಾವಣೆಗೆ ಸ್ಪರ್ಧಿಸದಂತ ಶಿಕ್ಷೆ ಕೊಡಬೇಕು. ಅಂತಹ ಕಾನೂನು ಜಾರಿಯಾಗಬೇಕು ಎಂದು ವಾಟಾಳ ನಾಗರಾಜ್ ಒತ್ತಾಯಿಸಿದ್ದಾರೆ.