ಬರೋಬ್ಬರಿ ೫೪೪ ಕೆಜಿಯ ಕುಂಬಳಕಾಯಿ ಬೆಳೆದ ರೈತ

ad


ತರಕಾರಿ ಖರೀದಿಸೋಕೆ ಹೋಗೋ ನೀವು ಅಬ್ಬಬ್ಬಾ ಅಂದ್ರೆ 5 ರಿಂದ 10 ಕೆಜಿ ತೂಕದ ಕುಂಬಳಕಾಯಿ ನೋಡಿರ್ತಿರಾ. ರೈತರು ತಮ್ಮ ಗದ್ದೆಗಳಲ್ಲಿ ಭಾರಿ ಅಂದ್ರೆ ಹತ್ತಾರು ಕೆಜಿಯ ಕುಂಬಳಕಾಯಿ ಬೆಳೆದಿರುತ್ತಾರೆ.
ಆದರೇ ಇಲ್ಲೊಬ್ಬ ರೈತ ಬರೋಬ್ಬರಿ 1200 ಪೌಂಡ್​​ ತೂಕದ ಸಿಹಿಕುಂಬಳಕಾಯಿ ಬೆಳೆದಿದ್ದಾರೆ. 1200 ಪೌಂಡ್​ 544 ಕೆಜಿ ತೂಕ. ಇಂತಹದೊಂದು ಬೃಹತ ಗಾತ್ರದ ಕುಂಬಳಕಾಯಿ ಬೆಳೆದ ರೈತ ಕುಂಬಳಕಾಯಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಂಭ್ರಮಿಸಿದ್ದಾನೆ.

ಅಲ್ಲದೇ ಅದೇ ಕುಂಬಳಕಾಯಿಯಲ್ಲಿ ಚಿಕ್ಕ ರಂಧ್ರ ಕೊರೆದು ಅದರಲ್ಲಿ ತಮ್ಮ ಇಬ್ಬರು ಮಕ್ಕಳನ್ನು ಒಬ್ಬೊಬ್ಬರನ್ನಾಗಿ ಕೂರಿಸಿದ್ದಾನೆ. ಕೊನೆಗೆ ತಾನೂ ಕೂಡಾ ಅದರೊಳಗೆ ಕೂತು ವಿಡಿಯೋ ಮಾಡಿ ಅಪಲೋಡ್  ಮಾಡಿದ್ದಾನೆ.  ಇಷ್ಟಕ್ಕೂ ಈ ಭಾರಿ ಕುಂಬಳಕಾಯಿ ಬೆಳೆದಿದ್ದು ಕೆನಡಾದ ಹಾಲೋವಿನ್​​​ನಲ್ಲಿ.