ಕೇಂದ್ರ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಚಂದ್ರಶೇಖರ್ ಕಂಬಾರ್ ಆಯ್ಕೆ!

Chandrashekhara Kambara Selected As Kendra Sahitya Academy President.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಚಂದ್ರಶೇಖರ್ ಕಂಬಾರ್ ಆಯ್ಕೆಯಾಗಿದ್ದಾರೆ.

ad

ಆಮೂಲಕ ಕನ್ನಡದ ಹಿರಿಯ ಸಾಹಿತಿಯೊಬ್ಬರು ಅತ್ಯುನ್ನತ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಏರಿದಂತಾಗಿದೆ. ಚಂದ್ರಶೇಖರ್​ ಅಧ್ಯಕ್ಷ ಸ್ಥಾನಕ್ಕೆ ಏರಿದ ಮೂರನೇ ಕನ್ನಡಿಗರು.  ಇಂದು ನಡೆದ ಚುನಾವಣೆಯಲ್ಲಿ ಚಂದ್ರಶೇಖರ್ ಕಂಬಾರ ಅವರು 59 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಕಂಬಾರ್ ಅವರ ಪ್ರತಿಸ್ಪರ್ಧಿಯಾಗಿದ್ದ ಒಡಿಯಾದ ಬರಹಗಾರ್ತಿ ಪ್ರತಿಭಾ ರೋಯದ್ 29 ಮತ ಪಡೆದಿದ್ದರು.

 

1983 ರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವಿ.ಕೆ.ಗೋಕಾಕ್​ ಹಾಗೂ 1993 ರಲ್ಲಿ ಜ್ಞಾನಪೀಠ್ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು. ಇದೀಗ ಸುಮಾರಿ ಎರಡುವರೆ ದಶಕಗಳ ಬಳಿಕ ಚಂದ್ರಶೇಖರ್ ಕಂಬಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಡಾ.ವಿಶ್ವನಾಥ ಪ್ರಸಾದ್ ತಿವಾರಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡಿರಾಗಿರುವ ಚಂದ್ರಶೇಖರ್​ ಕಂಬಾರ್​ ಆಯ್ಕೆಗೆ ಸಾಹಿತಿಗಳು, ಕನ್ನಡಿಗರು ಹರ್ಷ ವ್ಯಕ್ತಪಡಿಸಿದ್ದಾರೆ.