ಸಾಮಾಜಿಕ ಜಾಲತಾಣದ ಪ್ರಚಾರಕ್ಕೆ ಬ್ರೇಕ್​​ – ಕೇಂದ್ರ ಚುನಾವಣಾ ಆಯೋಗದ ಖಡಕ್ ಎಚ್ಚರಿಕೆ!

2220
2018-Break election campaign on social networking sites

ಕರ್ನಾಟಕದಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಚುನಾವಣೆಯ ಕಾವು ಜೋರಾಗಿತ್ತು.

ad

ಅದರಲ್ಲೂ 2013 ಕ್ಕೆ ಹೋಲಿಸಿದ್ರೆ 2018 ರಲ್ಲಿ ಸಾಮಾಜಿಕ ಜಾಲತಾಣಗಳ ಅಬ್ಬರ ಜೋರಾಗಿದ್ದರಿಂದ ಟಿಕೇಟ್ ಆಕಾಂಕ್ಷಿಗಳು, ರಾಜಕಾರಣಿಗಳು ಚುನಾವಣೆಯ ಪ್ರಚಾರಕ್ಕೆ ಪೇಸ್​ಬುಕ್​, ವಾಟ್ಸಪ್​​ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದರು. ಆದರೇ ಪ್ರಚಾರಕ್ಕೆ ಸಾಮಾಜಿಕ ಜಾಲತಾಣ ಬಳಕೆ ಮಾಡಲು ಹೊರಟವರಿಗೆ ಕೇಂದ್ರ ಚುನಾವಣಾ ಆಯೋಗ ಸಖತ್ ಶಾಕ್ ನೀಡಿದ್ದು, ಸಾಮಾಜಿಕ ಜಾಲತಾಣಗಳ ಪ್ರಚಾರಕ್ಕೆ ಬ್ರೇಕ್ ಹಾಕಿದೆ.

ಹೌದು ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಅಧಿಕಾರಿ ಓಪಿ ರಾವತ್​ ಈ ಬಗ್ಗೆ ಮಾಹಿತಿ ನೀಡಿದ್ದು, ಪೇಸ್ಬುಕ್​, ಟ್ವಿಟರ್​,ವಾಟ್ಯ್ಸಾಪ್​, ಯೂಟ್ಯೂಬ್​, ಇನ್​ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಭ್ಯರ್ಥಿ, ಪಕ್ಷದ ಪರ ಪ್ರಚಾರ ಮಾಡುವಂತಿಲ್ಲ. ಅಷ್ಟೇ ಅಲ್ಲ ಯಾವುದೇ ಪಕ್ಷ, ಅಭ್ಯರ್ಥಿ ಚಿಹ್ನೆ ಮತದಾರರ ಬಗ್ಗೆ ಅವಹೇಳನ ಮಾಡುವಂತಿಲ್ಲ ಎಂದು ಎಚ್ಚರಿಸಿದೆ.
ಇನ್ನು ಪ್ರಚಾರ ಮತ್ತು ಅಪಪ್ರಚಾರಕ್ಕೆ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡ್ರೆ ಶಿಕ್ಷೆ ವಿಧಿಸುವುದಾಗಿ ಕೇಂದ್ರ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. ಇದರಿಂದ ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಭಾರಿ ಹಿನ್ನಡೆಯಾಗಲಿದ್ದು, ಸಾಮಾಜಿಕ ಜಾಲತಾಣವನ್ನು ಪ್ರಚಾರದ ವೇದಿಕೆಯಾಗಿ ಬಳಸಿಕೊಳ್ಳುವ ಪಕ್ಷ ಹಾಗೂ ಅಭ್ಯರ್ಥಿಗಳ ಕನಸು ಕೊನೆಯಾದಂತಾಗಿದೆ.

Sponsored :

Related Articles