ಸಿದ್ಧವಾಗ್ತಿದೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ- ಹಲವು ಹಾಲಿಗಳ ಕೈ ತಪ್ಪಲಿದೆ ಟಿಕೇಟ್ !

1948
2018 Election: Final Lists of Congress Candidates?
2018 Election: Final Lists of Congress Candidates?

ಕರ್ನಾಟಕ ಕುರುಕ್ಷೇತ್ರಕ್ಕೆ ಕಾಂಗ್ರೆಸ್​ ರೆಡಿಯಾಗ್ತಿದೆ. ಚುನಾವಣೆ ಎದುರಿಸಲು ‘ಕೈ’ ಕದನ ಕಲಿಗಳು ಸಿದ್ಧವಾಗಿದ್ದು, ಇವತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗೋ ಸಾಧ್ಯತೆ ಇದೆ.

ad

ಅಭ್ಯರ್ಥಿಗಳ ಪಟ್ಟಿ ಫೈನಲ್​​ಗೊಳಿಸೋ ಸಂಬಂಧ ಕೆಪಿಸಿಸಿ ಚುನಾವಣಾ ಸಮಿತಿಯಿಂದ ಇವತ್ತು ಎರಡನೇ ಸಭೆ ನಡಯಲಿದೆ. 122 ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಹಾಲಿ ಕೆಲ ಶಾಸಕರಿಗೆ ಟಿಕೆಟ್ ಸಿಗೋ ಸಾಧ್ಯತೆ ಕಡಿಮೆ ಇದೆ.
ಭ್ರಷ್ಟಾಚಾರದ ಆರೋಪ, ಅನಾರೋಗ್ಯದ ಕಾರಣಕ್ಕೆ ಕೆಲ ಶಾಸಕರಿಗೆ ಬಿ ಫಾರಂ ‘ಕೈ’ ತಪ್ಪಲಿದೆ. ಪರಮೇಶ್ವರ್, ವೇಣುಗೋಪಾಲ್ ಸಮ್ಮುಖದಲ್ಲಿ ಅಭ್ಯರ್ಥಿಗಳ ಆಯ್ಕೆ ಸಭೆ ನಡೆಲಿದ್ದು, ದೇವನಹಳ್ಳಿ ಬಳಿಯ ಖಾಸಗಿ ರೆಸಾರ್ಟ್​​​ನಲ್ಲಿ ಮೀಟಿಂಗ್​ ನಡೆಯಲಿದೆ. ಈ ಬಾರಿ ಕೆಲ ಪ್ರಭಾವಿ ನಾಯಕರಿಗೇ ಕಾಂಗ್ರೆಸ್​​ನಿಂದ ಟಿಕೆಟ್​​ ಕೊಡದಿರುವ ಸಾಧ್ಯತೆ ಇದೆ.

ಮಹತ್ವದ ವಿಚಾರ ಅಂದ್ರೆ ಮಂಡ್ಯದಲ್ಲಿ ಮಾಜಿ ಸಚಿವ, ರೆಬೆಲ್ ಸ್ಟಾರ್​ ಅಂಬರೀಶ್​​​​ಗೆ ಟಿಕೆಟ್​ ಕೈ ತಪ್ಪುವ ಸಾಧ್ಯತೆ ಇದೆ. ‘ಇನ್ನು, ಯಾದಗಿರಿಯಲ್ಲಿ ಮಾಲಕರೆಡ್ಡಿ, ಹಾನಗಲ್​ನಲ್ಲಿ ಮನೋಹರ್ ತಹಶೀಲ್ದಾರ್, ಶಾಂತಿನಗರದಲ್ಲಿ ಎನ್. ಎ ಹ್ಯಾರಿಸ್​, ಮಾಯಕೊಂಡದಲ್ಲಿ ಶಿವಮೂರ್ತಿಗೌಡ ನಾಯಕ್, ಬೀಳಗಿಯ ಜಿ.ಟಿ.ಪಾಟೀಲ್, ಬದಾಮಿಯ ಬಿ ಬಿ ಚಿಮ್ಮನಕಟ್ಟಿ, ಚಾಮರಾಜನಗರದಲ್ಲಿ ಪುಟ್ಟರಂಗಶೆಟ್ಟಿ, ಕಲಬುರಗಿ ಗ್ರಾಮಾಂತರ ಜಿಲ್ಲೆಯಿಂದ ಜಿ.ರಾಮಕೃಷ್ಣ, ರೋಣದಿಂದ ಬಿ.ಆರ್ ಯಾವಗಲ್ಗೆ ಕಾಂಗ್ರೆಸ್​ನ ಬಿ ಫಾರಂ ಸಿಗಲ್ಲ ಅನ್ನೋ ಮಾಹಿತಿ ಇದೆ. ಇನ್ನು, ಇವತ್ತಿನ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾದ ಬಳಿಕ ಸಮಿತಿ ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸಲಿದೆ. ಮಾರ್ಚ್ 29, 30ಕ್ಕೆ ದೆಹಲಿಯಲ್ಲಿ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗೋ ಸಾಧ್ಯತೆ ಇದೆ.

Sponsored :

Related Articles