ಆ ಹುಡುಗಿ ಕೇಳಿದ್ದು ಡ್ರಾಪ್.. ಆದ್ರೆ ಆತ ಮಾಡಿದ್ದೇನು?

13560
ಆ ಸೆಲ್ಸ್ ಗರ್ಲ್ ಊರಿಂದ ಊರಿಗೆ ತಿರುಗಿ ವ್ಯಾಪಾರ ಮಾಡುತ್ತಿದ್ದಳು. ಹಾಗೆಯೇ ಹೊಸಕೋಟೆಯ ಗ್ರಾಮವೊಂದಕ್ಕೆ ತೆರಳಿದ್ದಳು.
ಸಂಜೆಯಾಗಿದ್ದರಿಂದ ದಾರಿಯಲ್ಲಿ ಹೋಗುತ್ತಿದ್ದ ಯುವಕನ ಬಳಿ ಡ್ರಾಪ್ ಕೇಳಿದ್ದಳು. ಆದ್ರೆ ಅವಳ ಗ್ರಹಚಾರ ಸರಿ ಇರಲಿಲ್ಲವೋ ಎನೋ , ಡ್ರಾಪ್ ಕೊಡುವ ನೆಪದಲ್ಲಿ ಆ ವ್ಯಕ್ತಿ ಆಕೆಯನ್ನು ತೋಟದ ಮನೆಗೆ ಕರೆದೊಯ್ದಿದ್ದಾನೆ.

ಬೆಂಗಳೂರು ಗ್ರಾಮಾಂತರದ ಬೈಲನರಸಾಪುರಕ್ಕೆ ವಸ್ತುಗಳನ್ನು ಮಾರಾಟ ಮಾಡಲು ಸೇಲ್ಸ್‌ಗರ್ಲ್‌ ಬಂದಿರುತ್ತಾಳೆ. ನಂತರ ಸಂಜೆ ಸೇಲ್ಸ್‌ಗರ್ಲ್‌ ಬಸ್ ಗಾಗಿ ಕಾಯುತ್ತಿದ್ದಳು. ಬಸ್ ಸಿಗದ ಕಾರಣ ಸೇಲ್ಸ್‌ಗರ್ಲ್‌ 40 ವರ್ಷದ ರಮೇಶ್ ಎಂಬಾತನ ಬಳಿ ಮುಖ್ಯರಸ್ತೆವರೆಗೂ ಡ್ರಾಪ್ ಕೊಡುವಂತೆ ಕೇಳುತ್ತಾಳೆ.

ಈ ವೇಳೆ ಬೈಕ್ ನಲ್ಲಿ ಹತ್ತಿಸಿಕೊಂಡ ರಮೇಶ್ ಶಾರ್ಟ್ ಕಟ್ ನಲ್ಲಿ ಕರೆದುಕೊಂಡು ಹೋಗುವುದಾಗಿ ಹೇಳಿ ತಮ್ಮ ತೋಟದ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆಕೆಯ ಕುತ್ತಿಗೆ ಮೇಲೆ ಕುಡಗೋಲನ್ನು ಇಟ್ಟು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಧೈರ್ಯ ತೋರಿದ ಯುವತಿ ಆತನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ. ಆಕೆಯ ಧೈರ್ಯವೇ ಅವಳನ್ನು ಕಾಪಾಡಿತ್ತು.

ad
ನಂತರ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗುತ್ತಾಳೆ. ಬಳಿಕ ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾಳೆ. ಯುವತಿ ನೀಡಿದ ದೂರು ಆಧರಿಸಿ ಪೊಲೀಸರು ಆರೋಪಿ ರಮೇಶ್ ನನ್ನು ಬಂಧಿಸಿದ್ದಾರೆ.
Sponsored :

Related Articles