ನೋಡ ನೋಡುತ್ತಿದ್ದಂತೆ ನೀರುಪಾಲಾದ NDRF ಸಿಬ್ಬಂದಿ! ಆದ್ರೆ ಕೈಬಿಡಲಿಲ್ಲ ನೂರಾರು ಜನರನ್ನು ರಕ್ಷಿಸಿದ ಪುಣ್ಯ!!

5223

ತುಂಗಭದ್ರಾ ನದಿ ನೀರಿನ ಪ್ರವಾಹದಿಂದ ವಿರೂಪಾಪುರಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಪ್ರವಾಸಿಗರ ರಕ್ಷಣೆಗೆ ಹೋದ ಮೂವರು ಎನ್​ಡಿಆರ್​ಎಫ್ ಮತ್ತು ಇಬ್ಬರು ಅಗ್ನಿಶಾಮಕ ಸಿಬ್ಬಂದಿ ನೀರುಪಾಲಾಗಿದ್ದಾರೆ.! ನಿರಾಶ್ರಿತರನ್ನ ಬೋಟ್​ನಲ್ಲಿ ಕರೆತರುವಾಗ ರಕ್ಷಣಾ ಬೋಟ್ ಮುಳುಗಿದ್ದು, ನೀರು ಪಾಲಾಗಿರೋ ಸಿಬ್ಬಂದಿ ರಕ್ಷಣೆಗೆ ಹೆಲಿಕಾಪ್ಟರ್​​​​​​ ಆಗಮಿಸಿದೆ.

 

ad

ವಿರುಪಾಪುರ ಗಡ್ಡೆಯಲ್ಲಿ ತಮ್ಮ ಪ್ರಾಣವನ್ನೆ ಪಣಕ್ಕಿಟ್ಟು ವಿರುಪಾಪುರ ಗಡ್ಡೆಯಲ್ಲಿ ಸಿಲುಕ್ಕಿದ್ದ 60 ಮಂದಿ ನಿರಾಶ್ರಿತರನ್ನ ಸೇರಿ 25 ವಿದೇಶಿಯರನ್ನು ರಕ್ಷಿಸಿದ್ದರು. ಇನ್ನು ಉಳಿದವರ ರಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ನೀರಿನ ಪ್ರವಾಹಕ್ಕೆ ಸಿಲುಕಿ ಬೋಟ್ ನೀರಿನಲ್ಲಿ ಮುಳುಗಿ ಈ ದುರ್ಘಟನೆ ಸಂಭವಿಸಿದೆ.

ರಕ್ಷಣಾ ಸಿಬ್ಬಂದಿಯ ಬೋಟ್ ಮುಗುಚಿ ನೀರಿನಲ್ಲಿ ಕೊಚ್ಚಿಹೋಗುತ್ತಿರುವ ದಾರುಣ ಘಟನೆ ಮೊಬೈಲ್ ನಲ್ಲಿ ಸೆರೆಯಾಗಿದ್ದು.
ಈ ವಿಡಿಯೋ ಕ್ಷಣಾರ್ದದಲ್ಲಿ ಸಾಮಾಜಿಕ ಜಾಲತಾಣಗಲ್ಲಿ ವೈರಲ್ಲಾಗಿದೆ. ಕೊನೆಗು ನೂರಾರು ಜನರನ್ನ ರಕ್ಷಿಸಿದ ಪುಣ್ಯದ ಫಲ ಫಲಿಸಿದ್ದು, ಪ್ರವಾಹಕ್ಕೀಡಾದ ಐವರು ಸಿಬ್ಬಂದಿಗಳನ್ನ ರಕ್ಷಣೆ ಮಾಡಲಾಗಿದೆ ಆ ಮೂಲಕ ಎಲ್ಲರು ಸೇಫ್ ಆಗಿದ್ದಾರೆ.

 

Sponsored :

Related Articles