ಪೋಟೋಶೂಟ್ ವೇಳೆ ಫಾಲ್ಸ್ ಗೆ ಬಿದ್ದು ನಿರ್ದೇಶಕ ಸಂತೋಷ ಸಾವು

1844

 

ಮೊದಲ ಮಹಾಮಳೆಗೆ ಮಂಗಳೂರು ಜಲಾವೃತವಾಗಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಈ ಮಧ್ಯೆ ತಮ್ಮ ಚೊಚ್ಚಲ ಚಿತ್ರದ ಬ್ಯಾನರ್​ಗಾಗಿ ಪೋಟೋ ಶೂಟ್​ಗೆ ತೆರಳಿದ್ದ ಕನಸು ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ಭಾರಿ ಮಳೆಗೆ ಬಲಿಯಾಗಿದ್ದು, ಪೋಟೋ ಶೂಟ್​ ವೇಳೆ ಎರ್ಮಾಯಿ ಫಾಲ್ಸ್​ನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.

ad

 

ಮಂಗಳೂರಿನ ಬೆಳ್ತಂಗಡಿ ಎರ್ಮಾಯ್ ಫಾಲ್ಸ್​ಗೆ ಸಂತೋಷ ಪೋಟೋ ಶೂಟ್​ಗೆ ಆಗಮಿಸಿದ್ದರು. ಈ ವೇಳೆ ಎತ್ತರದಿಂದ ಪೋಟೋ ಶೂಟ್​ ನಡೆಸೋದಿಕ್ಕಾಗಿ ಹಾರಾಟ ನಡೆಸಲು ನೆರವಾಗುವ ಭಾರದ ಮೆಶಿನ್​ವೊಂದನ್ನು ಕಾಲಿಗೆ ಕಟ್ಟಿಕೊಂಡಿದ್ದರು. ಈ ವೇಳೆ ಪೋಟೋ ಶೂಟ್​ಗಾಗಿ ಬಂಡೆ ಹತ್ತುತ್ತಿದ್ದ ವೇಳೆ ಸಂತೋಷ ಜಾರಿ ಬಿದ್ದಿದ್ದು, ಬಂಡೆಗೆ ತಲೆ ಜಪ್ಪಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬೆಳ್ತಂಗಡಿ ನಗರ ಪೊಲೀಸರು ಭೇಟಿ ನೀಡಿದ್ದು, ಸಂತೋಷ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಪೋಟೋ ಶೂಟ್​ಗೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಸಂತೋಷ ಜೊತೆಯಲ್ಲಿ ಬಂದಿದ್ದ ಐವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Sponsored :

Related Articles