ರಾಕಿಂಗ್ ಸ್ಟಾರ್ ಯಶ್​ ಹಾಗು ಪ್ರಭಾಸ್ ಕಾಂಬಿನೇಷನ್ನಲ್ಲಿ ಮೂಡಿಬರಲಿದೆ ಅದ್ಭುತ ಸಿನೆಮಾ..!

2129

ಸ್ಯಾಂಡಲ್​ವುಡ್​​​ನಲ್ಲಿ ಈಗ ನಂಬರ್​ ಒನ್ ಸ್ಟಾರ್​ ಯಾರು ಅಂದ್ರೆ ಎಲ್ಲಾ ಸಿನಿ ಜಗತ್ತು ಕೈ ತೋರಿಸೋದು ರಾಕಿಂಗ್ ಸ್ಟಾರ್ ಯಶ್​ ಕಡೆಗೆ.. ಕೆಜಿಎಫ್​ ಸಿನಿಮಾ ಬಂದಮೇಲೆ ಮಿಸ್ಟರ್ ರಾಮಾಚಾರಿಯ ವರ್ಚಸ್ಸೇ ಬದ್ಲಾಗಿದೆ. ಟಾಲಿವುಡ್, ಬಾಲಿವುಡ್​, ಕಾಲಿವುಡ್​, ಮಾಲಿವುಡ್​ ಹೀಗೆ ಎಲ್ಲಾ ಚಿತ್ರರಂಗದಲ್ಲಿ ಯಶ್​​ ದೊಡ್ಡ ಇಮೇಜ್​​​​ ಸಂಪಾದಿಸಿದ್ದಾರೆ. ಇದೀಗ ಈ ಸ್ಟ್ರೈಟ್​​ ಫಾರ್ವರ್ಡ್​ ಹುಡ್ಗನ ಬಗ್ಗೆ ಮತ್ತೊಂದು ಎಕ್ಸ್​​ಕ್ಲ್ಯೂಸೀವ್ ಸುದ್ದಿಯೊಂದು ಹರಿದಾಡ್ತಿದೆ..

ಕೆಜಿಎಫ್ ರಾಕಿ ಭಾಯ್​​​ಗಿದೆ ನ್ಯಾಷನಲ್​ ಇಮೇಜ್​!

ad

ಯಶ್.. ಯಶ್.. ಯಶ್​.. ಇವತ್ತು ಕನ್ನಡ ಚಿತ್ರರಂಗದ ಪವರ್​ ಏನು ಅಂತ ಕೇಳಿದ್ರೆ ಎಲ್ಲರ ಭಾಯಲ್ಲಿ ಭರೋದು ರಾಕಿಂಗ್ ಸ್ಟಾರ್ ಯಶ್​​.. ಬೆಳ್ಳಿ ತೆರೆ ಮೇಲೆ ಅದ್ಭುತ ಚಿತ್ರವನ್ನ ತೋರಿಸಿದ ಯಶ್​​​​​ ಇಂದು ಕನ್ನಡದ ನಂಬರ್ ಒನ್​ ಸ್ಟಾರ್​.. ಅಷ್ಟೆ ಅಲ್ಲ ಕೆಜಿಎಫ್​​ನ ರಾಕಿ ಭಾಯ್​ಗೆ ನ್ಯಾಷನಲ್​ ಲೆವೆಲ್​​​ನಲ್ಲಿ ಇಮೇಜ್ ಬ್ಯೂಲ್ಡ್​ ಆಗಿದೆ..

 

ಬಿಟೌನ್​​ ಜಗತ್ತಿನಲ್ಲಿ ಕೋಟೆ ಕಟ್ಟೋಕೆ ರೆಡಿಯಾದ್ರಾ ರಾಮಾಚಾರಿ?

ಹೌದು, ಕೆಜಿಎಫ್ ಸಿನಿಮಾ ಬಂದ್ಲೇಲೆ ಯಶ್​​​ ಅಂದ್ರೆ ಯಾರು..? ಕನ್ನಡದ ಹುಡುಗನ ಪವರ್​​ ಎಂಥಾದ್ದು ಅನ್ನೋದು ಇಡೀ ಭಾರತೀಯ ಸಿನಿ ಜಗತ್ತಿಗೆ ಗೊತ್ತಾಗಿ ಹೋಗಿದೆ. ಕೆಜಿಎಫ್​ ಮೂವಿ ನೋಡಿದ ಬಾಲಿವುಡ್​ ಜಗತ್ತು ಕೂಡ ಇಂದು ಯಶ್​​ರ ಹಿಂದೆ ಬಿದ್ದಿದೆಯಂತೆ.. ಹೀಗಾಗಿ ಬಿಟೌನ್​​​ನ ದೊಡ್ಡ ಸಮುದ್ರದಲ್ಲಿ ಈಜಿ ದಡ ಸೇರೋಕೆ ಯಶ್​ ರೆಡಿಯಾಗ್ತಿದ್ದಾರೆ ಅನ್ನೋ ನಯಾ ಸುದ್ದಿಯೊಂದು ಈಗ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಕೇಳಿ ಬರ್ತಿದೆ..

ಯಶ್​​​ ಮೇಲೆ ಕಣ್ಣಿಟ್ಟಿರೋ ಬಿಟೌನ್​ ಸ್ಟಾರ್​ ಡೈಕರೆಕ್ಟರ್ ಯಾರು..?

ಕೆಜಿಎಫ್ ಸಿನಿಮಾ ಬಿಡುಗಡೆ ಬಳಿಕ ಯಶ್​ರನ್ನ ಬೇರೆ ಇಂಡಸ್ಟ್ರಿಯ ಸ್ಟಾರ್ ಡೈರೆಕ್ಟರ್ ಹುಡುಕಿಕೊಂಡು ಬರ್ತಾರೆ ಅಂತ ಎಲ್ರು ಮಾತಾಡಿಕೊಂಡಿದ್ರು. ಅದು ಈಗ ನಿಜವಾಗ್ತಿದೆ ಅನ್ನಿಸುತ್ತೆ. ಯಾಕಂದ್ರೆ ಬಾಲಿವುಡ್​​ನ ಸ್ಟಾರ್​ ಡೈರೆಕ್ಟರ್​ ಒಬ್ರು ಯಶ್​​ಗೆ ಬಿಗ್ ಆಫರ್ ಮಾಡಿದ್ದಾರೆ.. ಆ ಸ್ಟಾರ್​ ನಿರ್ದೇಶಕ ಯಾರ್​ ಗೊತ್ತಾ..? ಹೀ ಈಸ್​ ರಾಜ್​​ಕುಮಾರ್​ ಹಿರಾನಿ…

ಸೌತ್​​​ ಸ್ಟಾರ್ಸ್​ ಮೇಲೆ ಕಣ್ಣಿಟ್ಟಿದ್ದಾರೆ ರಾಜ್​ಕುಮಾರ್​ ಹಿರಾನಿ.!
ಬಿಟೌನ್​​ನಲ್ಲಿ ರೆಡಿಯಾಗಿದೆ ಯಶ್​​-ಪ್ರಭಾಸ್ ಸಿನಿಮಾ ಪ್ಲಾನ್​!
ರಾಜ್​ಕುಮಾರ್ ಹಿರಾನಿ ಅಂದ್ರೆ ಇಡೀ ಏಷ್ಯಾ ಕಂಡಕ್ಕೆ ಗೊತ್ತಿರೋ ಹೆಸ್ರು.. ಬಾಲಿವುಡ್​​ನಲ್ಲಿ ಅಮೋಘ ಸಿನಿಮಾಗಳನ್ನ ಕೊಟ್ಟಿರೋ ಸ್ಟಾರ್​​ಗೆ ಸ್ಟಾರ್​ ಡೈರೆಕ್ಟರ್​ ರಾಜ್​ಕುಮಾರ್ ಹಿರಾನಿ.. ಇಂಥಾ ನಿರ್ದೇಶಕರು ಈಗ ಸೌತ್​​ ಸ್ಟಾರ್ಸ್​ ಮೇಲೆ ಕಣ್ಣಿಟ್ಟಿದ್ದಾರಂತೆ.. ಅದು ರಾಕಿಂಗ್ ಸ್ಟಾರ್ ಯಶ್​ ಹಾಗು ರೆಬೆಲ್​ ಪ್ರಭಾಸ್​​​​​​ ಮೇಲೆ.. ಹೌದು, ಪ್ರಭಾಸ್ ಹಾಗು ಯಶ್ ಕಾಂಬಿನೇಷನ್​ನಲ್ಲಿ ಅಧ್ಬುತ ಸಿನಿಮಾ ಮಾಡೋಕೆ ಹಿರಾನಿ ಪ್ಲಾನ್ ಮಾಡಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ..

ರಾಕಿಂಗ್ ಸ್ಟಾರ್ ಯಶ್​ ಹಾಗು ಪ್ರಭಾಸ್ ಕಾಂಬಿನೇಷನ್​ ಅಂದ್ರೆ ಟಾಲಿವುಡ್​, ಸ್ಯಾಂಡಲ್​ವುಡ್​ ಮಂದಿಗೆ ದೊಡ್ಡ ವಿಷಯವೇ ಸರಿ.. ಅದ್ರಲ್ಲೂ ಪ್ರಭಾಸ್​ ಬಾಹುಬಲಿ ಸಿನಿಮಾದಿಂದ ಯಶ್​ ಕೆಜಿಎಫ್​ ಸಿನಿಮಾದಿಂದ ಇಡೀ ಭಾರತ ಚಿತ್ರರಂಗವೇ ತಮ್ಮತ್ತ ತಿರುಗಿನ ನೋಡುವಂತೆ ಮಾಡಿದ್ರು. ಈ ದೊಡ್ಡ ಇಮೇಜ್ ಇರೋ ಇಬ್ಬರು ಸ್ಟಾರ್​​ಗಳನ್ನ ಒಟ್ಟಿಗೆ ಸೇರಿಸಿ ಸಿನಿಮಾ ಮಾಡೋ ಪ್ಲಾನ್​ ಈಗ ರಾಜ್​ಕುಮಾರ್ ಹಿರಾನಿಗೆ ಬಂದಿದೆ..

ಹಿರಾನಿಯನ್ನ ಮೂರು ಭಾರಿ ಭೇಟಿ ಮಾಡಿದ್ದಾರಂತೆ ಯಶ್​..!

ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಏನ್ ಗೊತ್ತಾ..? ಕೆಜೆಎಫ್​ ಚಾಪ್ಟರ್-2ಗೆ ರೆಡಿಯಾಗ್ತಿರೋ ಯಶ್​ ಫೇಮಸ್​​ ಡೈರೆಕ್ಟರ್ ರಾಜ್​ಕುಮಾರ್​ ಹಿರಾನಿಯನ್ನ ಮೂರು ಭಾರಿ ಭೇಟಿ ಆಗಿದ್ದಾರಂತೆ.. ಮೂರು ಭಾರಿ ಹಿರಾನಿಯನ್ನ ಭೇಟಿ ಆದಾಗ್ಲು ಸಿನಿಮಾದ ಬಗ್ಗೆ ಚರ್ಚೆ ನಡೆಸಿದ್ದಾರೆ ಅಂತ ಹೇಳಲಾಗ್ತಿದೆ. ಕೆಜಿಎಫ್​-2 ಮುಗಿತಿದ್ದಂತೆ ಹಿರಾನಿ ಮೂವಿ ಮಾಡೋ ಪ್ಲಾನ್​ ಯಶ್​ ಮಾಡಿಕೊಂಡಿದ್ದಾರೆ ಅಂತ ಗಾಂಧಿನಗರದಲ್ಲಿ ಸಧ್ಯಕ್ಕೆ ಟ್ರೆಂಡಿಂಗ್​​​ನಲ್ಲಿರೋ ಸುದ್ದಿ..
ರಾಜ್​​ ಕುಮಾರ್​ ಹಿರಾನಿ ಸಿನಿಮಾಗಳನ್ನ ಮಾಡಬೇಕು ಅಂತ ಬಿಟೌನ್​ ಸ್ಟಾರ್ಸ್​​ ಮುಗಿ ಬೀಳ್ತಾರೆ.. ಸಲ್ಮಾನ್​ ಖಾನ್ ಆದಿಯಾಗಿ ಎಲ್ಲಾ ಸ್ಟಾರ್ಸ್​​​ಗೂ ರಾಜ್​ಕುಮಾರ್ ಹಿರಾನಿ ಸಿನಿಮಾಗಳಲ್ಲಿ ನಟಿಸಬೇಕು ಅಂತ ಕನಸು ಕಟ್ಟಿಕೊಂಡಿರ್ತಾರೆ. ಬಿಟೌನ್​ನಲ್ಲಿ ಇಂಥಾ ವೆದರ್​ ಇರುವಾಗ ಕನ್ನಡದ ಸ್ಟಾರ್​​ಗೆ ರಾಜ್​ಕುಮಾರ್ ಹಿರಾನಿ ಆಫರ್​ ಮಾಡಿದ್ದಾರೆ ಅಂದ್ರೆ ಅದು ಕನ್ನಡಿಗರಿಗೆ ಹಮ್ಮೆಯೇ ಸರಿ…

Sponsored :

Related Articles