ಶಾಲೆಗೆ ಬಂದ್ರು ವಿಶೇಷ ಅತಿಥಿ- ಗೆಸ್ಟ್​ ಕಂಡು ಕಂಗಾಲಾದ್ರೂ ಮಕ್ಕಳು

809
9900071610

 

ad

 ಇಂದು ಆ ಶಾಲೆಗೆ ಹೊಸ ಅತಿಥಿಯೊಬ್ಬರು ಬಂದಿದ್ರು.. ಆ ಅತಿಥಿ ನೋಡಿ ಆ ಶಾಲೆಯ ಮಕ್ಕಳಿಗೆ ಭಯ. ಇಷ್ಟಕ್ಕೂ ಮಕ್ಕಳ ಭಯಕ್ಕೆ ಕಾರಣವಾದ ಅತಿಥಿ ಯಾರು ಗೊತ್ತಾ? ಆ ಅತಿಥಿ ಮತ್ಯಾರು ಅಲ್ಲ ನಾಗರಹಾವು. ವಿಜಯಪುರದಲ್ಲಿ ಹೀಗೆ ಶಾಲೆಗೆ ವಿಷಸರ್ಪವೊಂದು ಬಂದು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಸುರಗಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾವು ಪ್ರತ್ಯಕ್ಷವಾಗಿತ್ತು. ಶಾಲಾ ಕೊಠಡಿಯಲ್ಲಿನ ಬೆಂಚ್ ಪಕ್ಕದಲ್ಲಿ ಕುಳಿತಿದ್ದ ಹಾವನ್ನು ನೋಡಿದ್ದ ವಿದ್ಯಾರ್ಥಿಗಳು ಭಯಭೀತರಾಗಿ ಶಾಲಾ ಕೊಠಡಿಯಿಂದ ಹೊರಗೆ ಓಡಿ ಹೋಗಿದ್ದಾರೆ.

ಶಾಲಾ ವಿದ್ಯಾರ್ಥಿಗಳಿಗೆ ಹಾವು ಕಚ್ಚದಂತೆ ಉಪಾಯವಾಗಿ ಹಾವವನ್ನು ಶಾಲಾ ಮುಖ್ಯ ಶಿಕ್ಷಕ ಎಸ್.ಎಸ್. ಚಿಂಚೋಳಿ ಸೆರೆ ಹಿಡಿದು ಕಾಡಿಗೆ ಬಿಟ್ಟು ಬಂದರು. ಅಂತೂ-ಇಂತೂ ನಾಗರಹಾವು ಶಾಲೆಯಿಂದ ಹೊರಹೋಗಿದ್ದಕ್ಕೆ ಮಕ್ಕಳು ನಿಟ್ಟುಸಿರು ಬಿಟ್ರು.

Sponsored :


9900071610