ಬೆಳ್ಳಂಬೆಳಗ್ಗೆ ಭ್ರಷ್ಟ ರಿಗೆ ಬಲೆ ಬೀಸಿದ ಎಸಿಬಿ! ದಾಳಿಯಲ್ಲಿ ಸಿಕ್ಕಿದ್ದೆಷ್ಟು ಗೊತ್ತಾ?!

4032
9900071610

ಇಂದು ಬೆಳ್ಳಂಬೆಳಗ್ಗೆ ಲೋಕೋಪಯೋಗಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಶಾಕ್​ ನೀಡಿದ್ದಾರೆ. ಬೆಂಗಳೂರು, ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಸೇರಿ ರಾಜ್ಯದ ಹಲವೆಡೆ ಎಸಿಬಿ ರೇಡ್​ ಮಾಡಿದೆ.

ad

ಉತ್ತರ ಕನ್ನಡ ಜಿಲ್ಲೆಯ PWD ಎಇಇ ಉದಯ್​ ಡಿ ಚಬ್ಬಿ, ಮಂಗಳೂರಿನ ಗಣಿ ಇಲಾಖೆ ಎಇ ಮಹದೇವಪ್ಪ, ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯ ಪ್ರಾಧ್ಯಾಪಕ ಕಲ್ಲಪ್ಪ ಹೆಚ್​.ಹೊಸಮನಿಯ ಮನೆ , ಕಚೇರಿಗಳ ಮೇಲೆ ದಾಳಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆ ಇಲಾಖೆ PWD ಎಇಇ ಉದಯ್​​ ಡಿ.ಛಬ್ಬಿಗೆ ಸೇರಿದ ಜೋಯ್ಡಾದ ಮನೆ, ಡಾಂಡೇಲಿಯಯಲ್ಲಿರೋ ತಾಯಿಯ ಮನೆಯಲ್ಲಿ ಪರಿಶೀಲನೆ ನಡೆದಿದೆ.

ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಇ ಮಹದೇವಪ್ಪಗೆ ಸೇರಿದ ಮಂಗಳೂರಿನ ಮನೆ,ಕಚೇರಿ, ಬೆಂಗಳೂರಿನ ಸಿದ್ದೇನಹಳ್ಳಿ,ಚಿತ್ರದುರ್ಗದ ಕಣಿವೆಯಲ್ಲಿರುವ ಮನೆಗಳಲ್ಲಿ ಎಸಿಬಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸುತ್ತಿದ್ದಾರೆ.

6 ತಿಂಗಳ ಹಿಂದೆ ಅಕ್ರಮದ ಆರೋಪದಡಿ ಕುಲಸಚಿವ ಸ್ಥಾನದಿಂದ ಕಲ್ಲಪ್ಪ ಅವರನ್ನು ರಾಜ್ಯ ಸರ್ಕಾರ ಕೆಳಗಿಳಿಸಿತ್ತು. ಇದೀಗಾ ಕಲ್ಲಪ್ಪಗೆ ಸೇರಿದ ಧಾರವಾಡದ ಶ್ರೀನಗರದಲ್ಲಿರೋ ಕಚೇರಿ,ಮನೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ

Sponsored :


9900071610