ನಿರ್ದೇಶಕರಿಗೆ ಸೂಜಿ ಚುಚ್ಚಿದ ನಟಿ ಹರಿಪ್ರಿಯ !! ಸೂಜಿದಾರ ಸಿನೇಮಾದಲ್ಲಿ ಆಗಿದ್ದೇನು ?

1619
9900071610

ಸಧ್ಯ ರಾಜ್ಯಾಧ್ಯಂತ ತೆರೆ ಕಂಡಿರುವ ಸೂಜಿದಾರ ಸಿನೇಮಾದ ನಟಿ ಹರಿಪ್ರಿಯ ನಿರ್ದೇಶಕರಿಗೇ ಸೂಜಿ ಚುಚ್ಚಿದ್ದಾರೆ. ತಾನು ನಟಿಸಿರುವ ಸೂಜಿದಾರ ಸಿನೇಮಾವೇ ಸರಿ ಇಲ್ಲ ಎಂದು ಸ್ವತಃ ನಟಿ ಹರಿಪ್ರಿಯಾರವರೇ ಹೇಳಿಕೊಂಡಿದ್ದಾರೆ.  ತಾನು ನಟಿಸಿದ ಚಿತ್ರ ಚೆನ್ನಾಗಿಲ್ಲ, ಆದ್ದರಿಂದ ನಾನು ವೀಕ್ಷಕರ ಕ್ಷಮೆ ಕೇಳುತ್ತೇನೆ ಎಂದು ಚಿತ್ರದ ನಟಿಯೇ ಹೇಳಿಕೊಂಡಿದ್ದು, ಬಹುಶ: ಕನ್ನಡ ಚಲನಚಿತ್ರದ ಇತಿಹಾಸದಲ್ಲೇ ಮೊದಲಿರಬಹುದು.

ad

ಸೂಜಿದಾರ ಚಿತ್ರದ ಕುರಿತು ತಮ್ಮ ಇನ್ ಸ್ಟಾ ಗ್ರಾಮ್ ನಲ್ಲಿ ನಟಿ ಹರಿಪ್ರಿಯ ಬರೆದುಕೊಂಡಿದ್ದಾರೆ. ಎಲ್ಲಾ ನಟ ನಟಿಯರು ತಮ್ಮ ಚಿತ್ರ ವೀಕ್ಷಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದರೆ ಹರಿಪ್ರಿಯ ಮಾತ್ರ ಚಿತ್ರ ವೀಕ್ಷಿಸಬೇಡಿ ಎಂಬರ್ಥದ ಮೆಸೇಜ್ ಕೊಟ್ಟಿದ್ದಾರೆ. ಕಳಪೆ ಚಿತ್ರ ನೀಡಿದ್ದಕ್ಕಾಗಿ ಕ್ಷಮೆ ಯಾಚಿಸಿರುವ ಹರಿಪ್ರಿಯ ಮುಂದೆ ಹೀಗಾಗದಂತೆ ಎಚ್ಚರ ವಹಿಸುವುದಾಗಿ ಮನವಿ ಮಾಡಿದ್ದಾರೆ.

ಅವರ ಇನ್ ಸ್ಟ್ರಾಗ್ರಾಂ ಮೆಸೇಜ್ ನ ಯಥಾವತ್ತು ಹೀಗಿದೆ :  ‘ಹಾಯ್, ನಾನು ಮೊದಲೇ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ಯಾವಾಗಲೂ ಸಹ ಚಿತ್ರದ ಬಗೆಗೆ ಅಭಿಮಾನಿಗಳೊಂದಿಗೆ ಮಾತನಾಡುವಾಗ ಅವರ ಮಾತು ನನ್ನನ್ನು ಚಿಂತೆಗೀಡು ಮಾಡುತ್ತದೆ. ಚಿತ್ರದಲ್ಲಿ ನನ್ನಿಂದ ಆಭಿಮಾನಿಗಳು ಹೆಚ್ಚು ನಿರೀಕ್ಷೆ ಮಾಡಿದ್ದರು. ಆದರೆ ಅವರು ನಿರೀಕ್ಷಿಸಿದ ಮಟ್ಟಿಗೆ ಚಿತ್ರವು ಮೂಡಿಬಂದಿಲ್ಲ. ಹೀಗಾಗಿ ಥಿಯೇಟರ್ ನಿಂದ ಚಿತ್ರದ ಮಧ್ಯದಲ್ಲಿಯೆ ಜನ ಎದ್ದು ಹೊರ ನಡೆದಿದ್ದಾರೆ. ಆದರೆ ನಾನು ನಿಜ ಹೇಳುತ್ತೇನೆ. ನಿರ್ದೇಶಕರು ಚಿತ್ರದ ಕಥೆಯನ್ನು ಹೇಳಿದ್ದೆ ಬೇರೆ ರೀತಿ. ನಂತರ ಅನಾವಶ್ಯಕ ಕಥೆಯನ್ನು ಬದಲಾಯಿಸಿದ್ದಾರೆ. ನನಗೂ ಚಿತ್ರ ನೋಡಿದಾಗ ನಿರಾಸೆಯಾಗಿದೆ. ಅದಕ್ಕಾಗಿ ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ. ಇನ್ನೂ ಮುಂದೆ ಎಂದಿಗೂ ಈ ರೀತಿ ರಿಪೀಟ್ ಆಗುವುದಿಲ್ಲ. ಮುಂಬರುವ ಸಿನಿಮಾಗಳಲ್ಲಿ ನಿಮಗೆ ಮನರಂಜನೆ ನೀಡುತ್ತೇನೆ. ಎಂದು ತಮ್ಮ ಇನ್ ಸ್ಟಾ ಗ್ರಾಮ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ.

View this post on Instagram

Hey ppl … Sorry … Sorry and Sorry again… My regular fan interaction Sunday turned out to be a thought provoking one instead. Today, a lot of fans and well wishers came home to take selfies as usual but they told me they felt really bad about Soojidhara. They expected to see more of me in Soojidaara and when I wasn’t seen much they had to walk out of the theatre…!!! Frankly speaking that was not the story I was told … they added some unwanted stuff… I was disappointed when I first watched the movie but kept quiet … all I wanted was to support a theatre team to make a full fledged feature film… but look what happened… I am extremely sorry from my end… will not repeat the mistake again … Will make sure I entertain you more in the coming cinemas of mine ??

A post shared by Hariprriya (@iamhariprriya) on

 

Sponsored :


9900071610