ಇಲ್ಲಿ ಸತ್ತವರನ್ನು ಮಣ್ಣು ಮಾಡುವುದಿಲ್ಲ – ಬಿತ್ತುತ್ತಾರೆ !! ಒಂದು ಮರಣ ಸಾವಿರ ಸಾವಿರ ಜನರನ್ನು ಹುಟ್ಟಿಸುತ್ತದೆ !! ಪ್ರಕಾಶ್ ರೈ ಹುಟ್ಟಿದ್ದು ಹೇಗೆ ಗೊತ್ತಾ ? !!

1407
Actor Prakash Raj Speech in Gowri day Program
Actor Prakash Raj Speech in Gowri day Program

ಇಂದು ಪುರಭವನದಲ್ಲಿ ನಡೆದ ಗೌರಿ ದಿನ ಕಾರ್ಯಕ್ರಮದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ, ತನ್ನ ಸಾಮಾಜಿಕ ಜೀವನದ ಹುಟ್ಟಿನ ಬಗ್ಗೆ ಮಾತನಾಡಿದ್ರು. ಅವರ ಮಾತಿನ ಸಾರಾಂಶ ಹೀಗಿದೆ –

 

ad

ನಮ್ಮಲ್ಲಿ ವಿಚಾರವಾದಿಗಳನ್ನು ಹೋರಾಟಗಾರರನ್ನು ಮಣ್ಣು ಮಾಡುವುದಿಲ್ಲ. ನಾವು ಮರಣ ಹೊಂದಿದ ಹೋರಾಟಗಾರರನ್ನು ಬಿತ್ತುತ್ತೇವೆ. ಕೆಲವು ಮರಣಗಳೇ ಹಾಗೆ. ಒಂದು ಮರಣ ಹಲವರನ್ನು ಸೃಷ್ಠಿಸುತ್ತೆ ಎಂದರು. ಒಬ್ಬ ವೇಮಲಾ ಮರಣ ಶೈಲಾ ರಶೀದ್, ಕನ್ನಯ್ಯರನ್ನು ಹುಟ್ಟಿಸಿತ್ತು. ಸಾವಿರಾರು ದಲಿತರ ಕೊಲೆ ಜಿಗ್ನೇಶ್ ಮೇವಾನಿಯನ್ನು ಹುಟ್ಟಿಸಿತು ಎಂದು ಪ್ರಕಾಶ್ ರೈ ಹೇಳಿದರು.

 

 

ಗೌರಿ ಕೊಲೆ ಸಾವಿರಾರು ಗೌರಿಯರನ್ನು ಹುಟ್ಟಿಸಿತು. ನನ್ನ ಹುಟ್ಟು ಕೂಡಾ ಅದೇ ರೀತಿಯದ್ದು. ಗೌರಿ ಸಾವು ನನ್ನನ್ನು ಹುಟ್ಟಿಸಿತು. ಇನ್ನು ಬದುಕಿರುವವರೆಗೆ ಹೋರಾಟ ಮುಂದುವರೆಯುತ್ತದೆ ಎಂದರು ಪ್ರಕಾಶ್ ರೈ

Sponsored :

Related Articles