ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟ ರಮೇಶ್ ಅರವಿಂದ್ !!

1946
9900071610

ಸ್ಯಾಂಡಲ್ ವುಡ್ ನಲ್ಲಿ ನಟ ರಮೇಶ್ ಅರವಿಂದ್ ಇಂದು ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಇಂದು ತಮ್ಮ ಪತ್ನಿಗೆ ರಮೇಶ್ ಧನ್ಯವಾದ ಹೇಳಿದ್ದಾರೆ.

ad

ಹೌದು ತಮ್ಮ ಮದುವೆಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ರಮೇಶ್ ‘ಈ ದಿನ, ವರುಷಗಳ ಹಿಂದೆ, ಅರ್ಚನಾ ಎಂಬ ನಿಧಿ ನನಗೆ ಸಿಕ್ಕಿತು. ನನ್ನ ಜೀವನದ ಅತಿ ದೊಡ್ಡ ‘ThankYou’ ಇವರಿಗೆ ಸಲ್ಲಬೇಕು.” ಎಂದು ಬರೆದುಕೊಂಡಿದ್ದಾರೆ.
ರಮೇಶ್ ಅರವಿಂದ್ ಹಾಗೂ ಅರ್ಚನಾ 1991 ಜುಲೈ 7 ರಂದು ವಿವಾಹ ಆಗಿದ್ದರು.

ಈ ವರ್ಷ ಅವರು 28ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ. ಈ ದಂಪತಿಗೆ ಅರ್ಜುನ್ ಎಂಬ ಒಬ್ಬ ಮಗ ಹಾಗೂ ನಿಹಾರಿಕಾ ಎಂಬ ಒಬ್ಬ ಮಗಳು ಇದ್ದಾರೆ.ಇನ್ನು ಸಿನಿಮಾ ಮತ್ತು ರಿಯಾಲಿಟಿ ಶೊ ರಮೇಶ್ ಅರವಿಂದ್ ಬ್ಯುಸಿಯಾಗಿದ್ದಾರೆ.

Sponsored :


9900071610