ಟಿಕ್​ಟಾಕ್​ಗೆ ಎಂಟ್ರಿ ಕೊಟ್ಟ ಕೊಡಗಿನ ಕುವರಿ! ಇನ್ಮುಂದೇ Iamrashmika ಅಕೌಂಟ್​ನಲ್ಲಿ ಸಿಗುತ್ತೆ ​​ರಶ್ಮಿಕಾ ಅಪ್ ಡೇಟ್ಸ್​!!

1435

ಟಿಕ್ ಟಾಕ್ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಸಹ ಎಲ್ಲರಲ್ಲಿಯೂ ಕ್ರೇಜ್ ಹುಟ್ಟಿಸಿದ ಆ್ಯಪ್ . ಜನ ಕುಂತರೂ ನಿಂತರೂ ಎನೇ ಮಾಡಿದರೂ ಅದು ಟಿಕ್ ಟಾಕ್ ಮೂಲಕ ಎಲ್ಲರಿಗೂ ಎಂಟರ್ ಟೈನ್ ಮೆಂಟ್ ಕೊಡುತ್ತದೆ. ಸದ್ಯ ಟ್ರೆಂಡ್ ಆಗಿಹೋಗಿರುವ ಈ ಟಿಕ್ ಟಾಕ್ ಲೋಕಕ್ಕೆ ಚಂದನವನದ ಚೆಲುವೆ ಒಬ್ಬರು ಎಂಟ್ರಿ ಕೊಟ್ಟಿದ್ದಾರೆ. ಅಷ್ಟಕ್ಕೂ ಯಾರಾಪ್ಪ ಅದು ಅಂತೀರಾ ಹಾಗಾದರೆ ಈ ಕೆಳಗಿನ ಸ್ಟೋರಿ ಓದಿ…

ad

ದಕ್ಷಿಣ ಭಾರತದ ಕ್ರಶ್ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್ ವುಡ್ ಕಿರಿಕ್ ಹುಡುಗಿ ರಶ್ಮಿಕ ಮಂದಣ್ಣ ಇದೀಗಾ ಟಿಕ್ ಟಾಕ್ ಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಶ್ಮಿಕ ಇಷ್ಟು ದಿನ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇದ್ದರು. ಇದೀಗ ಟಿಕ್ ಟಾಕ್ ಗೆ ಮನಸೋತು ನೂತನ ಖಾತೆಯೊಂದನ್ನು ತೆರೆದಿದ್ದು, Iamrashmika ಎಂದು ಪ್ರೋಫೈಲ್ ಕ್ರಿಯೆಟ್ ಮಾಡಿಕೊಂಡಿದ್ದಾರೆ. ಅಲ್ಲದೆ ಟಿಕ್ ಟಾಕ್ ಖಾತೆಯಲ್ಲಿ ಮೊದಲ ಬಾರಿಗೆ ತಮ್ಮ ಮುಂದಿನ ಟಾಲಿವುಡ್ ಸಿನಿಮಾ ‘ಡಿಯರ್ ಕಾಮ್ರೆಡ್’ ಬಗೆಗಿನ ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಹೌದು ಟಾಲಿವುಡ್ ಸೂಪರ್ ಜೋಡಿ ರಶ್ಮಿಕ ಮಂದಣ್ಣ ಹಾಗೂ ವಿಜಯ ದೇವರಕೊಂಡ ಅಭಿನಯದ ‘ಡಿಯರ್ ಕಾಮ್ರೆಡ್’ ಸಿನಿಮಾದ ಎಲ್ಲ ಅಪ್ ಡೇಟ್ ಗಾಗಿ ತಮ್ಮ ಟಿಕ್ ಟಾಕ್ ಖಾತೆಯನ್ನ ಫಾಲೋ ಮಾಡಿ ಎಂದು ಅಭಿಮಾನಿಗಳಿಗೆ ರಶ್ಮಿಕಾ ತಿಳಿಸಿದ್ದಾರೆ. ಇನ್ನೂ ಇದೇ ತಿಂಗಳ 26ರಂದು ರಿಲೀಸ್ ಆಗಲಿರುವ ‘ಡಿಯರ್ ಕಾಮ್ರೆಡ್’ ಚಿತ್ರದ ಅಭಿಮಾನಿಗಳಲ್ಲಿ ಬಾರೀ ನಿರೀಕ್ಷೆ ಹೆಚ್ಚಿಸಿದ್ದು, ಮತ್ತೊಮ್ಮೆ ತೆರೆ ಮೇಲೆ ಬಾಬಿ ಹಾಗೂ ಲಿಲ್ಲಿ ಜೋಡಿ ಹೇಗೆ ಮೋಡಿ ಮಾಡಲಿದೆ ಎಂದು ಕಾದು ನೋಡಬೇಕಾಗಿದೆ.

ಸದ್ಯ ರಶ್ಮಿಕ ಮಂದಣ್ಣ ಕನ್ನಡದ ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ತೆಲುಗಿನಲ್ಲಿ ಮಹೇಶ್ ಬಾಬು , ನಿತಿನ್ ಹಾಗೂ ತಮಿಳಿನಲ್ಲಿ ಕಾರ್ತಿಕ್ ಜೊತೆ ಬಣ್ಣಹಚ್ಚಲಿದ್ದು, ಇನ್ನೂ ಹಲವು ಟಾಲಿವುಡ್ , ಕಾಲಿವುಡ್ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Sponsored :

Related Articles