ಇಂದು ತೆರೆಗೆ ಪೈಲ್ವಾನ್​…! ಚಿತ್ರದ ಯಶಸ್ಸಿಗಾಗಿ ಚಾಮುಂಡೇಶ್ವರಿ ಮೊರೆ ಹೋದ ಕಿಚ್ಚ ಸುದೀಪ್…!

88

ಇಂದು ಕಿಚ್ಚ ಸುದೀಪ್ ಅಭಿನಯದ ಬಹುನೀರಿಕ್ಷಿತ ಚಿತ್ರ ಪೈಲ್ವಾನ್ ದೇಶದಾದ್ಯಂತ ತೆರೆಕಂಡಿದೆ. ಕರ್ನಾಟಕವೊಂದರಲ್ಲೆ ಸಾವಿರಕ್ಕೂ ಹೆಚ್ಚು ಥಿಯೇಟರ್​ನಲ್ಲಿ ತೆರೆಕಂಡಿರುವ ಚಿತ್ರದ ಯಶಸ್ಸಿಗಾಗಿ ನಟ ಸುದೀಪ್ ಮೈಸೂರು ಚಾಮುಂಡೇಶ್ವರಿ ಮೊರೆ ಹೋಗಿದ್ದಾರೆ.


ಬೆಳ್ಳಂಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸ್ನೇಹಿತರ ಜೊತೆ ಭೇಟಿ ನೀಡಿದ ಸುದೀಪ್, ಚಿತ್ರದ ಗೆಲುವಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಬೆಂಗಳೂರು ಹಾಗೂ ಮೈಸೂರಿನ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ.

ad

ಕನ್ನಡ, ತೆಲುಗು,ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಟ್ರೇಲರ್, ಹಾಡುಗಳು ಹಾಗೂ ಫರ್ಸ್ಟ್​ ಲುಕ್​ ಮೂಲಕವೇ ಸಖತ್ ಹೈಪ್​ ಕ್ರಿಯೇಟ್​ ಮಾಡಿತ್ತು.

Sponsored :

Related Articles