ಎಲೆಕ್ಷನ್​ ಟೈಂನಲ್ಲಿ ಉಪೇಂದ್ರ ಏನು ಮಾಡ್ತಿದ್ದಾರೆ ಗೊತ್ತಾ!

1317
9900071610

ವಿಧಾನ ಸಭೆ ಎಲೆಕ್ಷನ್​​​ ಡೇಟ್ ಅನೌನ್ಸ್ ಆಗಿದೆ. ಎಲ್ಲಾ ಪೊಲಿಟೀಶಿಯನ್ಸ್​ ಈ ಭಾರಿ ಎಲೆಕ್ಷನ್​​ನಲ್ಲಿ ಗೆಲ್ಲಲೇ ಬೇಕು ಅಂತ ಪಣ ತೊಟ್ಟಿದ್ದಾರೆ. ಆದ್ರೆ ರಿಯಲ್​ ಸ್ಟಾರ್​ ಉಪೇಂಧ್ರ ಪೊಲಿಟಿಕಲ್ ಕರಿಯರ್ ಮಾತ್ರ ಸಧ್ಯ ಭಗ್ನವಾಗಿದೆ. ಹೀಗಾಗಿ ಉಪ್ಪಿ ತಮ್ಮ ವರ್ಚಸ್ಸನ್ನ ಮತ್ತೆ ಪಡೆಯೋಕೆ ಹೊಸ ಪ್ಲಾನ್ ಒಂದನ್ನ ಮಾಡಿದ್ದಾರೆ. ಆ ಪ್ಲಾನ್​​​ ಏನು ಅನ್ನೋದು ಬಿಟಿವಿಗೆ ಎಕ್ಸ್​​ಕ್ಲ್ಯೂಸೀವ್ ಆಗಿ ಸಿಕ್ಕಿದೆ.. ಆ ಬಗ್ಗೆ ಡಿಟೈಲ್ಸ್​ ಇಲ್ಲಿದೆ ನೋಡಿ.

ad

ಕರ್ನಾಟಕ ಕುರುಕ್ಷೇತ್ರಕ್ಕೆ ಡೇಟ್​​ ಫೈನಲ್ ಆಗಿದೆ. ಇನ್ನು 46 ದಿನದಲ್ಲಿ ರಾಜ್ಯ ರಾಜಕಾರಣಕ್ಕೆ ಹೊಸ ಅಧಿಪತಿಯ ನಾಮಕರಣ ಆಗುತ್ತೆ. ಆದ್ರೆ ಈ ವರ್ಷದ ಎಲೆಕ್ಷನ್​ನಲ್ಲಿ ಕರ್ನಾಟಕದಲ್ಲಿ ಪ್ರಜಾಕೀಯ ನಡೆಸಬೇಕು ಅನ್ನೋ ಮಹದಾಸೆ ಹೊಂದಿದ್ದ ರಿಯಲ್​ ಸ್ಟಾರ್​ ಉಪೇಂದ್ರ ಕನಸು ಮಾತ್ರ ಭಗ್ನವಾಗಿದೆ. ಉಪ್ಪಿ ಕೆಪಿಜೆಪಿ ಪಕ್ಷ ಕಟ್ಟಿದ್ದೇ ತಡ. ಕೆಲವ್ರು ಈ ಭಾರಿಯ ಚುನಾವಣೆಯಲ್ಲಿ ನಿರ್ಣಾಯಕ ಪಕ್ಷ ಅಂದ್ರೆ ಅದು ಉಪ್ಪಿಯ ಕೆಪಿಜೆಪಿ ಅಂತ ಮಾತನಾಡಿಕೊಂಡಿದ್ರು. ಆದ್ರೆ ನಾಟಕೀಯ ಬೆಳವಣಿಗೆಯಲ್ಲಿ ಉಪ್ಪಿ ಕೆಪಿಜೆಪಿಯಿಂದ ಹೊರ ಬಂದಾಗಿದೆ. ಅಲ್ಲಿಗೆ ಬುದ್ದಿವಂತ ಈ ಬಾರಿಯ ಎಲೆಕ್ಷನ್​​ನಿಂದ ತೆರೆಮರೆಗೆ ಸರಿದಿದ್ದಾರೆ.

ಪಕ್ಷದಿಂದ ಹೊರಬಂದಿರೋ ಉಪ್ಪಿ ಈಗ ಹೊಸ ಪಕ್ಷ ಸ್ಥಾಪಣೆ ಮಾಡೋದಕ್ಕೂ ಟೈಮ್​​ ಇಲ್ಲ. ಹೀಗಾಗಿ ಉಪ್ಪಿ ಮಂದೇನ್​ ಮಾಡ್ತಾರೆ ಅನ್ನುವ ಕುತೂಹಲ ಸಿನಿ ಪ್ರೇಕ್ಷಕರಲ್ಲೂ ಇದೆ… ರಾಜಕಾರಣಿಗಳಲ್ಲೂ ಇದೆ. ಯಾಕಂದ್ರೆ ಸುಮ್ಮನೆ ಕೂರುವ ಜಾಯಮಾನ ಉಪ್ಪಿಯದ್ದಲ್ಲ. ಹೀಗಾಗಿ ಉಪೇಂದ್ರ ಮಂದೇನ್​ ಮಾಡ್ತಾರೆ ಅನ್ನೋದನ್ನು ಹುಡುಕ್ಕಾ ಹೋದ ಬಿಟಿವಿಗೆ ಒಂದಿಷ್ಟು ಇಂಟ್ರೆಸ್ಟಿಂಗ್​ ಡೀಟೈಲ್ಸ್​ ಸಿಕ್ಕಿದೆ. ​​
ಹೌದು ಉಪೇಂದ್ರ ನಟಿಸಿದ 48 ಸಿನಿಮಾಗಳು ಈಗಾಗ್ಲೇ ರಿಲೀಸ್​ ಆಗಿದೆ. ಉಪ್ಪಿ ರುಪಿ ಶೂಟಿಂಗ್​​ ಹಂತದಲ್ಲಿದೆ. ಇದರ ಮಧ್ಯೆ ಉಪ್ಪಿ ನಟನೆಯ 50ನೇ ಚಿತ್ರಕ್ಕೆ ತಯಾರಿ ಶುರರುವಾಗಿದೆ. ಇಂಟ್ರೆಸ್ಟಿಂಗ್​​ ವಿಷಯ ಅಂದ್ರೆ ಉಪೇಂದ್ರ ನಿರ್ದೇಶನದಲ್ಲೇ ಅವರ 50ನೇ ಸಿನಿಮಾ ಮೂಡಿ ಬರಲಿದೆ.

ಉಪ್ಪಿ ಸಿನಿಮಾ ಡೈರೆಕ್ಟ್​ ಮಾಡ್ಬೇಕು ಅನ್ನೋದು ಅವರ ಅಭಿಮಾನಿಗಳ ಬೇಡಿಕೆ. ಈಗ ಅದಕ್ಕೆ ಟೈಂ ಕೂಡಿ ಬಂದಿದೆ. ರಿಯಲ್ ಸ್ಟಾರ್​​​​​​ ತಮ್ಮ 50ನೇ ಸಿನಿಮಾವನ್ನ ತಾವೇ ಡೈರೆಕ್ಷನ್ ಮಾಡ್ತಿರೋದು ಪಕ್ಕಾ. ಈ ಸುದ್ದಿ ಉಪ್ಪಿ ಫ್ಯಾನ್ಸ್​​ಗೆ ಸಿಕ್ಕಾಪಟ್ಟೆ ಕಿಕ್​ ಕೊಡೋದು ಗ್ಯಾರಂಟಿ. ಉಪ್ಪಿ ಕೆಪಿಜೆಪಿ ಪಕ್ಷದಿಂದ ಹೊರ ಬರುತ್ತಿದ್ದಂತೆ 50ನೇ ಸಿನಿಮಾ ಮಾಡುವ ನಿರ್ಧಾರ ಮಾಡಿದ್ದಾರೆ. ಈಗಾಗ್ಲೇ ಉಪ್ಪಿ ತಲೆಯಲ್ಲಿ ಹೊಸ ಕಾನ್ಸೆಪ್ಟ್​ ಹೊಳೆದಿದೆ.ವಿಶೇಷ ಅಂದ್ರೆ ಪ್ರಜಾಕೀಯ ಮತ್ತು ರಾಜಕೀಯ ಕಾನ್ಸೆಪ್ಟ್​ ಅಡಿಯಲ್ಲಿ ಈ ಸಿನಿಮಾದ ಕಥೆ ತಯಾರಾಗಲಿದೆ.
ಕೆಪಿಜೆಪಿಯಿಂದ ಹೊರ ಬಂದಿದ್ದಕ್ಕೆ ಯಾರಿಗೂ ಗೊತ್ತಿಲ್ಲದ ಕಾರಣ ಹೀಗೆ ಹಲವು ರೋಚಕ ಸಂಗತಿಗಳು ಸಿನಿಮಾದಲ್ಲಿರುತ್ತೆ ಎನ್ನಲಾಗಿದೆ. ಉಪ್ಪಿ ನಿರ್ದೇಶಿಸಿದ್ದ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದ್ರೆ ಇದು ರಿಯಲ್​ ಇನ್ಸಿಡೆಂಟ್​ ಬೇಸ್ಡ್​ ಸಿನಿಮಾ ಅನ್ನಿಸಿಕೊಳ್ಳಲಿದೆ.

ವಿಶೇಷ ಅಂದ್ರೆ ಉಪ್ಪಿ 50ನೇ ಚಿತ್ರ ಅಂಥಿಂತ ಸಿನಿಮಾ ಆಗಿರೋದಿಲ್ಲ. ಈ ಸಿನಿಮಾದಲ್ಲಿ ಕೆಲವೊಂದು ರಿಯಲ್​ ವಿಡಿಯೋ ದೃಶ್ಯಗಳು ಕೂಡ ಕಾಣಿಸಿಕೊಳ್ಳಲಿದೆ. ಕೆಪಿಜೆಪಿ ಪಕ್ಷ ಅನೌನ್ಸ್​​ಮೆಂಟ್​, ಅಭ್ಯರ್ಥಿಗಳಿಗಾಗಿ ನಡೆದ ಸಂದರ್ಶನ ಇದನ್ನೆಲ್ಲ ಬಳಸುವ ಸಾಧ್ಯತೆ ಇದೆ. ಆದ್ರೆ ಉಪ್ಪಿ ಇದನ್ನು ಅಫೀಶಿಯಲ್​ ಆಗಿ ಕನ್ಪರ್ಮ್​ ಮಾಡಿಲ್ಲ. ಉಪ್ಪಿಗೆ ಈ ಭಾರಿಯ ವಿಧಾನಸಭ ಚುನಾವಣೆಯಲ್ಲಿ ಸ್ಪರ್ಧಿಸೋಕೆ ಆಗದಿದ್ರೂ ಕೂಡ ಈ ಸಿನಿಮಾದ ಮೂಲಕ ಅವರ ಉದ್ದೇಶವನ್ನು ಜನರಿಗೆ ತಲುಪಿಸೋ ಪ್ರಯತ್ನ ನಡೆಯಲಿದೆ. ಇದು ಉಪ್ಪಿಯ ಮುಂದಿನ ಪ್ರಜಾಕೀಯ ಭವಿಷ್ಯಕ್ಕೆ ಹೆಲ್ಪ್​ ಆಗಲಿದೆ ಅನ್ನೋದರಲ್ಲಿ ಎರಡು ಮಾತಿಲ್ಲ.

Sponsored :


9900071610