ಮಮತಾ ಬ್ಯಾನರ್ಜಿ ವಿರುದ್ದ ನಟ ವಿವೇಕ್ ಓಬೇರಾಯ್ ಗರಂ !!

1248

ಬಾಲಿವುಡ್ ನಟ ವಿವೇಕ್ ಒಬೆರಾಯ್ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರ ವಿರುದ್ಧ ಇಂದು ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ.

ad

ಪ್ರಿಯಾಂಕಾ ಶರ್ಮಾ ಎಂಬುವವರು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರ ಎಡಿಟೆಡ್​ ಫೋಟೋ ಪೋಸ್ಟ್ ಮಾಡುವ ಮೂಲಕ ಬಂಧನಕ್ಕೀಡಾಗಿದ್ದರು. ಆದರಿಂದು ಜಾಮೀನಿನ ಮೇಲೆ ಹೊರಬಂದಿರೋ ಪ್ರಿಯಾಂಕಾ ಶರ್ಮಾ ಮತ್ತು ಬಿಜೆಪಿ ನಾಯಕ ತೇಜಿಂದರ್ ಬಗ್ಗಾ ಅವರನ್ನು ನಿನ್ನೆ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿರುವ ವಿಚಾರವಾಗಿ ವಿವೇಕ್ ಒಬೆರಾಯ್ ಟ್ವೀಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ದೀದಿಯಂತಹ ಗೌರವಾನ್ವಿತ ಮಹಿಳೆ, ಸದ್ದಾಂ ಹುಸೇನ್ ರೀತಿ ಯಾಕೆ ವರ್ತಿಸುತ್ತಿದ್ದಾರೆ? ಎಂದು ನನಗೆ ಅರ್ಥವಾಗುತ್ತಿಲ್ಲ. ವಿಪರ್ಯಾಸವೆಂದರೆ ಸರ್ವಾಧಿಕಾರಿಯಂತೆ ದೀದಿಯಿಂದಲೇ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಮೊದಲು ಪ್ರಿಯಾಂಕಾ ಶರ್ಮಾ, ಮತ್ತೀಗ ತೇಜಿಂದರ್ ಬಗ್ಗಾ. ಈ ದೀದಿಗಿರಿ ಹೆಚ್ಚು ದಿನಗಳ ಕಾಲ ನಡೆಯಲ್ಲ. #SaveBengalSaveDemocracy #FreeTajinderBagga ಎಂದು ವಿವೇಕ್ ಓಬೆರಾಯ್ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

 

Sponsored :

Related Articles