ಸ್ಯಾಂಡಲವುಡ್​​ನಲ್ಲಿ ಮತ್ತೊಬ್ಬ ನಟಿ ಬದುಕು ಬೀದಿಗೆ- ಪೊಲೀಸ್ ಠಾಣೆಗೆ ಗಂಡನ ವಿರುದ್ಧ ದೂರು ಕೊಟ್ಟಿದ್ಯಾಕೆ ಗೊತ್ತಾ?

4269
Actress Chaitra Complaint Against her Husband For Harassment.
Actress Chaitra Complaint Against her Husband For Harassment.

ಸ್ಯಾಂಡಲ್​ವುಡ್​ನ ಮತ್ತೊಬ್ಬ ನಟಿ ಬಾಳಲ್ಲಿ ಬಿರುಗಾಳಿ ಎದ್ದಿದ್ದು, ಪತಿಯ ಕಿರುಕುಳ ತಾಳಲಾರದೇ ನಟಿಮಣಿಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ad

ಖುಷಿ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದ ನಟಿ ಚೈತ್ರ ಹೀಗೆ ಸಮಸ್ಯೆಗೊಳಗಾದ ನಟಿಯಾಗಿದ್ದು, ನ್ಯಾಯಕೊಡಿಸುವಂತೆ ಆಗ್ರಹಿಸಿ ಚೈತ್ರ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಹಲವು ಚಿತ್ರದಲ್ಲಿ ನಟಿಸಿದ್ದ ಚೈತ್ರ 2006 ರಲ್ಲಿ ಉದ್ಯಮಿಯಾಗಿರುವ ಪೋತರಾಜ್​ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೇ ಚೈತ್ರ ನಟಿಯಾಗಿದ್ದರಿಂದ ಆರಂಭದಿಂದಲೂ ಆಕೆಯ ಮೇಲೆ ಸಂದೇಹ ಹೊಂದಿದ್ದ ಪೋತರಾಜ್​ ಆಕೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೇ ಆಕೆಯ ಮೇಲೆ ಡೌಟ್​ ಇದ್ದಿದ್ದರಿಂದ ಚೈತ್ರ ಹೋದಲೆಲ್ಲ ಹಿಂಬಾಲಿಸಲು ಗನ್​ಮ್ಯಾನ್​ ನೇಮಿಸಿದ್ದರು ಎನ್ನಲಾಗಿದೆ.

ಇನ್ನು ಚೈತ್ರಾ ಹಾಗೂ ಪೋತ್​ರಾಜ್​ಗೆ ಇಬ್ಬರು ಮಕ್ಕಳಿದ್ದು, ಇಬ್ಬರು ಮಕ್ಕಳಾದ ಚೈತ್ರ ಜೊತೆ ಪೋತರಾಜ್​ ಯಾವುದೇ ಸಂಬಂಧ ಕೂಡ ಹೊಂದಿರಲಿಲ್ಲ ಎನ್ನಲಾಗಿದೆ. ಅಲ್ಲದೇ ಪೋತರಾಜ್​​ ಗೆ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಚೈತ್ರಾ ಆರೋಪಿಸಿದ್ದಾರೆ.  ಅಲ್ಲದೇ ಹಲವಾರು ಭಾರಿ ಪೋತರಾಜ್​​ ಚೈತ್ರಾ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಹೀಗಾಗಿ ನ್ಯಾಯಕೊಡಿಸಿ ಎಂದು ಚೈತ್ರಾ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲವುಡ್​​​ನಲ್ಲಿ ಮತ್ತೊಬ್ಬ ನಟಿಯ ಬದುಕು ಬೀದಿಗೆ ಬಿದ್ದಂತಾಗಿದೆ.

Sponsored :

Related Articles