ಕಾಸ್ಟಿಂಗ್​​ ಕೌಚ್​​ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ನಟಿ ಯಾರು ಗೊತ್ತಾ?!

7021

ಕೆಲ ದಿನಗಳಿಂದ ದೇಶದಾದ್ಯಂತ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಕಾಸ್ಟಿಂಗ್​ ಕೌಚ್​ ಬಗೆಗಿನ ಚರ್ಚೆ ಮುಂದುವರಿದ ಭಾಗವಾಗಿ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಲೈಂಗಿಕ ಶೋಷಣೆ ಹೆಚ್ಚುತ್ತಿದೆ ಎಂದು ಆರೋಪಿಸಿ ನಟಿಯೊಬ್ಬರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.

ಚಿತ್ರೋದ್ಯಮದಲ್ಲಿ ಅವಕಾಶ ಕೇಳಿಕೊಂಡು ಬರುವ ಹೊಸ ನಟ-ನಟಿಯರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಅಲ್ಲದೇ ತೆಲುಗು ಇಂಡಸ್ಡ್ರಿಯಲ್ಲಿ ಶೋಷಣೆ ಎಲ್ಲೆ ಮೀರಿದೆ ಎಂದು ಆರೋಪಿಸಿರುವ ನಟಿ ಶ್ರೀರೆಡ್ಡಿ ಹೈದ್ರಾಬಾದ್​ನ ಫಿಲ್ಮ್​ ನಗರದಲ್ಲಿರುವ ತೆಲುಗು ಫಿಲ್ಮ್​ ಚೆಂಬರ್​ ಎದುರು ನಡುರಸ್ತೆಯಲ್ಲೇ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದಾರೆ. ಸಲ್ವಾರ್‌ ಉಡುಪು ಧರಿಸಿ ಛೇಂಬರ್‌ ಎದುರು ಬಂದಿದ್ದ ಶ್ರೀರೆಡ್ಡಿ ಮಾಧ್ಯಮಗಳ ಮುಂದೆ ದಿಢೀರನೆ ಉಡುಪು ಕಳಚಿದ್ದಾರೆ. ಅಲ್ಲದೇ ಕಾಸ್ಟಿಂಗ್‌ ಕೌಚ್‌ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯಲು ನನಗೆ ತೋಚುತ್ತಿರುವುದು ಇದೊಂದೇ ಮಾರ್ಗ ಎಂದು ಶ್ರೀರೆಡ್ಡಿ ಹೇಳಿಕೊಂಡಿದ್ದಾರೆ.

ad

ತಮ್ಮ ಈ ಕಠಿಣವಾದ ನಿರ್ಧಾರಕ್ಕೆ ಕಾರಣವೇನೆಂದು ವಿವರವಾಗಿ ಹೇಳಿರುವ ಶ್ರೀರೆಡ್ಡಿ ಅನೇಕ ನಿರ್ಮಾಪಕರು, ನಿರ್ದೇಶಕರು ನನ್ನನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ. ಮೂರು ಸಿನಿಮಾಗಳಲ್ಲಿ ನಟಿಸಿದ್ದರೂ ಇನ್ನೂ ಮೂವಿ ಆರ್ಟಿಸ್ಟ್‌ ಅಸೋಸಿಯೇಷನ್‌ ಸದಸ್ಯತ್ವ ಸಿಕ್ಕಿಲ್ಲ. ಸಿನಿಮಾಗಳಲ್ಲಿ ನಟಿಸಬೇಕೆಂದರೆ ನನ್ನ ನಗ್ನ ಚಿತ್ರಗಳು ಹಾಗೂ ವಿಡಿಯೋ ಬೇಕೆಂದು ಅನೇ ನಿರ್ಮಾಪಕರು ಹಾಗೂ ನಿರ್ದೇಶಕರು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ. ತೆಲುಗು ಇಂಡಸ್ಟ್ರಿಯಲ್ಲಿ ಈ ರೀತಿಯ ದುರ್ಬಳಕೆ ಹೆಚ್ಚಿದೆ ಎಂದು ಶ್ರೀರೆಡ್ಡಿ ಆರೋಪಿಸಿದ್ದಾರೆ.

Sponsored :

Related Articles