ಪೈಲ್ವಾನ್ ಚಿತ್ರಕ್ಕೆ ಪುತ್ರಿ ಹಾಗೂ ಪತ್ನಿ ರಿಯಾಕ್ಷನ್ ಬಗ್ಗೆ ಕಿಚ್ಚ ಸುದೀಪ್ ಏನಂದ್ರು ಗೊತ್ತಾ?!

1357

ಕಿಚ್ಚ ಸುದೀಪ್ ಅಭಿನಯದ ಬಹು ನೀರಿಕ್ಷಿತ ಚಿತ್ರ ಪೈಲ್ವಾನ್ ಇಂದು ರಾಜ್ಯಾದ್ಯಂತ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಲ್ಲದೆ ಕಿಚ್ಚ ಸುದೀಪ್ ಎರಡು ವರ್ಷಗಳ ಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಿದ್ದು, ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಇದೇ ವೇಳೆ ಚಿತ್ರ ವೀಕ್ಷಿಸಿದ ಕಿಚ್ಚ ಮಗಳು ಸ್ವಾನಿ ಭಾವುಕರಾಗಿದ್ದಾರೆ. ಅಷ್ಟಕ್ಕೂ ಸುದೀಪ್ ಮಗಳು ಸಾನ್ವಿ ಅಂತಿದ್ದೇಕೆ ಗೊತ್ತಾ?

ad

ಹೌದು ಇಡೀ ರಾಜ್ಯಾದ್ಯಂತ ಪೈಲ್ವಾನ್ ಚಿತ್ರ ಅಬ್ಬರಿಸುತ್ತಿದೆ. ಅಲ್ಲದೆ ಮೊದಲ ದಿನವೇ ಸುದೀಪ್ ಕುಟುಂಬ ಸಮೇತರಾಗಿ ಬಂದು ಸಿನಿಮಾ ವೀಕ್ಷಿಸಿದ್ದಾರೆ. ಇನ್ನೂ ಸಿನಿಮಾ ನೋಡುತ್ತಿರುವಾಗಲೇ ನನ್ನ ಮಗಳು ಮತ್ತು ಪತ್ನಿ ಇಬ್ಬರು ಕಣ್ಣೀರು ಹಾಕಿದ್ದಾರೆ. ಸಾಮಾನ್ಯವಾಗಿ ಯಾರ ಅಪ್ಪ ಆದರೂ ಬೇರೆಯವರ ಕೈಯಿಂದ ಹೊಡೆಸಿಕೊಂಡು ರಕ್ತ ಸುರಿಯುತ್ತಿರುವುದನ್ನು ನೋಡುವುದಕ್ಕೆ ಯಾವ ಮಕ್ಕಳೆ ಆದರೂ ಇಷ್ಟ ಪಡುವುದಿಲ್ಲ. ನನಗೆ ಸಿನಿಮಾದಲ್ಲಿ ಹೊಡೆಯುವ ದೃಶ್ಯ ನೋಡಿ ನನ್ನ ಮಗಳು ಕಣ್ಣೀರು ಹಾಕಿದ್ದಾರೆ. ಅಲ್ಲದೆ ನನ್ನ ಮಗಳು ಗಟ್ಟಿಯಾಗಿ ನನ್ನನ್ನು ತಬ್ಬಿಕೊಂಡು I’AM PROUND OF YOU ಎಂದ್ರು , ಜೊತೆಗೆ ನನ್ನ ಪತ್ನಿ ಕೂಡ ಬಹಳ ಬಾವುಕರಾದರು ಎಂದು ಕಿಚ್ಚ ಶೇರ್ ಮಾಡಿಕೊಂಡಿದ್ದಾರೆ.

ಪೈಲ್ವಾನ್ ಚಿತ್ರದ ಮೊದಲ ಶೋ ನೋಡಿದ ಬಳಿಕ ನಿರ್ದೇಶಕ ಕೃಷ್ಣ ಮತ್ತು ನಿರ್ಮಾಪಕಿ ಸ್ವಪ್ನ ಕೃಷ್ಣ ಕೂಡ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಸದ್ಯ ಚಿತ್ರದ ಮೊದಲ ದಿನದ ರೆಸ್ಪಾನ್ಸ್ ನೋಡಿದ ಬಳಿಕ ಇನ್ನು ಮುಂದೆ ಅಭಿಮಾನಿಗಳು ಕಿಚ್ಚ ಅಂತ ಕರೆಯೋದಾ ಅಥವಾ ಬಾದ್ ಶಾ ಅಂತ ಕರೆಯ ಬೇಕಾ ಎಂದು ಕೇಳಿದ ಪ್ರಶ್ನೆಗೆ ಅಭಿಮಾನಿಗಳು ಪ್ರೀತಿಯಿಂದ ನನ್ನನ್ನು ಹುಚ್ಚ ಎಂದು ಕರೆದರೆ ಸಾಕು ಎಂದು ಪ್ರತಿಕ್ರಿಯಿಸಿದ್ದಾರೆ.

Sponsored :

Related Articles