ಅಗ್ನಿಸಾಕ್ಷಿ ಧಾರವಾಹಿಯ ಗುಳಿಕೆನ್ನೆ ಚೆಲುವ ಸಿದ್ದಾರ್ಥ್ ಗೆ ಏನಾಯ್ತು ? ಆಸ್ಟ್ರೇಲಿಯಾ ಹೋದವರು ವಾಪಸ್ ಬರೋದಿಲ್ಲವೇಕೆ ?

4790
9900071610

ಕಿರುತೆರೆಯ ಗುಳಿಕೆನ್ನೆ ಚೆಲುವ ಖಾಸಗಿ ವಾಹಿನಿಯ ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಸಿದ್ಧಾರ್ಥ ಎಂಬ ಹೆಸರಿನಿಂದ ಖ್ಯಾತಿಯನ್ನು ಪಡೆದಿರುವ ವಿಜಯ ಸೂರ್ಯ ಕೆಲವು ದಿನಗಳ ಹಿಂದಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ಎಲ್ಲರಿಗು ಗೊತ್ತಿರುವ ಸುದ್ದಿಯೆ. ಆದರೆ ಇದೀಗ ವಿಜಯ್ ಸೂರ್ಯ ಮತ್ತೆ ಸುದ್ದಿಯಲ್ಲಿದ್ದಾರೆ ಅದೇನಪ್ಪ ಅಂದ್ರೆ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಸಿದ್ದಾರ್ಥ್ ಇನ್ಮುಂದೆ ಧಾರಾವಾಹಿಯಲ್ಲಿ ಇರುವುದಿಲ್ಲವಂತೆ. ಹೀಗಂತ ನಟ ವಿಜಯ್ ಸೂರ್ಯ ಅವರು ಬಹಿರಂಗ ಪಡಿಸಿ ತನ್ನ ನೆಚ್ಚಿನ ಪ್ರೇಕ್ಷಕರಿಗೆ ಶಾಕ್ ನೀಡಿದ್ದಾರೆ.

ad

ವಿಜಯ್ ಮಾತನ್ನು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅದರಲ್ಲೂ ಮಹಿಳಾ ಅಭಿಮಾನಿಗಳ ಹಾಟ್ ಪೇವರಿಟ್ ಆಗಿದ್ದ ಸಿದ್ದಾರ್ಥ್ ಅಗ್ನಿಸಾಕ್ಷಿಯಲ್ಲಿ ಕಾಣಿಸಿಕೊಳ್ಳುವುದಿಲ್ಲವಾದರೆ ಧಾರಾವಾಹಿ ಯಾಕೆ ನೋಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಸಿದ್ದಾರ್ಥ್ ದಿಢೀರನೆ ಹೊರ ಬರಲು ಅಸಲಿ ಕಾರಣ ಅವರ ಪಾತ್ರ ಧಾರಾವಾಹಿನಿಯಲ್ಲಿ ಕೊನೆಯಾಗಿದೆಯಂತೆ. ಧಾರಾವಾಹಿಯಲ್ಲಿ ಸಿದ್ದಾರ್ಥ್ ಈಗಾಗಲೆ ಆಸ್ಟ್ರೇಲಿಯಾಗೆ ಹೋಗಲು ಸಿದ್ದರಾಗಿದ್ದು. ಸಿದ್ದಾರ್ಥ್ ಆಸ್ಟ್ರೇಲಿಯಾಗೆ ಹೊರಟ ನಂತರ ಅವರ ಪಾತ್ರ ಅಲ್ಲಿಗೆ ಕೊನೆಯಾಗಲಿದೆ.

ಐದು ವರ್ಷದ ಅಗ್ರಿಮೆಂಟ್ ಕೊನೆಯಾಗಿ,  ಅಗ್ನಿಸಾಕ್ಷಿ ಧಾರಾವಾಹಿ ಪ್ರಾರಂಭವಾಗಿ ಐದು ವರ್ಷಗಳು ಆಗಿವೆ. ಸಿದ್ದಾರ್ಥ್ ಐದು ವರ್ಷದ ಅಗ್ರಿಮೆಂಟ್ ಕೂಡ ಮುಕ್ತಾಯವಾಗಿದೆಯಂತೆ. ಅಲ್ಲದೆ ವಿಜಯ್ ಗೆ ಕೊಂಚ ಬ್ರೇಕ್ ಕೂಡ ಬೇಕಂತೆ. ಹಾಗಾಗಿ ಈ ಎಲ್ಲಾ ಕಾರಣಗಳಿಗೆ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ದಾರಾವಾಹಿಯಲ್ಲಿ ಸಿದ್ದಾರ್ಥ್ ಪಾತ್ರ ಕೂಡ ಮುಕ್ತಾಯವಾಗಿರುವುದರಿಂದ  ಅವರು ತಮ್ಮ ಅಗ್ನಿಸಾಕ್ಷಿ ಸೀರಿಯಲ್ ನಿಂದ ಹೊರಬರಲು ನಿರ್ಧರಿಸಿದ್ದು ಇನ್ಮುಂದೆ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ. ಈಗಾಗಲೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ವಿಜಯ್ ಈಗ ಲಕ್ನೋ ಟು ಮುಂಬೈ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

Sponsored :


9900071610