ರಿವೀಲ್ ಆಯ್ತು ಪೈಲ್ವಾನ್ ಬೆಡಗಿ ರೋಮಾನ್ಸ್​ ಫೋಟೋಸ್..! ಇಷ್ಟಕ್ಕೂ ಆಕಾಂಕ್ಷಾ ಜೊತೆಗಿರೋದು ಯಾರು ಗೊತ್ತಾ?!

2567

ಸ್ಯಾಂಡಲ್ ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ನೆನ್ನೆಯಷ್ಟೇ ರಾಜ್ಯಾದ್ಯಂತ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನೂ ಚಿತ್ರ ನೋಡಿದ ಅಭಿಮಾನಿಗಳು ಪೈಲ್ವಾನ್ ಚಿತ್ರದ ನಟಿ ಆಕಾಂಕ್ಷಾ ಸಿಂಗ್ ಲುಕ್ ಗೆ ಫುಲ್ ಫಿದಾ ಆಗಿದ್ದಾರೆ. ಇದೇ ವೇಳೆ ನಟಿ ಆಕಾಂಕ್ಷರ ಕೆಲವು ರೋಮ್ಯಾಂಟಿಕ್ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ಈ ಫೋಟೋಗಳು ಆಕಾಂಕ್ಷ ಆನ್ ಸ್ಕ್ರೀನ್ ನಲ್ಲಿ ಮಾತ್ರವಲ್ಲದೆ ಆಫ್ ಸ್ಕ್ರೀನ್ ನಲ್ಲಿಯು ಸಿಕ್ಕಾಪಟ್ಟೆ ರೋಮ್ಯಾಂಟಿಕ್ ಎಂಬುವುದನ್ನು ಬಿಂಬಿಸುತ್ತಿದೆ. ಅಷ್ಟಕ್ಕೂ ಪೈಲ್ವಾನ್ ಬೆಡಗಿ ಆಕಾಂಕ್ಷ ರೋಮ್ಯಾನ್ಸ್ ಮಾಡುತ್ತಿರೋದು ಯಾರ ಜೊತೆ ಗೊತ್ತಾ?

ad

ಪೈಲ್ವಾನ್ ಚಿತ್ರದ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿರುವ ನಟಿ ಆಕಾಂಕ್ಷ ಸಿಂಗ್ ರೋಮ್ಯಾಂಟಿಕ್ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇನ್ನೂ ಈ ಫೋಟೋಗಳಲ್ಲಿ ಆಕಾಂಕ್ಷಾ ವ್ಯಕ್ತಿಯೊಂದಿಗೆ ರೋಮಾನ್ಸ್  ಮಾಡುತ್ತಿರುವ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ನಿಜಕ್ಕೂ ನಿಮಗೆ ಆ ವ್ಯಕ್ತಿ ಯಾರು ಎಂಬ ಕುತೂಹಲ ಹೆಚ್ಚಾಗುತ್ತಿರಬಹುದು. ಹೌದು ನಟಿ ಆಕಾಂಕ್ಷ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವುದು ಮತ್ತಾರ ಜೊತೆಯಲ್ಲೂ ಅಲ್ಲ ತಮ್ಮ ಕೈ ಹಿಡಿದ ಗಂಡ ಕುನಾಲ್ ಎಂಬುವವರ ಜೊತೆ.

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಕುನಾಲ್​ ಸೇನ್ ಮತ್ತು​ ನಟಿ ಆಕಾಂಕ್ಷಾ ಸಿಂಗ್ 2014ರಲ್ಲಿ ಹಸೆಮಣೆ ಏರಿ ದಾಂಪತ್ಯ ಜೀವನ ಆರಂಭಿಸಿದರು. ಮೂಲತಃ ರಾಜಸ್ಥಾನದ ಜೈಪುರದಲ್ಲಿ ಹುಟ್ಟಿ ಸಿನಿರಂಗಕ್ಕೆ ಪ್ರವೇಶಿಸಬೇಕೆಂಬ ಆಸೆಯಿಂದ ಮುಂಬೈಗೆ ಬಂದ ಆಕಾಂಕ್ಷಾ 2012ರಲ್ಲಿ ಹಿಂದಿಯ ಕಲರ್ಸ್​ ಟಿವಿಯಲ್ಲಿ ‘ನಾ ಬೋಲೆ ತುಮ್​ ನಾ ಮೈನೆ ಕುಚ್​ ಕಹಾ’ ಧಾರಾವಾಹಿ ಮೂಲಕ ಬಣ್ಣ ಹಚ್ಚಿದರು. ಆದರೆ ಅದ್ಯಾಕೋ ಆಕಾಂಕ್ಷಾಗೆ ವಿವಾಹವಾದ ನಂತರ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಸಿಕ್ಕಿತು. ಮೊದಲಿಗೆ ಹಿಂದಿಯ ‘ಬದ್ರಿನಾತ್​ ಕಿ ದುಲ್ಹನಿಯಾ’ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಸಿಕೊಂಡಿದ್ದರು ಆಕಾಂಕ್ಷಾ ಬಳಿಕ ಮೊದಲು 2017ರಲ್ಲಿ ತೆಲುಗಿನ ‘ಮಳ್ಳಿ ರಾವಾ’ ಸಿನಿಮಾದ ಮೂಲಕ ನಾಯಕಿಯಾಗಿ ಸಿನಿ ವೃತ್ತಿ ಆರಂಭಿಸಿದರು.

ಇನ್ನೂ ಸಿನಿಮಾದಲ್ಲಿ ನಟಿಸಬೇಕು ಎಂಬ ಆಕಾಂಕ್ಷಾ ಆಸೆಗೆ ಯಾವುದೇ ಅಡ್ಡಿಪಡಿಸದೇ ಪತಿ ಕುನಾಲ್ ಆಕಾಂಕ್ಷಾರ ಸಿನಿ ಜರ್ನಿಗೆ ಸಪೋರ್ಟ್​ ಮಾಡುತ್ತಿದ್ದಾರೆ. ಟಾಲಿವುಡ್​ನಲ್ಲಿ ಇತ್ತೀಚೆಗೆ ತೆರೆಕಂಡ ‘ದೇವದಾಸ್​’ ಸಿನಿಮಾದಲ್ಲಿ ನಾಗಾರ್ಜುನಗೆ ನಾಯಕಿಯಾಗಿ ಆಕಾಂಕ್ಷಾ ಕಾಣಿಸಿಕೊಂಡಿದ್ದರು. ಇದೀಗಾ ಸ್ಯಾಂಡಲ್ ವುಡ್ ನಲ್ಲಿ ಕಿಚ್ಚ ಸುದೀಪ್ ಜೊತೆ ಪೈಲ್ವಾನ್ ಚಿತ್ರದಲ್ಲಿ ಜೋಡಿಯಾಗುವ ಮೂಲಕ ಕನ್ನಡಿಗರ ಪ್ರೀತಿಗೆ ಪಾತ್ರರಾಗುತ್ತಿದ್ದಾರೆ.

 

Sponsored :

Related Articles