ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ “ಪ್ರಗತಿ”ಯಲ್ಲಿ !! ಫೀಲ್ಡಿಗಿಳಿದ ಸಾಹಿತಿ – ಹೋರಾಟಗಾರರು !!

2274
9900071610

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂದು ಪ್ರಗತಿಪರ ಚಿಂತಕರು ಪ್ರಯತ್ನ ನಡೆಸುತ್ತಿದ್ದಾರೆ.

ad

ಹಿರಿಯ ಚಿಂತಕ ಎ.ಕೆ ಸುಬ್ಬಯ್ಯ, ಕೋಮುಸೌಹಾರ್ದ ವೇದಿಕೆಯ ಕೆ.ಎಲ್. ಅಶೋಕ್, ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ್ ಅವರನ್ನೊಳಗೊಂಡ ಪ್ರಗತಿಪರ ಹೋರಾಟಗಾರರ ನಿಯೋಗ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿತು. ಸಿಎಂ ಜೊತೆ ಕೆಲಕಾಲ ಮಾತುಕತೆ ನಡೆಸಿದ ನಿಯೋಗದ ಸದಸ್ಯರು ರಾಜ್ಯ ರಾಜಕೀಯ ಕುರಿತು ಮಾತುಕತೆ ನಡೆಸಿದರು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಗತ್ಯ‌ವಿದೆ. ಚುನಾವಣಾ ಪೂರ್ವ ಮೈತ್ರಿ ಕುರಿತು ಚಿಂತನೆ ನಡೆಸುವಂತೆ ಮನವಿ ಮಾಡಿದೆ. ಸಿಎಂ ಸಿದ್ದರಾಮಯ್ಯ ಜೊತೆ ಪ್ರಗತಿಪರರ ಸಭೆ ಬಳಿಕ ಮಾತನಾಡಿದ ಹಿರಿಯ ಚಿಂತಕ ಎ.ಕೆ. ಸುಬ್ಬಯ್ಯ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾರ್ಯತಂತ್ರ ರೂಪಿಸಬೇಕು‌ ಜಾತ್ಯಾತೀತ ಪಕ್ಷಗಳು ಒಂದಾಗಿ ಈ ಕಾರ್ಯತಂತ್ರ ರೂಪಿಸಬೇಕು‌ ಮತಗಳು ವಿಭಜನೆಯಾಗಿ ಬಿಜೆಪಿಗೆ ಲಾಭವಾಗಬಾರದು ಈ ನಿಟ್ಟಿನಲ್ಲಿ ದೇವೇಗೌಡರ ಜೊತೆಯೂ ಚರ್ಚಿಸಲಾಗಿದೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸಲಾಗಿದೆ ಎಂದರು.

ಕಳೆದ ಎರಡು ದಿನಗಳ ಹಿಂದೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರನ್ನು ಭೇಟಿಯಾಗಿ ಚುನಾವಣಾ ಪೂರ್ವ ಮೈತ್ರಿಗೆ ಮನವಿ ಮಾಡಿದ್ದ ಪ್ರಗತಿಪರರ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವಂತೆ ಮನವಿ ಮಾಡಿದೆ. ಮೊದಲು ಕಾಂಗ್ರೆಸ್ ಬಳಿ‌ ಹೋಗಿ ಎನ್ನುವ ದೇವೇಗೌಡರ ಸಲಹೆ ಮೇರೆಗೆ ಸಿಎಂ ಭೇಟಿಯಾಗಿದ್ದು,ಮೈತ್ರಿ ಮಾತುಕತೆ ನಡೆಸಿದೆ. ಆದರೆ, ಈಗಾಗಲೇ ಮೈತ್ರಿ ವಿಚಾರವನ್ನು ಕುಮಾರಸ್ವಾಮಿ ತಿರಸ್ಕಾರ ಮಾಡಿದ್ದು, ಕೈ ಜೊತೆ ಹೊಂದಾಣಿಕೆ ಇಲ್ಲ ಎಂದಿದ್ದಾರೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ ಎಂದು ಹೇಳಿದ್ದರೂ ಪ್ರಗತಿಪರರು ತಮ್ಮ ಪ್ರಯತ್ನ‌ ಮುಂದುವರೆಸಿದ್ದಾರೆ. ಅತಿಯಾದ ಆತ್ಮವಿಶ್ವಾಸ ಬಿಜೆಪಿಗೆ ರಹದಾರಿಯಾಗಬಾರದು ಎಂದು ಅವರು ಮನವಿ ಮಾಡಿದ್ದಾರೆ.

Sponsored :


9900071610