ಅಮಿತ್ ಶಾ ಉತ್ತರ ಕನ್ನಡದಲ್ಲಿ ಎಲ್ಲೆಲ್ಲಿ ಹೋದ್ರು? ಏನೇನ್ ಮಾಡಿದ್ರು? ಸಂಪೂರ್ಣ ವಿವರ ನಿಮಗಾಗಿ..

573

ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಮೂರು ದಿನಗಳ ದಂಡಯಾತ್ರೆ ಕೈಗೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಉತ್ತರಕನ್ನಡ ಜಿಲ್ಲೆಗೆ ಭೇಟಿ ನೀಡಿದ್ರು. ಇದೇ ಮೊದಲ ಬಾರಿಗೆ ಜಿಲ್ಲೆಗೆ ಅಮಿತ್ ಷಾ ಭೇಟಿ ನೀಡಿದ್ದುಚುನಾವಣೆಯ ದೃಷ್ಟಿಯಿಂದ ಈ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಹೊನ್ನಾವರದ ಗಲಭೆ ವೇಳೆ ಮೃತಪಟ್ಟಯುವಕ ಪರೇಶ್ ಮೇಸ್ತಾ ಮನೆಗೆ ಭೇಟಿ ನೀಡಿದ ಅಮಿತ್ ಷಾ ಬಳಿಕ ಕಾರ್ಯಕರ್ತರ ನವಶಕ್ತಿ ಕಾರ್ಯಕ್ರಮದಲ್ಲಿಭಾಗವಹಿಸಬೇಕಿತ್ತು. ಆದ್ರೆ ಅನಾರೋಗ್ಯದ ನಿಮಿತ್ತ ಅಮಿತ್ ಷಾ ಹೊನ್ನಾವರದಿಂದಲೇ ವಾಪಸ್ಸಾಗಿದ್ದು ಕಾರ್ಯಕರ್ತರಲ್ಲಿಬೇಸರ ಮೂಡಿಸಿದೆ.   

ಮುಂಬರುವ ವಿಧಾನಸಭಾ ಚುನಾವಣೆಯ ಕಾವು ದಿನೇ ದಿನೇ ಹೆಚ್ಚುತ್ತಿರುವಂತೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿಯಲ್ಲಿ ತೊಡಗಿವೆ. ಇನ್ನು ರಾಜ್ಯದ ಚುನಾವಣೆ ಮೇಲೆ ಹದ್ದಿನ ಕಣ್ಣಿರಿಸಿರುವ ಬಿಜೆಪಿಯ ಪ್ರಮುಖ ಮುಖಂಡರು ರಾಜ್ಯ ಪ್ರವಾಸ ಕೈಗೊಂಡಿದ್ದು ಕಳೆದೆರಡು ದಿನಗಳಿಂದ ರಾಜ್ಯದ ಕರಾವಳಿ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಉತ್ತರಕನ್ನಡ ಜಿಲ್ಲೆಗೆ ಭೇಟಿ‌ ನೀಡಿದ್ರು. ಉಡುಪಿಯಿಂದ ನೇರವಾಗಿ ಹೊನ್ನಾವರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅಮಿತ್ ಷಾ ಡಿಸೆಂಬರ್ 6 ರಂದು ಪಟ್ಟಣದಲ್ಲಿ ನಡೆದ ಗಲಭೆಯಲ್ಲಿ ಮೃತಪಟ್ಟ ಯುವಕ ಪರೇಶ್ ಮೇಸ್ತಾ ಮನೆಗೆ ಭೇಟಿ ನೀಡಿದ್ರು.ನಿಗದಿಯಂತೆ 2 ಗಂಟೆಗೆ ಆಗಮಿಸಬೇಕಿದ್ದ ಅಮಿತ್ ಷಾ ಅನಾರೋಗ್ಯದ ನಿಮಿತ್ತ ಎರಡು ತಾಸು ತಡವಾಗಿ ಆಗಮಿಸಿದ್ರು. 4ಗಂಟೆ ವೇಳೆಗೆ ಮೃತ ಪರೇಶನ ಮನೆಗೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಈ ವೇಳೆ ಪರೇಶನ ಮನೆಯವರು ತಮ್ಮ ಮಗನ ಸಾವಿನ ಪ್ರಕರಣವನ್ನ ಸಿಬಿಐಗೆ ವಹಿಸಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲವಾಗಿದ್ದು ಘಟನೆನಡೆದು 70ದಿನಗಳು ಕಳೆದ್ರೂ ಇನ್ನೂ ತನಿಖೆಯೇ ಪ್ರಾರಂಭವಾಗಿಲ್ಲ. ಹೀಗಾಗಿ ಪ್ರಕರಣವನ್ನ ಎನ್‌ಐಎ ತನಿಖೆಗೆ ನೀಡುವಂತೆ ಮನವಿ‌ ಮಾಡಿದ್ರು. ಆದ್ರೆ ಎನ್‌ಐಎ ತನಿಖೆಗೆ ಒಪ್ಪದ ಅಮಿತ್ ಷಾ ಉನ್ನತ ಅಧಿಕಾರಿಗಳಿಂದ ಸಿಬಿಐ ತನಿಖೆಯನ್ನ ಆದಷ್ಟು ಬೇಗ ಪ್ರಾರಂಭಿಸೋದಾಗಿ ಭರವಸೆಯನ್ನ ನೀಡಿದ್ದಾರೆ.

ad

 

ಮೃತ ಪರೇಶನ ಮನೆಗೆ ಭೇಟಿ ನೀಡಿದ್ದ ಅಮಿತ್ ಷಾ ಕುಟುಂಬಸ್ಥರೊಂದಿಗೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಈ ವೇಳೆ ಪರೇಶನ ಸಾವಿಗೆ ಸೂಕ್ತ ನ್ಯಾಯ ಒದಗಿಸುವಂತೆ ಕುಟುಂಬಸ್ಥರು ಅಮಿತ್ ಷಾ ಗೆ ಮನವಿ ನೀಡಿದರು. ಇನ್ನು ಪರೇಶನ ಮನೆಯಲ್ಲಿ ಕೆಲಕಾಲ ಕುಳಿತಿದ್ದ ಅಮಿತ್ ಷಾ ಮನೆಯವರು ನೀಡಿದ ಎಳನೀರು ಕುಡಿದರು. ಅಮಿತ್ ಷಾ ಭೇಟಿ ವೇಳೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಶಾಸಕ ಕಾಗೇರಿ ಸಾಥ್ ನೀಡಿದ್ರು. ಇನ್ನು ಹೊನ್ನಾವರ ಭೇಟಿ ಬಳಿಕ ಅಮಿತ್ ಷಾ ಕುಮಟಾದಲ್ಲಿ ಆಯೋಜನೆಯಾಗಿದ್ದ ಕಾರ್ಯಕರ್ತರ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸಬೇಕಿತ್ತು. ಆದ್ರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಮಿತ್ ಷಾ ಹೊನ್ನಾವರದಿಂದಲೇ ವಾಪಸ್ ತೆರಳಿದ್ದು ಕುಮಟಾ ಕಾರ್ಯಕರ್ತರ ಸಮಾವೇಶಕ್ಕೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ತೆರಳಿದರು. ಇನ್ನು ನವಶಕ್ತಿ ಕಾರ್ಯಕ್ರಮ ಆರಂಭವಾದ ಬಳಿಕ ಸಂಸದೆ ಶೋಭಾ ಕರಂದ್ಲಾಜೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅನಾರೋಗ್ಯದಿಂದ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ ಬಳಿಕ ಬೇಸರಗೊಂಡ ಸಾಕಷ್ಟು ಮಂದಿ ಕಾರ್ಯಕರ್ತರು ಕಾರ್ಯಕ್ರಮದ ಮದ್ಯೆಯೇ ಎದ್ದು ಹೊರನಡೆದ ಘಟನೆ ಸಹ ನಡೆಯಿತು.

ಒಟ್ಟಾರೇ ಜಿಲ್ಲೆಗೆ ಅಮಿತ್ ಷಾ ಭೇಟಿ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಲಿದೆ ಎನ್ನುವ ನಿರೀಕ್ಷೆಗಳಿದ್ದು ಆದ್ರೆ ಅಮಿತ್ ಷಾ ಅನಾರೋಗ್ಯದಿಂದ ವಾಪಸ್ಸಾಗಿದ್ದು ಕಾರ್ಯಕರ್ತರಿಗೆ ಬೇಸರ ಮೂಡಿಸಿದ್ದಂತೂ ನಿಜ. ಈ ನಿಟ್ಟಿನಲ್ಲಿ ಮುಂದೆ ಬಿಜೆಪಿ ನಾಯಕರುಗಳು ಮತ್ತೆ ಸ್ಟಾರ್ ಮುಖಂಡರನ್ನ ಕರೆಯಿಸಿ ಪ್ರಚಾರ ಕೈಗೊಳ್ತಾರಾ ಅನ್ನೋದನ್ನ ಕಾದು ನೋಡಬೇಕು….

ವರದಿ : ಉದಯ ಬರ್ಗಿ ಬಿಟಿವಿ ನ್ಯೂಸ್ ಕಾರವಾರ

Sponsored :

Related Articles