ರೈತನ ಕಣ್ಣೀರು ಒರೆಸಿದ ಬಿಗ್​ ಬಿ ಅಮಿತಾಬ್​​ ಬಚ್ಚನ್​​! 2100 ಬಡ ರೈತರ ಸಾಲ ತೀರಿಸಿ ಮಾನವೀಯತೆ ಮೆರೆದ ಬಚ್ಚನ್​ ಕುಟುಂಬ!!

2886

ಬಾಲಿವುಡ್​ನ ಬಿಗ್-ಬಿ ಅಮಿತಾಬ್ ಬಚ್ಚನ್ ಕೇವಲ ಅಭಿನಯದ ಮೂಲಕ ಮಾತ್ರವಲ್ಲ, ತಮ್ಮ ಮಾನವೀಯತೆಯ ಕೆಲಸಗಳಿಂದಲೂ ಬಿಗ್​ ಬಿ ಎನ್ನಿಸಿದ್ದಾರೆ. ಹೌದು ಬಿಗ್ ಬಿ ಅಮಿತಾಬ್​​ ಬಚ್ಚನ್​,  ಸುಮಾರು 2,100 ಬಡ ರೈತರ ಸಾಲ ತೀರಿಸುವ ಮೂಲಕ ಅನ್ನದಾತರ ಕಣ್ಣಿರು ಒರೆಸಿದ್ದು, ಬಾಲಿವುಡ್​ ಹಾಗೂ ಸಾರ್ವಜನಿಕರಿಂದ ಶ್ಲಾಘನೆಗೆ ಪಾತ್ರವಾಗಿದೆ.

ad

ಬಾಲಿವುಡ್ ಮೆಘಾ ಸ್ಟಾರ್ ಅಮಿತಾಬ್​​ ಬಚ್ಚನ್​,  ಸಮಾಜದಲ್ಲಿ ಕೇವಲ ಒಬ್ಬ ಉನ್ನತ ನಟನಾಗಿ ಮಾತ್ರವಲ್ಲದೆ ಅವರು ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದು. ಇದೀಗಾ ಅಂತಹದ್ದೇ ಒಂದು ಸಮಾಜಮುಖಿ ಕೆಲಸ ಮಾಡಿ ಎಲ್ಲೆಡೆ ಪ್ರಶಂಸೆ ಸಂಪಾದಿಸಿದ್ದಾರೆ.

ಬಿಗ್-ಬಿ ಅಮಿತಾಬ್ ಬಚ್ಚನ್ ಬಿಹಾರ ರಾಜ್ಯದ ಸುಮಾರು 2,100 ಬಡ ರೈತರ ಸಾಲ ತೀರಿಸಿದ್ದಾರೆ. ಇನ್ನು ‘ಬಿಗ್​​​​​ ಬಿ’ಯ ಈ ಕಾರ್ಯಕ್ಕೆ ಮಗ ಅಭಿಷೇಕ್​​​ ಬಚ್ಚನ್​​​ ಹಾಗೂ ಮಗಳು ಶ್ವೇತಾ ಸಾಥ್​​​​ ಕೊಟ್ಟಿದ್ದಾರೆ.ಈ ಬಗ್ಗೆ ಅಮಿತಾಬ್ ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದು, ಜೊತೆಗೆ ಮಗ ಅಭಿಷೇಕ್ ಹಾಗೂ ಮಗಳು ಶ್ವೇತಾ ಜೊತೆಯಿರುವ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅಲ್ಲದೇ, ನಾನು  ಮಾತು ನೀಡಿದ್ದನ್ನು ಪೂರ್ಣಗೊಳಿಸಿದ್ದೇನೆ. ಸಾಲ ಹೊಂದಿದ 2,100 ರೈತರ ಸಾಲವನ್ನು ಮರು ಪಾವತಿಸಲಾಗಿದೆ. ಇನ್ನು ಕೆಲವರಿಗೆ ವೈಯಕ್ತಿಕವಾಗಿ ಕರೆದು ಶ್ವೇತಾ ಹಾಗೂ ಅಭಿಷೇಕ್ ಅವರ ಮೂಲಕ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ರೈತರ ಹೊರೆ ತಗ್ಗಿಸುವ ಆಸೆಯಿಂದ ಈ ಕೆಲಸಕ್ಕೆ ಮುಂದಾದೆ. ಕೆಲಸ ಪೂರ್ಣವಾದಾಗ ತುಂಬ ನೆಮ್ಮದಿ ಸಿಕ್ಕಿತು ಎಂದು ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

ಈ ಹಿಂದೆಯೂ ಕೂಡಾ (ಕಳೆದ ವರ್ಷ ನವೆಂಬರ್ ತಿಂಗಳಲ್ಲಿ) ಅಮಿತಾಬ್ ಬಚ್ಚನ್ ಉತ್ತರ ಪ್ರದೇಶದ 1,398 ರೈತರ 3.99 ಕೋಟಿ ರೂಪಾಯಿ ಸಾಲವನ್ನು ಮರುಪಾವತಿ ಮಾಡಿದ್ರು. ಅದಕ್ಕೂ ಮೊದ್ಲು 350 ರೈತರ ಸಾಲವನ್ನು ಪಾವತಿಸಿದ್ರು.

Sponsored :

Related Articles