ಮಗನನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ನಿರೂಪಕನ ಪತ್ನಿ- ಸಾವನ್ನಪ್ಪಿದ ಚಂದನ ಕುಟುಂಬದ ದುರಂತ ಕತೆ!

4231

 

ad

ಪತಿಯ ಸಾವಿನಿಂದ ಮನನೊಂದ ಪತ್ನಿ, ತನ್ನ ಪುತ್ರನನ್ನು ಕೊಲೆಗೈಯ್ದು ತಾನು ಆತ್ಮಹತ್ಯೆಗೆ ಯತ್ನಿಸಿದ ಹೃದಯ ವಿದ್ರಾವಕ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಇತ್ತೀಚಿಗೆ ಅಪಘಾತದಲ್ಲಿ ಸಾವನ್ನಪ್ಪಿದ ಕಿರುತೆರೆ ನಿರೂಪಕ ಚಂದನ್​ ಅಲಿಯಾಸ್​ ಚಂದ್ರಶೇಖರ್ ಪತ್ನಿ ಮೀನಾ ಎಂಬಾಕೆಯೇ ಈ ರೀತಿ ಕೃತ್ಯ ಎಸಗಿದ್ದಾರೆ. ಮೇ 24 ರಂದು ದಾವಣಗೆರೆ ಬಳಿ ನಡೆದ ಅಪಘಾತದಲ್ಲಿ ಚಂದನ್​ ಸಾವನ್ನಪ್ಪಿದ್ದರು. ಇದರಿಂದ ನೊಂದ ಮೀನಾ ಈ ಕೃತ್ಯ ಎಸಗಿದ್ದಾರೆ. ಇಂದು ಬೆಳಗ್ಗೆ ಶಾಲೆಗೆ ತೆರಳುವ ಸಿದ್ಧತೆಯಲ್ಲಿದ್ದ 12 ವರ್ಷದ ಪುತ್ರನನ್ನು ರೂಮಿಗೆ ಕರೆದೊಯ್ದ ಮೀನಾ ಮನೆಯಲ್ಲಿದ್ದ ಚಾಕುದಿಂದ ಮಗನ ಕತ್ತು ಕತ್ತರಿಸಿ ಹತ್ಯೆ ಮಾಡಿದ್ದಾನೆ.

 

ತೀವ್ರ ರಕ್ತಸ್ರಾವದಿಂದ ಮಗ ತುಷಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಗನನ್ನು ಕೊಂದ ಬಳಿಕ ಟಾಯ್ಲೇಟ್​ ಕ್ಲೀನಿಂಗ್ ಆ್ಯಸಿಡ್​ ಸೇವಿಸಿ ಮೀನಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್​ಗೆ ದಾಖಲಿಸಲಾಗಿದೆ.
ಕಳೆದ 14 ವರ್ಷದ ಹಿಂದೆ ಮೀನಾ ಅಲಿಯಾಸ್ ವೀಣಾ ಜೊತೆಗೆ ಚಂದನ ವಿವಾಹವಾಗಿತ್ತು. ಆರ್ಥಿಕವಾಗಿಯೂ ಸಾಕಷ್ಟು ನೆಮ್ಮದಿಯಾಗಿದ್ದ ಚಂದನ್​​ ಕುಟುಂಬಕ್ಕೆ ಆತನ ಸಾವು ಸಹಿಸಲಾರದ ಆಘಾತವಾಗಿತ್ತು. ಇದೇ ನೋವಿನಲ್ಲಿ ಚಂದನ ಪತ್ನಿ ಈ ರೀತಿ ಕೃತ್ಯ ಎಸಗಿದ್ದಾರೆ ಎನ್ನಲಾಗ್ತಿದೆ. ಇನ್ನು ಮುದ್ದು ತುಷಾರ ಸಾವಿನಲ್ಲೂ ಚಂದನ ಕುಟುಂಬ ಸಾರ್ಥಕತೆ ಮೆರೆದಿದ್ದು, ಆತನ ಕಣ್ಣುಗಳನ್ನು ದಾನ ಮಾಡಿದೆ

 

Sponsored :

Related Articles