ನನಗೆ ವಿವಾಹಿತ ವ್ಯಕ್ತಿಯೊಂದಿಗೆ ಸಂಬಂಧವಿತ್ತು! ಪುಸ್ತಕದಲ್ಲಿ ಸ್ಫೋಟಕ ಸಂಗತಿ ಬಿಚ್ಚಿಟ್ಟ ನಟಿ!!

5894

ಸಿನಿಮಾ ನಟ-ನಟಿಯರ ಬದುಕು ಯಾವಾಗಲೂ ನಿಗೂಢವೇ. ಆದರೆ ಈ ನಟಿ ಮಾತ್ರ  ತಮ್ಮ ವೈಯಕ್ತಿಕ ಬದುಕನ್ನು ತೆರೆದ ಪುಸ್ತಕದಂತೆ ಓದುಗರ ಮುಂದಿಡುವ ಮೂಲಕ ಸುದ್ದಿಯಾಗಿದ್ದಾರೆ.

ad

ಹೌದು ನಟಿ, ಗಾಯಕಿ ಆಂಡ್ರಿಯಾ ಜೆರೆಮಿಯಾ ತಾವು ಬದುಕಿನಲ್ಲಿ ವಿವಾಹಿತ ವ್ಯಕ್ತಿಯೊಬ್ಬನೊಂದಿಗೆ ಸಂಬಂಧ ಹೊಂದಿದ್ದೇ ಎಂಬುದನ್ನು ಮುಕ್ತವಾಗಿ ಹೇಳಿಕೊಂಡಿದ್ದು, ಬ್ರೋಕನ್ ವಿಂಗ್ ಪುಸ್ತಕದಲ್ಲಿ ಸ್ಪೋಟಕ ಸತ್ಯ ಸಂಗತಿಗಳನ್ನ ಅನಾವರಣ ಮಾಡಿದ್ದಾರೆ.  ಈ ಪುಸ್ತಕ ಬರೆಯಲು ಕಳೆದ ಒಂದು ವರ್ಷದಿಂದ ಸಿನಿಮಾ ರಂಗದಿಂದ ದೂರವಾಗಿದ್ದ ಹಾಟ್ ಬ್ಯೂಟಿ ಆಂಡ್ರಿಯಾ ಇದೀಗಾ ಇಡಿದ ಕೆಲಸ ಪೂರ್ಣ ಗೊಳಿಸಿ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಿದ್ದಾರೆ.

ಕಾಲಿವುಡ್ ನಟ ಧನುಷ್ ಅಭಿನಯದ ‘ವಡ ಚೆನ್ನೈ’ ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯಿಸಿರುವ ಆಂಡ್ರಿಯಾ ಬ್ರೋಕನ್ ವಿಂಗ್ ಪುಸ್ತಕದ ಮೂಲಕ ಸಿನಿರಂಗವೇ ನಿಬ್ಬೆರಗಾಗಿ ತನ್ನತ್ತ ನೋಡುವ ಹಾಗೆ ಮಾಡಿದ್ದಾರೆ.ಆ ಪುಸ್ತಕದಲ್ಲಿ ಇರುವ ಶಾಕಿಂಗ್ ವಿಷಯವಾದ್ರು ಏನು ಗೊತ್ತಾ.? ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಈ ನಟಿ ತನಗೆ ಸಂಬಂಧಪಟ್ಟ ಹಲವು ಸತ್ಯ ಘಟನೆಗಳನ್ನ ಬಹಿರಂಗಪಡಿಸಿದ್ದು, ತನಗೆ ವಿವಾಹಿತ ಪುರುಷನ ಜೊತೆ ಅಫೇರ್ ಇತ್ತು ಎಂಬ ಸ್ಪೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.

ತನ್ನ ಅದ್ಭುತ ಧ್ವನಿಯಿಂದ ಮೋಡಿ ಮಾಡಿರುವ ಈಕೆ, ವಿವಾಹಿತ ವ್ಯಕ್ತಿಯೊಬ್ಬನನ್ನು ಪ್ರೀತಿಸಿ. ಆತ ನೀಡುತ್ತಿದ್ದ ದೈಹಿಕ ಹಾಗೂ ಮಾನಸಿಕ ಚಿತ್ರ ಹಿಂಸೆಯಿಂದ ನೊಂದಿದ್ದಾರೆ. ಬಳಿಕ ಈ ಖಿನ್ನತೆಯಿಂದ ಹೊರಬರಲು ಆಯುರ್ವೇಧಿಕ್ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಆಂಡ್ರಿಯಾ, ಈ ಭೀಕರ ನೋವಿನಿಂದ ಹೊರಬರಲು ‘ಬ್ರೋಕನ್ ವಿಂಗ್’ ಪುಸ್ತಕ ಬರೆದಿದ್ದಾರಂತೆ.

ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಕವನ ಸಂಕಲನ ‘ಬ್ರೋಕನ್ ವಿಂಗ್’ ಮುಖಪುಟವನ್ನು ಪೋಸ್ಟ್ ಮಾಡಿ ನನ್ನ ಭಾವನೆಗಳನ್ನ ಬರವಣಿಗೆಯ ಮೂಲಕ ವ್ಯಕ್ತಪಡೆಸಿದ್ದೇನೆ. ಇಂತಹ ವಿಚಾರಗಳನ್ನ ಹೇಳಿಕೊಳ್ಳಲು ಸಾಕಷ್ಟು ಧೈರ್ಯ ಬೇಕು ಎಂದು ಬರೆದುಕೊಂಡಿದ್ದಾರೆ.

Sponsored :

Related Articles