ಸ್ಯಾಂಡಲವುಡ್​​ನಲ್ಲಿ ಮತ್ತೊಂದು ಸ್ಟಾರ್ ಕಲ್ಯಾಣ- ಸಪ್ತಪದಿ ತುಳಿದ ಚಿರುಸರ್ಜಾ ಮತ್ತು ಮೇಘನಾ ರಾಜ್​ !

636

ಸ್ಯಾಂಡಲ್ವುಡ್ ನ ತಾರಾ ಜೋಡಿ ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ..ಇವತ್ತು ಪಕ್ಕಾ ಹಿಂದು ಸಂಪ್ರದಾಯದಂತೆ ಈ ತಾರಾ ಜೋಡಿ ಮದುವೆ ಆಗಿದ್ದಾರೆ.ಹಾಗಿದ್ರೆ ಚಿರು ಮೇಘನಾ ಮದುವೆ ಹೇಗಾಯ್ತು.?ಮದುವೆಗೆ ಯಾರೆಲ್ಲಾ ಬಂದಿದ್ರು.?ಇಲ್ಲಿದೆ ನೋಡಿ ಈ ಬಗ್ಗೆ ಸ್ಪೆಷಲ್ ರಿಪೋರ್ಟ್..

ಚಂದನವನದ ಕ್ಯೂಟ್ ಕಪಲ್ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತಿಚೆಗಷ್ಟೇ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದ ಈ ಜೋಡಿ ಇವತ್ತು ಹಿಂದು ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ. ಹೌದು ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮದುವೆ ಇಂದು ನಡೆದಿದ್ದು,ಪಕ್ಕಾ ಹಿಂದು ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ ನಲ್ಲಿ 10.30 ರ ಮಿಥುನ ಲಗ್ನದಲ್ಲಿ ನಟ ಚಿರು ಸರ್ಜಾ ಮೇಘನಾ ರಾಜ್ ಗೆ ಮಾಂಗಲ್ಯಧಾರಣೆ ಮಾಡೋ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ವೆಂಕಟೇಶ್ವರ ಪದ್ಮಾವತಿ ಕಾನ್ಸೆಪ್ಟ್ ನ ಮದುವೆ ಮಂಟಪದಲ್ಲಿ ಚಿರು ಮೇಘನಾ ಮದುವೆ ನಡೆದಿದೆ. ವಧು ಮೇಘನಾ ವರಮಹಾಲಕ್ಷ್ಮೀಯ ಕ್ರೀಮ್ ಮತ್ತು ಗೋಲ್ಡ್,ಗ್ರೀನ್ ಬಾರ್ಡರ್ ರೇಷ್ಮೆಸೀರೆ ಧರಿಸಿದ್ರೆ.ವರ ಚಿರು ಪಂಚೆ ಶಲ್ಯದಲ್ಲಿ ನೂತನ ವಧುವರರಾಗಿ ಮಿಂಚಿದ್ರು.

ad

ಈ ಅದ್ದೂರಿ ಮದುವೆಗೆ ಹಿರಿಯನಟ ಶ್ರೀನಾಥ್,ಪುನೀತ್ ರಾಜ್ ಕುಮಾರ್,ಪ್ರಪ್ರಜ್ವಲ್ ದೇವ್ ರಾಜ್ ಪನ್ನಗಾಭರಣ ಫ್ಯಾಮಿಲಿ,ಭಾರತಿ ವಿಷ್ಟುವರ್ಧನ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ರು.ವಿಶೇಷ ಅಂದ್ರೆ ಅಭಿನಯ ಶಾರದೆ ಜಯಂತಿ ವೀಲ್ ಚೇರ್ ನಲ್ಲೇ ಬಂದು ಚಿರು ಮೇಘನಾ ಜೋಡಿಗೆ ಶುಭ ಹಾರೈಸಿದ್ರು… ಸಂಜೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲೇ ಅದ್ದೂರಿಯಾದ ಚಿರು ಮೇಘನಾ ಜೋಡಿಯ ಆರತಕ್ಷತೆ ಕಾರ್ಯಕ್ರಮ ನಡೆಯಿತು.ಮಂಟಪ ಪೂರ್ಣ ಬಿಳಿ ಹೊಗಳಿಂದ ಅಲಂಕಾರಸಿದ್ದು.ನಟಿ ಮೇಘನಾ ಕಾಸ್ಟ್ಯೂಮ್ ಡಿಸೈನರ್ ಇಂಚರ ರೆಡಿ ಮಾಡಿರೋ ಬಟ್ಟೆಯನ್ನ ಧರಿಸಿದ್ರೆ,ಚಿರು ಪರೇಷಿಲಾಂಭ ರೆಡಿ ಮಾಡಿರೋ ಸೂಟ್ ನಲ್ಲಿ ಮಿಂಚಿದ್ರು.
ಇನ್ನೂ ಚಿರು ಮೇಘನಾರ ಮೆಗಾ ರಿಸೆಪ್ಷನ್ ನಲ್ಲಿ ಸ್ಯಾಂಡಲ್ ವುಡ್ ಸೇರಿದಂತೆ ಸಿನಿ ಇಂಡಸ್ಟ್ರಿಯ ಸಾಕಷ್ಟು ಗಣ್ಯಾತಿ ಗಣ್ಯರು ಆಗಮಿಸಿದ್ರು.ಒಟ್ಟಿನಲ್ಲಿ ನವ ಜೀವನಕ್ಕೆ ಕಾಲಿಟ್ಟ ಚಿರು ಮೇಘನಾ ಮದುವೆ ಅದ್ದೂರಿಯಾಗಿ ನಡೆದಿದ್ದು. ಮೆಗಾ ಮದುವೆಗೆ ಇಡೀ ಚಿತ್ರರಂಗದ ಗಣ್ಯರು ಸಾಕ್ಷಿಯಾಗಿದ್ದಾರೆ.

Sponsored :

Related Articles